ETV Bharat / bharat

ತೆರೆ ಹಿಂದೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಹಾನಾಟಕ : ಗೆದ್ದೇ ಗೆಲ್ಲುತ್ತೇನೆಂಬ ಛಲದಲ್ಲಿ ಬಿಜೆಪಿ! - ಮಹಾರಾಷ್ಟ್ರ ಚುನಾವಣೆ

ಸ್ವಾಭಾವಿಕವಾಗಿ, ಶಿವಸೇನೆಯೊಳಗೆ ಬಂಡಾಯವು ಅನಿವಾರ್ಯವಾಗಿತ್ತು. ಏಕೆಂದರೆ, ಪಕ್ಷವು ಇಷ್ಟು ದಿನ ನಡೆಸಿದ ಹಿಂದುತ್ವದ ಅಜೆಂಡಾದಿಂದ ಹೊರಬರಲು ಸಾಧ್ಯವಾಗಿರಲಿಲ್ಲ..

ತೆರೆ ಹಿಂದೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಹಾ ನಾಟಕ: ಗೆದ್ದೇ ಗೆಲ್ಲುತ್ತೇನೆಂಬ ಹಠದಲ್ಲಿ ಕಮಲ!

author img

By

Published : Jun 24, 2022, 8:49 PM IST

ಮುಂಬೈ : ಜೆಕ್ ಮೂಲದ ಬ್ರಿಟಿಷ್ ನಾಟಕಕಾರ ಟಾಮ್ ಸ್ಟಾಪರ್ಡ್ ಅನ್ನು ಉಲ್ಲೇಖಿಸಲು ಬಿಜೆಪಿಗೆ ಬಹುಶಃ ಸಮಯ ಬಂದಿದೆ. ಅವರು ‘Heads I win; Tails you lose’ ಎಂಬ ಹೇಳಿಕೆ ನೀಡಿದ್ದರು. ಅದರಂತೆ ಈಗ ಮಹಾರಾಷ್ಟ್ರದ ಪರಿಸ್ಥಿತಿ ಇದೆ. 2019ರಲ್ಲಿ ಸರ್ಕಾರ ರಚನೆಯ ವೈಫಲ್ಯದ ಬಗ್ಗೆ ಎಚ್ಚರದಿಂದಿರುವ ಬಿಜೆಪಿ, ಈ ಬಾರಿ ಮತ್ತಷ್ಟು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಮತ್ತು ಮಹಾರಾಷ್ಟ್ರವನ್ನು ತನ್ನದಾಗಿಸಿಕೊಳ್ಳುವ ಕೇಸರಿ ಬ್ರಿಗೇಡ್‌ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಆರೋಪ ನಿರಾಕರಿಸಿ ಬಿಜೆಪಿ : ಗುರುವಾರ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸುವ ಬಗ್ಗೆ ಸೂಕ್ಷ್ಮವಾಗಿ ಸುಳಿವು ನೀಡಿದ್ದಾರೆ. ಆದರೆ, ಕೇಂದ್ರ ಸಚಿವ ರಾವ್ಸಾಹೇಬ್ ಪಾಟೀಲ್ ದಾನ್ವೆ ಅವರ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಇದು ಶಿವಸೇನೆಯ ಆಂತರಿಕ ಸಮಸ್ಯೆಯಾಗಿದೆ. ಪಕ್ಷವು (ಬಿಜೆಪಿ) ಶಿಂಧೆ ಅವರೊಂದಿಗೆ ಮಾತನಾಡಿಲ್ಲ ಎಂದಿದ್ದಾರೆ. ಆದರೆ, ಇದರ ಹಿಂದೆ ಬಿಜೆಪಿ ಇದೆ ಎನ್ನುವುದಕ್ಕೆ ಸಾರ್ವಜನಿಕರಿಗೆ ಸಾಕ್ಷಿಗಳ ಹೇಳಿಕೆಗಳೇನೂ ಬೇಕಾಗಿಲ್ಲ ಎಂದು ವಿವರಿಸುತ್ತಾರೆ ಪಿಸೆಫಾಲಜಿಯ ಬಿಸ್ವನಾಥ್ ಚಕ್ರವರ್ತಿ.

(ಪಿಸೆಫಾಲಜಿ ರಾಜಕೀಯ ವಿಜ್ಞಾನದ ಒಂದು ಶಾಖೆಯಾಗಿದೆ. ಚುನಾವಣೆ ಮತ್ತು ಮತದಾನದ ಪರಿಮಾಣಾತ್ಮಕ ವಿಶ್ಲೇಷಣೆ. ಅಂತೆಯೇ, ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಚುನಾವಣೆಗಳನ್ನು ಬಗ್ಗೆ ವಿಮರ್ಶಿಸಲು ಇದು ಪ್ರಯತ್ನಿಸುತ್ತದೆ. ರಾಜಕೀಯ ಮುನ್ಸೂಚನೆಗೆ ಸಂಬಂಧಿಸಿದೆ ವಿಶ್ಲೇಷಣೆಯನ್ನ ನಡೆಸುತ್ತದೆ)

