ಚೆನ್ನೈ : ಟಿ-23 ಹುಲಿಯನ್ನು ಬೇಟೆಯಾಡಲು ವನ್ಯಜೀವಿ ಇಲಾಖೆಯ ಆದೇಶದ ವಿರುದ್ಧ ಸಲ್ಲಿಸಲಾಗಿರುವ ಮನವಿಯನ್ನು ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 5ರಂದು ವಿಚಾರಣೆ ನಡೆಸಲಿದೆ.
ಅರ್ಜಿದಾರರಾದ ಉತ್ತರಪ್ರದೇಶ ಮೂಲದ ವನ್ಯಜೀವಿ ಕಾರ್ಯಕರ್ತೆ ಸಂಗೀತಾ ಡೋಗ್ರಾ, ಹುಲಿ ವೈಜ್ಞಾನಿಕವಾಗಿ ನರಭಕ್ಷಕ ಎಂದು ಸಾಬೀತಾಗಿಲ್ಲ. ಈ ಆದೇಶವನ್ನು ನೀಡುವ ಮೊದಲು ಅಧಿಕಾರಿಗಳು ಯಾವುದೇ ಸಂಬಂಧಿತ ಕಾನೂನುಗಳನ್ನು ಅನುಸರಿಸಿಲ್ಲ ಎಂದು ತಿಳಿಸಿದ್ದಾರೆ.
ಮಸಿನಗುಡಿಯಲ್ಲಿ ಹುಲಿ ಈವರೆಗೆ ನಾಲ್ಕು ಜನರನ್ನು ಕೊಂದಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹುಲಿ ಬೇಟೆಯಾಡಲು ತಮಿಳುನಾಡು ಮುಖ್ಯ ವನ್ಯಜೀವಿ ವಾರ್ಡನ್ ಶೇಖರ್ ಕುಮಾರ್ ನೀರಜ್ ಆದೇಶದ ಮೇರೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಯಿತು.
ಮನವಿಗೆ ಪ್ರತಿಕ್ರಿಯಿಸಿದ ಮುಖ್ಯ ವಾರ್ಡನ್, ಈ ಹಿಂದೆ ಹುಲಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದರು. ಅರಣ್ಯ ಇಲಾಖೆಗೆ ಹುಲಿಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಎರಡು ದಿನಗಳಲ್ಲಿ ಹುಲಿ ಹಿಡಿಯಲಾಗುವುದು ಎಂದು ಹೇಳಿದರು. ಮುದುಮಲೈ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವ ಮಾಸಿನಗುಡಿ ಮಾನವ - ಪ್ರಾಣಿ ಸಂಘರ್ಷಕ್ಕೆ ಹೆಸರುವಾಸಿಯಾಗಿದೆ.