ಮುಂಬೈ: 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಹಾರಾಷ್ಟ್ರದ ಕೊಲ್ಹಾಪುರ ನಗರದ ಸಹಾಯಕ ಟೌನ್ ಪ್ಲಾನರ್‌ನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಜಂಟಿ ಜಿಲ್ಲಾ ರಿಜಿಸ್ಟ್ರಾರ್ನ್ ಕೊಲ್ಹಾಪುರ ಕಚೇರಿಯಲ್ಲಿ ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೊದಲಿಗೆ ದೂರುದಾರರಿಂದ 45 ಲಕ್ಷ ರೂ.ಗಳನ್ನು ಕೋರಿದ್ದರು. ಆದರೆ ನಂತರ ಭೂ ಮೌಲ್ಯಮಾಪನಕ್ಕಾಗಿ 20 ಲಕ್ಷ ರೂ. ಸ್ವೀಕರಿಸಲು ಒಪ್ಪಿಕೊಂಡರು.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಪೋಷಣ್ ಅಭಿಯಾನ'ದ ಹಣದ ವಿವರಗಳ ಕುರಿತು ಲೋಕಸಭೆಗೆ ಕೇಂದ್ರ ಸರ್ಕಾರದ ಮಾಹಿತಿ