ಪುಣೆ(ಮಹಾರಾಷ್ಟ್ರ): ಹಲವು ದೇಶಗಳಲ್ಲಿ ಕೇಸರಿ ಬೆಳೆಯಲಾಗಿದ್ದರೂ ಕಾಶ್ಮೀರಿ ಕೇಸರಿಗೆ ವಿಶೇಷ ಸ್ಥಾನವಿದೆ. ಆದರೆ ನಮ್ಮ ದೇಶದಲ್ಲಿ ಈ ಹೂವನ್ನು ಶೇ.3ರಿಂದ 4ರಷ್ಟು ಮಾತ್ರ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಈ ಕೇಸರಿ ಹೂವನ್ನು ವಿನೂತನ ರೀತಿಯಲ್ಲಿ ಕೃಷಿ ಮಾಡುತ್ತಿದ್ದಾರೆ.
ಕಾಶ್ಮೀರಿ ಕೇಸರಿ ಯಾವಾಗಲೂ ಅನೇಕರಿಗೆ ಆದ್ಯತೆಯ ಆಯ್ಕೆಯಾಗಿದೆ. ಕೇಸರಿ ಬೆರೆಸಿದ ಹಾಲು ಅಥವಾ ಕೇಸರಿ ಬಳಸಿದ ಸಿಹಿ ಅಡುಗೆಗಳು ಬಹಳ ರುಚಿಕರ. ಇದು ಜೀರ್ಣಶಕ್ತಿ ಮತ್ತು ಹಸಿವು ಸುಧಾರಿಸುವುದಷ್ಟೇ ಅಲ್ಲದೇ, ನಿಮಗೆ ಆರೋಗ್ಯ ಮತ್ತು ಹೊಳೆಯುವ ಚರ್ಮವನ್ನೂ ನೀಡುತ್ತದೆ. ಕೇಸರಿ ಹಾಲನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಇವುಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮಕ್ಕಳು ಸುಂದರವಾಗಿ ಜನಿಸುತ್ತಾರೆ ಎಂಬುದು ಹಲವರ ನಂಬಿಕೆ.
ಇಂತಹ ಕೇಸರಿನ್ನು ಕಾಶ್ಮೀರದಲ್ಲಿಯೇ ಮಾತ್ರ ಬೆಳೆಯಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಈ ಹೂವನ್ನು ತಂತ್ರಜ್ಞಾನ ಬಳಸಿ ವಿನೂತನ ರೀತಿಯಲ್ಲಿ ಕೃಷಿ ಮಾಡುತ್ತಿದ್ದಾರೆ.
ಕಂಟೇನರ್ನಲ್ಲಿ ಕೇಸರಿ ಕೃಷಿ: ಮಹಾರಾಷ್ಟ್ರದ ನಾಸಿಕ್‌ನ ಶೈಲೇಶ್ ಎಂಬುವವರು ಆರು ವರ್ಷಗಳ ಹಿಂದೆ ಏರೋಪೋನಿಕ್ ವಿಧಾನವನ್ನು ಬಳಸಿಕೊಂಡು ಕಂಟೇನರ್ನಲ್ಲಿ ಕೃಷಿಯನ್ನು ಪ್ರಾರಂಭಿಸಿದರು. 'ಕೇಸರಿಯನ್ನು ಕಾಶ್ಮೀರದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಏಕೆಂದರೆ ಇದಕ್ಕೆ ವಿಶೇಷ ರೀತಿಯ ಹವಾಮಾನ ಪರಿಸ್ಥಿತಿಗಳು ಬೇಕಾಗುತ್ತವೆ. ನಾನು ಕಾಶ್ಮೀರಕ್ಕೆ ಹೋಗಿ ಅಲ್ಲಿನ ರೈತರೊಂದಿಗೆ ಮಾತನಾಡಿ ಅದನ್ನು ಹೇಗೆ ಬೆಳೆಸಬೇಕೆಂದು ಕಲಿತಿದ್ದೇನೆ. ಕಾಶ್ಮೀರದ ಪಾಂಪೋರ್ ಪ್ರದೇಶದಿಂದ 12 ಕೆ.ಜಿ ಕೇಸರಿ ಬೀಜಗಳನ್ನು ತಂದು ನೆಟ್ಟಿದ್ದೇನೆ. ನಿಯಂತ್ರಿತ ಪರಿಸರದಲ್ಲಿ ಬೆಳೆಯಲು, ನಾನು ಏರ್ ಸರ್ಕ್ಯುಲೇಟರ್(ಎಸಿ) ಮತ್ತು ಇತರ ತಂತ್ರಜ್ಞಾನಗಳನ್ನು ಬಳಸುತ್ತೇನೆ' ಎಂದು ಶೈಲೇಶ್ ಹೇಳಿದರು.
ಪ್ರಸ್ತುತ ಅವರು ಪುಣೆಯ ವಾರ್ಜೆ ಪ್ರದೇಶದಲ್ಲಿ ಕಂಟೈನರ್‌ನಲ್ಲಿ ಟ್ರೇನಲ್ಲಿ 400 ರಿಂದ 600 ಬೀಜಗಳನ್ನು ನೆಟ್ಟಿದ್ದಾರೆ. ಇದರಿಂದ ಸುಮಾರು 1.5 ಕೆಜಿ ಕೇಸರಿ ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಒಂದು ಗ್ರಾಂ ಕೇಸರಿ ಬೆಲೆ 499 ರೂ.ಗಳಿದ್ದರೆ, ಕೆಜಿಗೆ 6.23 ಲಕ್ಷ ರೂ.ಗೆ ಬರುವ ಸಾಧ್ಯತೆ ಇದೆ ಎಂದು ಶೈಲೇಶ್ ಭರವಸೆ ವ್ಯಕ್ತಪಡಿಸಿದರು. ಈವರೆಗೆ ಕೃಷಿಗೆ 8 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಎತ್ತುಗಳ ಬದಲಿಗೆ ಕಾರನ್ನೇ ಕೃಷಿ ಚಟುವಟಿಕೆಗೆ ಬಳಸಿಕೊಂಡ ರೈತ.. ವಿಡಿಯೋ