ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್‌ರೊಂದಿಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರ ಪ್ರಮಾಣವಚನ ಸ್ವೀಕಾರದ ಬಳಿಕ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಜುಲೈ 3-4 ರಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದಾರೆ.
ಜುಲೈ 3 ರಂದು ಹೊಸ ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಇದ್ದು, ಸೋಮವಾರ (ಜುಲೈ 4) ಹೊಸ ಸರ್ಕಾರ 'ವಿಶ್ವಾಸ ಮತ' ಯಾಚನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆಯೇ ನಾನಾ ಪಟೋಲೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂದಿನಿಂದ ಆ ಸ್ಥಾನ ಖಾಲಿ ಇತ್ತು. ಹೊಸ ಸರ್ಕಾರ ಬಂದ ಬಳಿಕ ಆ ಸ್ಥಾನಕ್ಕೆ ನಾಳೆ ಹೊಸ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಶಿವಸೇನೆಯಲ್ಲಿನ ಬಂಡಾಯದ ನಂತರ ಅಂದರೆ, ಜೂನ್ 29 ರಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿತ್ತು. ಆ ಬಳಿಕ ಶಿಂದೆ - ಫಡ್ನವಿಸ್ ಸರ್ಕಾರ ಪದ ಗ್ರಹಣ ಮಾಡಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ 106 ಶಾಸಕರಿದ್ದರೆ, ಶಿವಸೇನೆ ಬಂಡಾಯ ಗುಂಪು 39, 10 ಪಕ್ಷೇತರ ಶಾಸಕರಿದ್ದಾರೆ. ಬಹುಮತಕ್ಕೆ 144 ಶಾಸಕರ ಬೆಂಬಲ ಬೇಕಿದೆ.
ಇದನ್ನು ಓದಿ:ಭಾಗ್ಯನಗರಿಯಲ್ಲಿ ಇಂದಿನಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