ETV Bharat / bharat

ಶಿಷ್ಯ ಆನಂದಗಿರಿಯೊಂದಿಗಿನ ಮನಸ್ತಾಪದಿಂದಲೇ ಕುಣಿಕೆಗೆ ಕೊರಳೊಡ್ಡಿದ್ರಾ ಮಹಾಂತ್ ನರೇಂದ್ರ ಗಿರಿ? - ಸಿಎಂ ಯೋಗಿ ಆದಿತ್ಯನಾಥ್

ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.

ನರೇಂದ್ರ ಗಿರಿ
ನರೇಂದ್ರ ಗಿರಿ
author img

By

Published : Sep 21, 2021, 9:54 AM IST

ಲಖನೌ(ಉತ್ತರಪ್ರದೇಶ): ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಶಿಷ್ಯ ಬಬ್ಲೂ ದೂರವಾಣಿ ಮೂಲಕ ನಮಗೆ ಮಾಹಿತಿ ನೀಡಿದರು ಎಂದು ಉತ್ತರಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್​ ಕುಮಾರ್ ಹೇಳಿದ್ದಾರೆ.

ಇಂದು ಮಹಾಂತ್ ನರೇಂದ್ರ ಗಿರಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾಂತ್​​ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಇಂದಿನ ಅವರ ಎಲ್ಲ ಕಾರ್ಯ ಕಲಾಪಗಳನ್ನು ರದ್ದುಗೊಳಿಸಿದ್ದಾರೆ. ಇಂದು ಪ್ರಯಾಗ್​ ರಾಜ್​ನಲ್ಲಿ ನಡೆಯಲಿರುವ ಮಹಾಂತ್​ ಅವರ ಅಂತ್ಯ ಸಂಸ್ಕಾರದಲ್ಲಿ ಯೋಗಿ ಆದಿತ್ಯನಾಥ್​ ಭಾಗಿಯಾಗಲಿದ್ದಾರೆ.

ನರೇಂದ್ರ ಗಿರಿ ಸಾವಿನ ಸುದ್ದಿ ಕೇಳಿ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಅವರ ಮೃತದೇಹ ಪತ್ತೆಯಾದ ಕೋಣೆಯ ಒಳಗಿನಿಂದ ಲಾಕ್ ಮಾಡಲಾಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಮುರಿದು ಮೃತದೇಹವನ್ನು ಕೆಳಗಿಳಿಸಿದರು.

ಶಿಷ್ಯನ ಬಗ್ಗೆ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿರುವ ಮಹಾಂತ್​​ ನರೇಂದ್ರ ಗಿರಿ

ಸ್ಥಳದಲ್ಲಿ ಆರೇಳು ಪುಟಗಳ ಡೆತ್​ನೋಟ್​ ಪತ್ತೆಯಾಗಿದ್ದು, ಅದರಲ್ಲಿ ತಮ್ಮ ಶಿಷ್ಯ ಆನಂದ ಗಿರಿ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ, ನಾನು ಗೌರವದಿಂದ ಬದುಕಿದ್ದೇನೆ, ನಾನು ಅವಮಾನದಿಂದ ಬದುಕಲು ಸಾಧ್ಯವಿಲ್ಲ, ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರ ಗಿರಿ ಮೃತದೇಹ ಪತ್ತೆ.. ಸ್ಥಳದಲ್ಲಿ ಸೊಸೈಡ್​ ನೋಟ್​ ಲಭ್ಯ..

ಮಠದಲ್ಲಿ ಅನುಮಾನಾಸ್ಪದ ಸಾವುಗಳು ಸಂಭವಿಸಿರುವುದು ಹೊಸತೇನಲ್ಲ. ಎರಡು ವರ್ಷಗಳ ಹಿಂದೆ ಕೊಠಡಿಯೊಂದರಲ್ಲಿ ಅಖಾರದ ಸಂತರೊಬ್ಬರ ಮೃತದೇಹ ಪತ್ತೆಯಾಗಿತ್ತು. ಆತನ ಕೈಯಲ್ಲಿ ಪಿಸ್ತೂಲ್ ಇದ್ದು, ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದರು.

ಈ ಕಾರಣಕ್ಕಾಗಿ ಆತ್ಮಹತ್ಯೆ? : ಕಳೆದ ಕೆಲ ತಿಂಗಳಿಂದ ನರೇಂದ್ರ ಗಿರಿ ಹಾಗೂ ಅವರ ಶಿಷ್ಯ ಆನಂದ ಗಿರಿ ಅವರ ನಡುವೆ ಮನಸ್ತಾಪವಿತ್ತು. ದೇವಾಲಯದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂಬ ಕಾರಣಕ್ಕಾಗಿ ಆನಂದ ಗಿರಿ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು.

ಇದಾದ ಬಳಿಕ ಅವರನ್ನ ಮಠದಿಂದ ಹೊರ ಹಾಕಲಾಗಿತ್ತು. ಹೀಗಾಗಿ, ನರೇಂದ್ರ ಗಿರಿ ವಿರುದ್ಧ ಅವರು ಅನೇಕ ರೀತಿಯ ಹೇಳಿಕೆ ನೀಡಿ, ಗಂಭೀರ ಆರೋಪ ಮಾಡಿದ್ದರು. ಇದರಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.