ಮದುರೈ(ತಮಿಳುನಾಡು): ಭಾರತದಾದ್ಯಂತ ಕೋವಿಡ್ ಎರಡನೇ ಅಲೆಯು ತೀವ್ರವಾಗಿ ಹಬ್ಬುತ್ತಿದೆ. ಇದರಿಂದಾಗಿ ಎಲ್ಲಾ ರಾಜ್ಯಗಳಲ್ಲಿ ಸೋಂಕಿತ ರೋಗಿಗಳಿಗೆ ಆಮ್ಲಜನಕದ ಕೊರತೆ ಹೆಚ್ಚುತ್ತಿದೆ. ಆಕ್ಸಿಜನ್ ಸಮಸ್ಯೆಯಿಂದಾಗಿ ಅನೇಕ ಸಾವು-ನೋವುಗಳು ಸಂಭವಿಸುತ್ತಿವೆ. ಇದನ್ನು ಕಡಿಮೆ ಮಾಡಲು ಇಲ್ಲೋರ್ವ ಪ್ರೋಫೆಸರ್ ಹೊಸ ಮಾಸ್ಕ್ವೊಂದನ್ನು ಪರಿಚಯಿಸಿದ್ದಾರೆ.
![Madurai professor discovers new kind of mask, Madurai professor discovers new kind of mask using nano technology, nano technology mask, nano technology mask news, ನ್ಯಾನೋ ಟೆಕ್ನಾಲಜಿ ಮಾಸ್ಕ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಕಂಡು ಹಿಡಿದ ಮದುರೈ ಪ್ರೋಫೆಸರ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ, ಮದುರೈ ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ,](https://etvbharatimages.akamaized.net/etvbharat/prod-images/tn-mdu-02-nano-mask-mku-prof-script-7208110_30042021064839_3004f_1619745519_938_3004newsroom_1619791131_154.png)
ಕೋವಿಡ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಮತ್ತು ಅದರ ಚೈನ್ನನ್ನು ಮುರಿಯುವುದಕ್ಕೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ಹೆಚ್ಚಾಗ್ತಿದೆ. ಇದನ್ನು ಕಡಿಮೆ ಮಾಡಲು, ಮದುರೈನ ಕಾಮರಾಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅರೋಕಿಯದಾಸ್ ಈಗ ನ್ಯಾನೊ ತಂತ್ರಜ್ಞಾನದ ಪ್ರಮುಖ ಹೆಲ್ಮೆಟ್ ಅಥವಾ ಮಾಸ್ಕ್ನ್ನು ಕಂಡುಹಿಡಿದಿದ್ದಾರೆ.
![Madurai professor discovers new kind of mask, Madurai professor discovers new kind of mask using nano technology, nano technology mask, nano technology mask news, ನ್ಯಾನೋ ಟೆಕ್ನಾಲಜಿ ಮಾಸ್ಕ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಕಂಡು ಹಿಡಿದ ಮದುರೈ ಪ್ರೋಫೆಸರ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ, ಮದುರೈ ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ,](https://etvbharatimages.akamaized.net/etvbharat/prod-images/tn-mdu-02-nano-mask-mku-prof-script-7208110_30042021064839_3004f_1619745519_122_3004newsroom_1619791131_762.png)
ಈ ಆವಿಷ್ಕಾರದ ಮಾಸ್ಕ್ ನಾವು ಇದ್ದ ಸ್ಥಳದಿಂದಲೇ ಆಮ್ಲಜನಕ ಉತ್ಪಾದನೆ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಲಭ್ಯವಿರುವ ಆಮ್ಲಜನಕದ ಪ್ರಮಾಣವನ್ನು ಲೆಕ್ಕಹಾಕಲು ನಾವು ಈ ಆವಿಷ್ಕಾರದಲ್ಲಿ ತಂತ್ರಜ್ಞಾನವನ್ನು ಸೇರಿಸಿದ್ದೇವೆ. ಈ ತಂತ್ರಜ್ಞಾನವನ್ನು ಹೊಂದಿರುವ ಹೆಲ್ಮೆಟ್ ಅಥವಾ ಮಾಸ್ಕ್ ಬೆಲೆ 500 ರೂಪಾಯಿ ಆಗಿದೆ ಅಂತಾರೆ ಪ್ರೊಫೆಸರ್ ಅರೋಕಿಯದಾಸ್.
![Madurai professor discovers new kind of mask, Madurai professor discovers new kind of mask using nano technology, nano technology mask, nano technology mask news, ನ್ಯಾನೋ ಟೆಕ್ನಾಲಜಿ ಮಾಸ್ಕ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಕಂಡು ಹಿಡಿದ ಮದುರೈ ಪ್ರೋಫೆಸರ್, ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ, ಮದುರೈ ನ್ಯಾನೋ ಟೆಕ್ನಾಲಜಿ ಮಾಸ್ಕ್ ಸುದ್ದಿ,](https://etvbharatimages.akamaized.net/etvbharat/prod-images/tn-mdu-02-nano-mask-mku-prof-script-7208110_30042021064839_3004f_1619745519_1057_3004newsroom_1619791131_800.png)
ಬಟ್ಟೆ ಅಂಗಡಿಗಳು, ವಿಮಾನಯಾನ, ಹಬ್ಬದ ಸಮಯ, ರೈಲು ವಿಭಾಗಗಳು ಸೇರಿದಂತೆ ಕಿಕ್ಕಿರಿದ ಸ್ಥಳಗಳಲ್ಲಿ ಈ ಮಾಸ್ಕ್ ಉಪಯೋಗಿಸಬಹುದಾಗಿದೆ. ಅಂತಹ ಸ್ಥಳಗಳಲ್ಲಿ ಜನರಿಗೆ ಸರಿಯಾದ ಪ್ರಮಾಣದ ಆಮ್ಲಜನಕವನ್ನು ಒದಗಿಸಲು ಈ ತಂತ್ರಜ್ಞಾನವು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಮಾಸ್ಕ್ ಖರೀದಿಗೆ ಖಾಸಗಿ ಕಂಪನಿಗಳು ಸಿದ್ಧವಾಗಿವೆ. ಶೀಘ್ರವಾಗಿ ಸಾರ್ವಜನಿಕ ಬಳಕೆಗೆ ಬರುತ್ತದೆ ಎಂದು ಪ್ರೊಫೆಸರ್ ಹೇಳುತ್ತಾರೆ.
ಒಟ್ಟಿನಲ್ಲಿ ಈ ಮಾಸ್ಕ್ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ನಿಭಾಯಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.