ETV Bharat / bharat

ತಮಿಳುನಾಡು ದೇವಾಲಯಗಳಲ್ಲಿ ಮೊಬೈಲ್​ ನಿಷೇಧಿಸಿ ಹೈಕೋರ್ಟ್​ ಆದೇಶ

author img

By

Published : Dec 4, 2022, 1:47 PM IST

ಭದ್ರತೆ ಮತ್ತು ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್​ ಬಳಕೆಯನ್ನು ನಿಷೇಧಿಸಿ ಮದ್ರಾಸ್​ ಹೈಕೋರ್ಟ್​ ಆದೇಶ ಮಾಡಿದೆ.

phone ban in Tamil Nadu temples
ತಮಿಳುನಾಡು ದೇವಾಲಯಗಳಲ್ಲಿ ಮೊಬೈಲ್​ ನಿಷೇಧ

ಮಧುರೈ(ತಮಿಳುನಾಡು): ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್​ಗಳ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್​ ಹೈಕೋರ್ಟ್​ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಬೇಕು ಎಂದು ಕೋರ್ಟ್​ ಹೇಳಿದೆ.

ದೇಗುಲಗಳ ರಕ್ಷಣೆಗಾಗಿ ಮೊಬೈಲ್​ ನಿಷೇಧಿಸಬೇಕು ಎಂದು ಕೋರಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಇವುಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಮಹದೇವನ್ ಮತ್ತು ನ್ಯಾಯಮೂರ್ತಿ ಜೆ. ಸತ್ಯನಾರಾಯಣ ಪ್ರಸಾದ್ ಅವರಿದ್ದ ಪೀಠ, ಹಿಂದೂ ಧಾರ್ಮಿಕ ಮತ್ತು ದತ್ತಿ ಕಾನೂನಿನಡಿ ಈ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಭಕ್ತರು ದೇವಸ್ಥಾನದಲ್ಲಿ ಮೊಬೈಲ್​ ಬಳಸಿ ಪೋಟೋ, ವಿಡಿಯೋ ಮಾಡುವುದು ಹೆಚ್ಚಾಗಿದೆ. ಇದರಿಂದ ಪವಿತ್ರ ಕ್ಷೇತ್ರಗಳಲ್ಲಿನ ವಿಗ್ರಹ ಮತ್ತು ಬೆಲೆಬಾಳುವ ವಸ್ತುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದರಿಂದ ಅವುಗಳ ಭದ್ರತೆಗೆ ಧಕ್ಕೆ ಬರಲಿದೆ ಎಂದು ವಾದಿಸಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ದೇವಸ್ಥಾನದೊಳಗೆ ಮೊಬೈಲ್​ ತರುವುದಕ್ಕೆ ಬ್ರೇಕ್​ ಹಾಕಿ, ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇಗುಲದಲ್ಲೇ ಲಾಕರ್​ ವ್ಯವಸ್ಥೆ ಮಾಡಿಸಿ. ಅಲ್ಲದೇ, ಈ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಎಂದು ಕೋರ್ಟ್​ ಸೂಚಿಸಿದೆ.

ಇದನ್ನೂ ಓದಿ: 4G ಮತ್ತು 5G ಗಿಂತಲೂ 'ಮಾತಾಜಿ' ಮತ್ತು 'ಪಿತಾಜಿ' ಶ್ರೇಷ್ಠ: ಮುಖೇಶ್ ಅಂಬಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.