ಪುಣೆ(ಮಹಾರಾಷ್ಟ್ರ) : ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮಂಗಳವಾರ ಜಪ್ತಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನಿರ್ಮಲ್ ಟವರ್ ಸೇರಿದಂತೆ ಒಟ್ಟು ಸಾವಿರ ಕೋಟಿ ಮೌಲ್ಯದ ಆಸ್ತಯನ್ನು ಐಟಿ ಇಲಾಖೆ ಜಪ್ತಿ ಮಾಡಿದೆ. ಕಳೆದ ತಿಂಗಳು ಐಟಿ ಇಲಾಖೆ ಪವಾರ್ ಅವರ ಸಹೋದರಿಯರ ಮನೆ ಮತ್ತು ಕಂಪನಿಗಳ ಮೇಲೆ ದಾಳಿ ನಡೆಸಿತು.
ವರದಿಗಳ ಪ್ರಕಾರ ವಶಪಡಿಸಿಕೊಳ್ಳಬಹುದಾದ ಆಸ್ತಿಗಳ ಪಟ್ಟಿಯು 600 ಕೋಟಿ ಮೌಲ್ಯದ ಸಕ್ಕರೆ ಕಾರ್ಖಾನೆ, ದಕ್ಷಿಣ ದೆಹಲಿಯಲ್ಲಿ 20 ಕೋಟಿ ಮೌಲ್ಯದ ಫ್ಲಾಟ್, 25 ಕೋಟಿ ಮೌಲ್ಯದ ಮುಂಬೈನಲ್ಲಿ ಕಚೇರಿ, 250 ಕೋಟಿ ಮೌಲ್ಯದ ಗೋವಾದಲ್ಲಿ ರೆಸಾರ್ಟ್ ಮತ್ತು ರಾಜ್ಯದ 27 ವಿವಿಧ ಸ್ಥಳಗಳಲ್ಲಿ ಭೂಮಿ ಸುಮಾರು 500 ಕೋಟಿ ಎಂದು ಅಂದಾಜಿಸಲಾಗಿದೆ.
ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಮಂಗಳವಾರ ನಸುಕಿನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದಾರೆ. ಈ ಮೂಲಕ ಮಹಾವಿಕಾಸ್ ಅಘಾಡಿ ಸರ್ಕಾರಕ್ಕೆ ಭಾರಿ ಹೊಡೆತ ನೀಡಿದೆ.