ETV Bharat / bharat

'ಮಹಾ' ಬಂಡಾಯ ಶಾಸಕರಿಗೆ ಸುಪ್ರೀಂ ತಾತ್ಕಾಲಿಕ ರಿಲೀಫ್‌; ಜು.11ಕ್ಕೆ ಮುಂದಿನ ವಿಚಾರಣೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಸುಪ್ರೀಂಕೋರ್ಟ್​ ಇಂದು ಬಂಡಾಯ ಶಾಸಕರಿಗೆ ತಾತ್ಕಾಲಿಕ ರಿಲೀಫ್​ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಆರಂಭದಲ್ಲೇ ಹಿನ್ನಡೆಯಾಗಿದೆ.

Maha crisis
Maha crisis
author img

By

Published : Jun 27, 2022, 4:19 PM IST

ನವದೆಹಲಿ: ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಸುಪ್ರೀಂಕೋರ್ಟ್​​​ ಅಂಗಳ ತಲುಪಿದೆ. ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಮಹಾರಾಷ್ಟ್ರ ಸರ್ಕಾರ, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ, ಎನ್‌ಸಿಪಿ ಮುಖ್ಯಸ್ಥ ಹಾಗೂ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್‌ ನೀಡಿದೆ. ಇದರ ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.

ಮಹಾರಾಷ್ಟ್ರ ವಿಧಾನಸಭೆಯ ಉಪಸಭಾಧ್ಯಕ್ಷ ನರಹರಿ ಝಿರ್ವಾಲ್​​ ನೀಡಿರುವ ಅನರ್ಹತೆಯ ನೋಟಿಸ್​ ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್‌ ನೀಡಿ ಮುಂದಿನ ಮೂರು ದಿನಗಳಲ್ಲಿ ಹಾಗೂ ಮಹಾರಾಷ್ಟ್ರ ಮೈತ್ರಿ ಸರ್ಕಾರ ಮುಂದಿನ ಐದು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದೆ. ಇದರ ಜೊತೆಗೆ, ಅನರ್ಹತೆಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿ, ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದೆ. ಈ ಮುಖೇನ ಸುಪ್ರೀಂಕೋರ್ಟ್​ನಲ್ಲಿ ಬಂಡಾಯ ಶಾಸಕ ಏಕನಾಥ್​ ಶಿಂದೆ ಬಣಕ್ಕೆ ಆರಂಭಿಕ ಮುನ್ನಡೆ ಸಿಕ್ಕಿದೆ.

ಇದನ್ನೂ ಓದಿ: ಸುಪ್ರೀಂ ಅಂಗಳದಲ್ಲಿ ಮಹಾ ರಾಜಕೀಯ ಬಿಕ್ಕಟ್ಟು: ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್​ ಪಡೆದ ಶಿಂದೆ ಗುಂಪು

ಬಂಡಾಯ ಶಾಸಕರು ನಿರಾಳ​: ಸುಪ್ರೀಂಕೋರ್ಟ್​ನ ಇಂದಿನ ನಿರ್ಧಾರದಿಂದಾಗಿ ಬಂಡಾಯ ಶಿವಸೇನಾ ಶಾಸಕರು ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ. ಇದರ ಜೊತೆಗೆ, ಸೂಕ್ತ ಭದ್ರತೆ ನೀಡುವಂತೆಯೂ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ.

ಬಂಡಾಯ ಶಾಸಕರ ಪರ ವಕೀಲರು ಹೇಳಿದ್ದೇನು?: ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಸದಸ್ಯರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇಲ್ಲ. 38 ಶಿವಸೇನೆ ಸದಸ್ಯರು ತಮ್ಮ ಬೆಂಬಲ ಹಿಂಪಡೆದಿದ್ದರಿಂದ ಸರ್ಕಾರವು ಸದನದಲ್ಲಿ ಬಹುಮತ ಕಳೆದುಕೊಂಡು, ಅಲ್ಪಮತಕ್ಕೆ ಕುಸಿದಿದೆ. ಈ ನಡುವೆ ಮಹಾ ವಿಕಾಸ ಆಘಾಡಿ ಸರ್ಕಾರ ಅಧಿಕಾರದಲ್ಲಿ ಉಳಿಯಲು ವಿಧಾನಸಭೆ ಉಪಾಧ್ಯಕ್ಷ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಶಿಂದೆ ಪರ ವಕೀಲರು ಅರ್ಜಿಯಲ್ಲಿ ವಾದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.