ನಾಂದೇಡ್, ಮಹಾರಾಷ್ಟ್ರ: ಕೋವಿಡ್ ಸೋಂಕಿನಿಂದ ವ್ಯಕ್ತಿ ಮೃತಪಟ್ಟ ನಂತರವೂ ಕೂಡಾ ಮೂರು ದಿನಗಳ ಕಾಲ ಮೃತದೇಹಕ್ಕೆ ಚಿಕಿತ್ಸೆ ಮುಂದುವರೆಸಿರುವ ಆರೋಪ ಮಹಾರಾಷ್ಟ್ರದ ನಾಂದೇಡ್ ಕೇಳಿಬಂದಿದೆ.
ನಾಂದೇಡ್ನಲ್ಲಿರುವ ಗೋದಾವರಿ ಆಸ್ಪತ್ರೆಯ ವೈದ್ಯರ ಮೇಲೆ ಆರೋಪ ಕೇಳಿಬಂದಿದೆ. ಶಿಕ್ಷಕನಾಗಿದ್ದ ಅಂಕ್ಲೇಶ್ ಪವಾರ್ ಎಂಬಾತ ಕೋವಿಡ್ ಸೋಂಕಿನ ಕಾರಣಕ್ಕೆ ಏಪ್ರಿಲ್ 16ರಂದು ಗೋದಾವರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 21ರಂದು ಸಾವನ್ನಪ್ಪಿದ್ದನು.
ಇದನ್ನೂ ಓದಿ; ರಾಜೀವ್ ಗಾಂಧಿ ಹತ್ಯೆ ಅಪರಾಧಿಗೆ 30 ದಿನ ರಜೆ ಘೋಷಿಸಿದ ಸಿಎಂ ಸ್ಟಾಲಿನ್
ವೈದ್ಯರು ಏಪ್ರಿಲ್ 24ರಂದು ರೋಗಿ ಮೃತಪಟ್ಟಿರುವುದಾಗಿ ಹೇಳಿದ್ದು, ಸುಮಾರು 1.40 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ. ಆದರೆ ಏಪ್ರಿಲ್ 21ರಂದು ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಅಂಕ್ಲೇಶ್ ಪವಾರ್ ಪತ್ನಿ ಶುಭಾಂಗಿ ಪವಾರ್ ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಶುಭಾಂಗಿ ಪವಾರ್ 'ಆಸ್ಪತ್ರೆಯವರು ಹಣಕ್ಕೆ ಮಾತ್ರವೇ ಕಾಳಜಿ ತೋರಿಸುತ್ತಾರೆ. ನನ್ನ ಪತಿಯ ಬಗ್ಗೆ ಯಾರೂ ಕಾಳಜಿ ತೆಗೆದುಕೊಳ್ಳುತ್ತಿರಲಿಲ್ಲ. ನನ್ನ ಪತಿ ಮೃತಪಟ್ಟ ನಂತರ ಮೂರು ದಿನದವರೆಗೂ ವೈದ್ಯರು ಚಿಕಿತ್ಸೆ ನೀಡಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಎಂದು ಆರೋಪಿಸಿದ್ದಾರೆ.
ಶುಭಾಂಗಿ ಪವಾರ್ ಅವರ ದೂರಿನ ಮೇರೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ತನಿಖೆ ಆರಂಭವಾಗಿದೆ.