ಛತ್ತಾಪುರ/ಮಧ್ಯಪ್ರದೇಶ : ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ 37 ಮಂದಿ ಕಾರ್ಮಿಕರನ್ನು ಮಧ್ಯಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.
ವರದಿಗಳ ಪ್ರಕಾರ ಮಹಿಳೆಯರು ಮತ್ತು ಮಕ್ಕಳು ಸೇರಿ 37 ಮಂದಿ ಕಾರ್ಮಿಕರು ಛತ್ತಾಪುರದ ನಿವಾಸಿಗಳಾಗಿದ್ದಾರೆ. ಕೆಲಸ ಹುಡುಕಿಕೊಂಡು ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು.
ಪರಭಾನಿ ಜಿಲ್ಲೆಯಲ್ಲಿ ಕೆಲ ಗುತ್ತಿಗೆದಾರರು ಕಾರ್ಮಿಕರನ್ನು ಬಂಧಿಸಿ ಕೆಲಸ ಮಾಡಲು ಒತ್ತಾಯಿಸಿದರು. ಅಲ್ಲದೇ ಕಳೆದ ಹಲವಾರು ದಿನಗಳಿಂದ ಕಾರ್ಮಿಕರಿಗೆ ಸರಿಯಾದ ಆಹಾರ ಮತ್ತು ನೀರು ನೀಡದೆ ಕೆಲಸ ಮಾಡಲು ಒತ್ತಾಯಿಸಿದ್ದರು ಎನ್ನಲಾಗಿದೆ.
ಬಂಧಿತ ಕಾರ್ಮಿಕರ ಗುಂಪು ತಮ್ಮ ಕುಟುಂಬಗಳಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಛತ್ತಾಪುರದ ಎಸ್‌ಪಿ ಸಚಿನ್ ಶರ್ಮಾ ಮತ್ತು ಸ್ಥಳೀಯ ಪೊಲೀಸರ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದರು.
ಈ ತಂಡವು ಬಂಧಿತ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಅವರನ್ನು ಪುನಃ ಛತ್ತಾಪುರಕ್ಕೆ ಕರೆ ತರಲಾಗುತ್ತಿದೆ ಎಂದು ಎಸ್‌ಪಿ ಸಚಿನ್ ಶರ್ಮಾ ಮಾಹಿತಿ ನೀಡಿದರು.