ಈ ಎಲ್ಲದರ ಹಿಂದೆ ಬಿಜೆಪಿ ಕೈವಾಡವಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಬಂಡಾಯ ಶಾಸಕರನ್ನು ಮೊದಲು ಗುಜರಾತ್‌ನ ಸೂರತ್‌ಗೆ ಮತ್ತು ನಂತರ ಅಸ್ಸೋಂನ ಗುವಾಹಟಿಗೆ ಕರೆದೊಯ್ಯಲಾಗಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಬಂಡಾಯ ಶಾಸಕರು ಗುವಾಹಟಿ ತಲುಪುವ ಮೊದಲು ಅಸ್ಸೋಂ ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮಾ ಅವರು ರಾಡಿಸನ್ ಬ್ಲೂಗೆ ಭೇಟಿ ನೀಡಿದ್ದಾರೆ.

ಬಂಡಾಯ ಶಾಸಕರು
ಬಂಡಾಯ ಶಾಸಕರು

ಆರದ ಗಾಯ : ಬಿಜೆಪಿಯ ಈ ಗೇಮ್ ಪ್ಲಾನ್ ಅವರ ಹಳೆಯ ಗಾಯಗಳನ್ನು ವಾಸಿಮಾಡುವ ಪ್ರಯತ್ನ ಮಾತ್ರವಲ್ಲ, ಇದು ರಾಜ್ಯದಲ್ಲಿ ದೊಡ್ಡ ವಿನ್ಯಾಸದ ಭಾಗವಾಗಿದೆ ಎಂದು ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ. ಎಂವಿಎ (ಮಹಾ ವಿಕಾಸ್ ಅಘಾಡಿ) 2019ರಲ್ಲಿ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗಿನಿಂದ, ಶಿವಸೇನೆ ಮತ್ತು ಕಾಂಗ್ರೆಸ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಮೈತ್ರಿ ಹೆಚ್ಚು ಕಾಲ ಮುಂದುವರಿಯುವುದಿಲ್ಲ ಎಂದು ಊಹಿಸಲಾಗಿತ್ತು. ಆದರೂ, ಅದು ಚತುರ ರಾಜಕೀಯ ಕೌಶಲ್ಯದಿಂದ ಈವರೆಗೆ ಇತ್ತು. ಶರದ್ ಪವಾರ್ ಅವರು ಈ ಭಿನ್ನಾಭಿಪ್ರಾಯವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು.

ಸ್ವಾಭಾವಿಕವಾಗಿ ಶಿವಸೇನೆಯಲ್ಲಿ ಬಂಡಾಯವು ಅನಿವಾರ್ಯವಾಗಿತ್ತು. ಆದರೂ ಪಕ್ಷವು ಇಷ್ಟು ದಿನ ನಡೆಸಿದ್ದ ಹಿಂದುತ್ವದ ಅಜೆಂಡಾದಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೆ, ಎಲ್ಲದಕ್ಕೂ ಸಮಯ ಬೇಕು ಎಂಬಂತೆ ಈಗ ಪಕ್ಷದೊಳಗಿನ ಭಿನ್ನಾಭಿಪ್ರಾಯವು ಎಂವಿಎ ಸರ್ಕಾರವನ್ನು ತೊಂದರೆಗೆ ಸಿಲುಕಿಸುವುದಲ್ಲದೆ ರಾಷ್ಟ್ರಪತಿ ಚುನಾವಣೆಯ ಮೇಲೂ ನೇರ ಪರಿಣಾಮ ಬೀರಲಿದೆ.

ಎನ್​ಸಿಪಿ ನಾಯಕ ಶರದ್ ಪವಾರ್
ಎನ್​ಸಿಪಿ ನಾಯಕ ಶರದ್ ಪವಾರ್

ವಿಶ್ಲೇಷಕರ ಪ್ರಕಾರ ಪ್ರಸ್ತುತ ಎಂವಿಎಗೆ ಕೆಲವು ಆಯ್ಕೆಗಳು ಮಾತ್ರ ಉಳಿದಿವೆ ; ಅವುಗಳೆಂದರೆ..

  • ಶಿಂಧೆ ಅವರನ್ನು ನಾಯಕ ಎಂದು ಒಪ್ಪಿಕೊಳ್ಳುವುದು ಮತ್ತು ಸರ್ಕಾರ ರಚಿಸಲು ಬಿಜೆಪಿಗೆ ಸೇರುವುದು.
  • ಸರ್ಕಾರವನ್ನು ವಿಸರ್ಜಿಸುವುದು ಮತ್ತು ಹೊಸ ಚುನಾವಣೆಗೆ ಹೋಗುವುದು ಅಥವಾ ಧೈರ್ಯದಿಂದ ವಿಶ್ವಾಸ ಮತಕ್ಕೆ ಮುಂದಾಗುವುದು.

