ETV Bharat / bharat

ಕುಟುಂಬದ 9 ಜನ ಆತ್ಮಹತ್ಯೆ ಪ್ರಕರಣ: ಪ್ರಚೋದನೆ ನೀಡಿದ 13 ಆರೋಪಿಗಳ ಬಂಧನ - ಆತ್ಮಹತ್ಯೆಗೆ ಪ್ರಚೋದನೆ ಆರೋಪಿಗಳ ಬಂಧನ

ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವನಮೋರೆ (54), ಆತನ ಸಹೋದರ ಪಶು ವೈದ್ಯರಾಗಿದ್ದ ಡಾ. ಮಾಣಿಕ ವನಮೋರೆ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಸಾಂಗ್ಲಿ ಜಿಲ್ಲೆಯ ಮೈಸಾಳ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

Maharashtra: 13 people held for abetting suicide of 9 members of family in Sangli

author img

By

Published : Jun 21, 2022, 7:08 PM IST

ಪುಣೆ: ಒಂದೇ ಕುಟುಂಬದ 9 ಜನ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊಂದಿರುವ 25 ಜನರ ಪೈಕಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆರೋಪಿಗಳಿಂದ ಹಣ ಸಾಲವಾಗಿ ಪಡೆದಿತ್ತು ಎಂದು ತಿಳಿದು ಬಂದಿದೆ.

ಸಾಲ ಪಡೆದ ವನಮೋರೆ ಕುಟುಂಬದವರನ್ನು ಆರೋಪಿಗಳು ಸಾಲ ಮರುಪಾವತಿಸುವಂತೆ ವಿಪರೀತ ಕಿರುಕುಳ ನೀಡುತ್ತಿದ್ದರು. ಇವರ ಕಿರುಕುಳದ ಕಾರಣದಿಂದಲೇ ವನಮೋರೆ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಂಧಿತರಲ್ಲಿ ಕೆಲವರು ಈ ಮುನ್ನವೇ ಹಣಕಾಸು ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವನಮೋರೆ (54), ಆತನ ಸಹೋದರ ಪಶು ವೈದ್ಯರಾಗಿದ್ದ ಡಾ. ಮಾಣಿಕ ವನಮೋರೆ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಸಾಂಗ್ಲಿ ಜಿಲ್ಲೆಯ ಮೈಸಾಳ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪುಣೆ: ಒಂದೇ ಕುಟುಂಬದ 9 ಜನ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊಂದಿರುವ 25 ಜನರ ಪೈಕಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆರೋಪಿಗಳಿಂದ ಹಣ ಸಾಲವಾಗಿ ಪಡೆದಿತ್ತು ಎಂದು ತಿಳಿದು ಬಂದಿದೆ.

ಸಾಲ ಪಡೆದ ವನಮೋರೆ ಕುಟುಂಬದವರನ್ನು ಆರೋಪಿಗಳು ಸಾಲ ಮರುಪಾವತಿಸುವಂತೆ ವಿಪರೀತ ಕಿರುಕುಳ ನೀಡುತ್ತಿದ್ದರು. ಇವರ ಕಿರುಕುಳದ ಕಾರಣದಿಂದಲೇ ವನಮೋರೆ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಂಧಿತರಲ್ಲಿ ಕೆಲವರು ಈ ಮುನ್ನವೇ ಹಣಕಾಸು ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವನಮೋರೆ (54), ಆತನ ಸಹೋದರ ಪಶು ವೈದ್ಯರಾಗಿದ್ದ ಡಾ. ಮಾಣಿಕ ವನಮೋರೆ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಸಾಂಗ್ಲಿ ಜಿಲ್ಲೆಯ ಮೈಸಾಳ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.