ETV Bharat / bharat

ಮಹಾರಾಷ್ಟ್ರದಲ್ಲಿ ಲಾಕ್​​ಡೌನ್​ ವಿಸ್ತರಣೆ: ಪಾಸಿಟಿವಿಟಿ ದರ, ಆಕ್ಸಿಜನ್​ ಬೆಡ್​ ಆಧರಿಸಿ ನಿರ್ಬಂಧ ಸಡಿಲಿಕೆ - ಮಹಾರಾಷ್ಟ್ರ ಕೋವಿಡ್​

ಮಹಾರಾಷ್ಟ್ರದಲ್ಲಿ ಜೂನ್ 15 ರವರೆಗೆ ಲಾಕ್​​ಡೌನ್ ವಿಸ್ತರಿಸಲಾಗಿದೆ. ಜಿಲ್ಲೆಗಳಲ್ಲಿನ ಕೋವಿಡ್​ ಪಾಸಿಟಿವಿಟಿ ದರ ಹಾಗೂ ಆಮ್ಲಜನಕ ಹಾಸಿಗೆಗಳನ್ನು ಆಧರಿಸಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

Maharashtra extends lockdown in state till June 15
ಜೂ.15ರ ವರೆಗೆ ಮಹಾರಾಷ್ಟ್ರದಲ್ಲಿ ಲಾಕ್​​ಡೌನ್​ ವಿಸ್ತರಣೆ
author img

By

Published : May 31, 2021, 6:53 AM IST

ಮುಂಬೈ (ಮಹಾರಾಷ್ಟ್ರ): ಕೋವಿಡ್​ ನಿಯಂತ್ರಿಸಲು ರಾಜ್ಯದಲ್ಲಿ ಹೇರಲಾಗಿರುವ ಲಾಕ್​ಡೌನ್​ನನ್ನು ಮತ್ತೆ 15 ದಿನಗಳ ವರೆಗೆ ವಿಸ್ತರಿಸಿ (Lockdown extension) ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

  • You have co-operated with me so far, and I am sure you will continue to do so for your family and friends.

    If we work together the impending third wave can be stopped in its tracks.

    Jai Hind, Jai Maharashtra!

    — CMO Maharashtra (@CMOMaharashtra) May 30, 2021 " class="align-text-top noRightClick twitterSection" data=" ">

ಜೂನ್ 15 ರವರೆಗೆ ಲಾಕ್​​ಡೌನ್(Lockdown) ಜಾರಿಯಲ್ಲಿರುತ್ತದೆ. ಆದರೆ ಜಿಲ್ಲೆಗಳಲ್ಲಿನ ಕೋವಿಡ್​ ಪಾಸಿಟಿವಿಟಿ ದರ ಹಾಗೂ ಆಮ್ಲಜನಕ ಹಾಸಿಗೆಗಳನ್ನು ಆಧರಿಸಿ ವಿನಾಯಿತಿ ನೀಡಲಾಗುವುದು ಎಂದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೊರೊನಾ ಪಾಸಿಟಿವಿಟಿ ರೇಟ್​ ಶೇ.10ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಾಗೂ ಆಕ್ಸಿಜನ್​ ಬೆಡ್​ ಲಭ್ಯತೆಯು ಶೇ. 40 ಕ್ಕಿಂತ ಕಡಿಮೆಯಿದ್ದರೆ, ಅಂತಹ ಜಿಲ್ಲೆಗಳಿಗೆ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ. ಈ ಜಿಲ್ಲೆಗಳಲ್ಲಿ ಅಗತ್ಯ ಸರಕುಗಳು ಮತ್ತು ಸೇವೆಗಳಲ್ಲಿ ತೊಡಗಿರುವ ಎಲ್ಲಾ ಅಂಗಡಿಗಳು - ಸಂಸ್ಥೆಗಳು ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಬೆಳಗ್ಗೆ 7 ರಿಂದ 11 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.

ಇದನ್ನೂ ಓದಿ: ಕರುನಾಡಿಗೆ ಅನ್​ಲಾಕ್ ಪ್ಲಾನ್ ರೂಪಿಸುತ್ತಿರುವ ಸರ್ಕಾರ!

ಶೇ. 20 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ(Positivity rate) ಮತ್ತು ಶೇ. 75 ಕ್ಕಿಂತ ಹೆಚ್ಚು ಆಮ್ಲಜನಕ ಹಾಸಿಗೆಗಳನ್ನು ಹೊಂದಿರುವ ಜಿಲ್ಲೆಗಳ ಗಡಿಗಳನ್ನು ಮುಚ್ಚಲಾಗುತ್ತದೆ. ಈ ಜಿಲ್ಲೆಗಳಿಗೆ ಯಾವುದೇ ವ್ಯಕ್ತಿಗೆ ಪ್ರವೇಶಿಸಲು ಅಥವಾ ನಿರ್ಗಮಿಸಲು ಅನುಮತಿಸುವುದಿಲ್ಲ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು.

ಪ್ರಕರಣಗಳೆಷ್ಟು?

ರಾಜ್ಯದಲ್ಲಿ ಈವರೆಗೆ 3,000 ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 18,600 ಸೋಂಕಿತರು ಪತ್ತೆಯಾಗಿದ್ದು, 402 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಸೋಂಕಿತರ ಸಂಖ್ಯೆ 57,31,815 ಹಾಗೂ ಮೃತರ ಸಂಖ್ಯೆ 94,844ಕ್ಕೆ ಏರಿಕೆಯಾಗಿದ್ದು, 2,71,801 ಕೇಸ್​ಗಳು ಸಕ್ರಿಯವಾಗಿದೆ. ಈವರೆಗೆ ಒಟ್ಟು 53,62,370 ಮಂದಿ ವೈರಸ್​​ನಿಂದ ಚೇತರಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.