ಠಾಕ್ರೆ ಈವರೆಗೆ ಅಧಿಕಾರ ಬೀಡುವ ಯಾವುದೇ ಲಕ್ಷಣಗಳನ್ನು ತೋರಿಸದಿದ್ದರೂ, ಬಂಡಾಯ ಪಾಳಯದಲ್ಲಿರುವ 55 ಶಾಸಕರಲ್ಲಿ 40ಕ್ಕೂ ಹೆಚ್ಚು ಶಾಸಕರಿರುವುದರಿಂದ ಅವರು ಇದರಲ್ಲಿ ಗಟ್ಟಿಯಾಗಿ ನಿಲ್ಲಲು ಅಷ್ಟೇನೂ ಸಾಧ್ಯವಿಲ್ಲ. ಈ ಕಾರಣದಿಂದ ಶಿವಸೇನೆ ಹಿಂದೆ ಉಳಿದಿರುವ ಏಕೈಕ ಆಯ್ಕೆ ಬಿಜೆಪಿಯನ್ನು ಬೆಂಬಲಿಸುವುದು ಮತ್ತು ಸರ್ಕಾರ ರಚಿಸುವುದು. ಇದರಿಂದ ಸದ್ಯ ಪಕ್ಷ ಮತ್ತು ಸರ್ಕಾರವನ್ನು ಉಳಿಸಬಹುದು ಎಂದು ಚಕ್ರವರ್ತಿ ಅವರ ಅಭಿಪ್ರಾಯ.

ಮಹಾರಾಷ್ಟ್ರ ಬಿಕ್ಕಟ್ಟಿಗೂ ರಾಷ್ಟ್ರಪತಿ ಚುನಾವಣೆಗೂ ನಂಟು : ಪ್ರಮುಖ ವಿಷಯವೆಂದರೆ ಈ ಬಿಕ್ಕಟ್ಟನ್ನು ಸೃಷ್ಟಿಸುವ ಮೂಲಕ ಬಿಜೆಪಿಯು ರಾಷ್ಟ್ರಪತಿ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಒಗ್ಗಟ್ಟಿನ ಶಕ್ತಿಯನ್ನು ಗಾಳಿಗೆ ತೂರಿದೆ ಎನ್ನುವುದನ್ನು ಗಮನಿಸಬೇಕು ಎಂದಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಿಂದ 40 ಶಾಸಕರು ಹೊರನಡೆದು ಬಿಜೆಪಿಯ ತೆಕ್ಕೆಗೆ ಹೋದರೆ, ವಿರೋಧ ಪಕ್ಷಗಳಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ 7000 ಮತಗಳ ನಷ್ಟವಾಗಲಿದೆ. ಪ್ರತಿಪಕ್ಷಗಳು ಈ ಹಂತದಲ್ಲಿ ಖಂಡಿತಾ ಭರಿಸಲಾರದಂತಹ ಮತಗಳು ಇವಾಗುತ್ತವೆ. ನವೀನ್ ಪಟ್ನಾಯಕ್ ಈಗಾಗಲೇ ಬಿಜೆಪಿ ಅಭ್ಯರ್ಥಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಆಡಳಿತ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಗೆಲ್ಲಲು ಸುಲಭವಾಗಿದೆ.

https://etvbharatimages.akamaized.net/etvbharat/prod-images/team-eknath_2406newsroom_1656061258_437.jpg
ಸಭೆಯಲ್ಲಿ ಬಂಡಾಯ ಶಾಸಕರು

ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಹೋದರೆ ಅವರು 9625 ಹೆಚ್ಚುವರಿ ಮತಗಳನ್ನು ಪಡೆಯುತ್ತಾರೆ. ಈ ಮೂಲಕ ಮುರ್ಮು ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಅದಾಗ್ಯು, ಇಲ್ಲಿನ ವಿಧಾನಸಭೆ ವಿಸರ್ಜನೆಯಾದರೆ ಈ ಶಾಸಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ 113 ಮತಗಳನ್ನು ಕಳೆದುಕೊಳ್ಳುತ್ತದೆ. ಅದರಂತೆ ವಿರೋಧ ಪಕ್ಷದ ಮತ ಎಂದು ಹೇಳಿಕೊಳ್ಳುವ 174 ಶಾಸಕರ ಮತದಾನದ ಹಕ್ಕು ಸಹ ಇಲ್ಲದಂತಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಏನೇ ಆದರೂ ಬಿಜೆಪಿಗೆ ಅನುಕೂಲ ಆಗಲಿದೆ.

ಇದನ್ನೂ ಓದಿ: ನಾನು ಹೊಸ ಶಿವಸೇನೆ ಕಟ್ಟಲು ಬಯಸುತ್ತೇನೆ : ಸಿಎಂ ಉದ್ಧವ್ ಠಾಕ್ರೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.