ETV Bharat / bharat

ಮಳೆ, ಭೂಕುಸಿತಕ್ಕೆ ನಲುಗಿದ ಮಹಾರಾಷ್ಟ್ರ.. ಸಾವಿನ ಸಂಖ್ಯೆ 136ಕ್ಕೆ ಏರಿಕೆ, 87 ಮಂದಿ ಮೃತದೇಹ ಪತ್ತೆ - ಮಹಾರಾಷ್ಟ್ರದಲ್ಲಿ ಭೂ ಕುಸಿತ

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ರಾಯಗಢ ಹಾಗೂ ಮಹಾಡ್​ನಲ್ಲಿ ಭೂ ಕುಸಿತ ಸಂಭವಿಸಿದೆ. ಈವರೆಗೆ 87 ಮಂದಿ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಮಹಾರಾಷ್ಟ್ರ
ಮಹಾರಾಷ್ಟ್ರ
author img

By

Published : Jul 24, 2021, 10:20 AM IST

ಮುಂಬೈ(ಮಹಾರಾಷ್ಟ್ರ): ರಾಜ್ಯದಲ್ಲಿ ವರುಣಾರ್ಭಟ ಮುಂದುವರಿದಿದ್ದು, ರಾಯಗಢ ಹಾಗೂ ಮಹಾಡ್​​ನ ಹಲವೆಡೆ ಭೂ ಕುಸಿತ ಉಂಟಾಗಿದೆ. ಮಳೆ ತಂದಿಟ್ಟ ಅವಾಂತರಗಳಿಂದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಮಹಾಡ್​​ನ ಮೌಜೆ ಮೌಜೆ ತುಳಾಯೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ಅವಶೇಷಗಳಡಿ 85 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದರು.

ಈ ಪೈಕಿ ಎನ್​ಡಿಆರ್​ಎಫ್ ಸಿಬ್ಬಂದಿ 38 ಮೃತದೇಹಗಳನ್ನು ಹೊರತೆಗೆದಿದ್ದಾರೆ. 47 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ರಣಭೀಕರ ಮಳೆಗೆ 13 ಎತ್ತುಗಳು ಸೇರಿ 33 ಪ್ರಾಣಿಗಳು ಮೃತಪಟ್ಟಿವೆ. ಜೀವ ಭಯದಿಂದ 250 ಕ್ಕೂ ಹೆಚ್ಚು ಜನರು ಊರನ್ನು ತೊರೆದಿದ್ದಾರೆ.

ಪೋಲಾಡ್​ಪುರದ ಮೌಜೆ ಸಖರ್​ ಸುತರ್​ವಾಡಿಯಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಐವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಂಗಾಂವ್​​ ಉಪ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ; ಮಹಾರಾಷ್ಟ್ರದಲ್ಲಿ ಡೆಡ್ಲಿ ಮಳೆ: 48 ಗಂಟೆಗಳಲ್ಲಿ 129 ಮಂದಿ ಸಾವು

ರಾಯಗಢದಲ್ಲಿ ಈವರೆಗೆ 44 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡಿರುವ 35 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯೊಂದರಲ್ಲೇ 6 ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ನಿಧಿ ಚೌಧರಿ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳಡಿ 50 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆಯಿದೆ ಎಂದು ತಿಳಿಸಿದ್ದಾರೆ.

136 ಮಂದಿ ಸಾವು

ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ನಿನ್ನೆ ಸಂಜೆವರೆಗೆ 136 ಜನರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರದ ಪರಿಹಾರ ಮತ್ತು ಪುನರ್​ ವಸತಿ ಸಚಿವ ವಿಜಯ್​ ವಾಡೆಟ್ಟಿವಾರ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.