ಖಾಂಡ್ವಾ(ಮಧ್ಯಪ್ರದೇಶ): ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮಾರ್ಗಸೂಚಿ ಜಾರಿಗೊಳಿಸಲಾಗಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪೊಲೀಸರು ತಿಳಿ ಹೇಳುತ್ತಿದ್ದಾರೆ.
ಇದರ ಮಧ್ಯೆ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸುವಂತಹ ಘಟನೆ ಬೆಳಕಿಗೆ ಬರುತ್ತಿವೆ. ಸದ್ಯ ಅಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆಯೋರ್ವಳು ಹೋಂ ಗಾರ್ಡ್ಗೆ ಕಪಾಳಮೋಕ್ಷ ಮಾಡಿದ್ದಾಳೆ.
ಮಹಿಳೆಯೋರ್ವಳು ತನ್ನ ಮಗನೊಂದಿಗೆ ಬೈಕ್ ಮೇಲೆ ತೆರಳುತ್ತಿದ್ದಳು. ಮಾಸ್ಕ್ ಹಾಕಿಕೊಳ್ಳದ ಕಾರಣ ತಡೆ ಹಿಡಿದಿರುವ ಹೋಂ ಗಾರ್ಡ್ ಶ್ಯಾಮ್ಲಾಲ್ ದಂಡ ಕಟ್ಟುವಂತೆ ತಿಳಿಸಿದ್ದಾನೆ. ಇದೇ ವಿಚಾರಕ್ಕಾಗಿ ಶ್ಯಾಮ್ಲಾಲ್ ಹಾಗೂ ಮಹಿಳೆ ಆಶಾ ಬಾಯಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಮಹಿಳೆ ಹೋಂ ಗಾರ್ಡ್ಗೆ ಕಪಾಳಮೋಕ್ಷ ಮಾಡಿದ್ದಾಳೆ.
-
Madhya Pradesh | A woman allegedly slapped a home guard during checking for violation of mask rule in Khandwa
— ANI (@ANI) May 27, 2021 " class="align-text-top noRightClick twitterSection" data="
There was an argument between the home guard and the woman during checking. There is video evidence of the woman slapping the cop: Police pic.twitter.com/99Ztcq6vqj
">Madhya Pradesh | A woman allegedly slapped a home guard during checking for violation of mask rule in Khandwa
— ANI (@ANI) May 27, 2021
There was an argument between the home guard and the woman during checking. There is video evidence of the woman slapping the cop: Police pic.twitter.com/99Ztcq6vqjMadhya Pradesh | A woman allegedly slapped a home guard during checking for violation of mask rule in Khandwa
— ANI (@ANI) May 27, 2021
There was an argument between the home guard and the woman during checking. There is video evidence of the woman slapping the cop: Police pic.twitter.com/99Ztcq6vqj
ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿಗೆ ಸ್ನೇಹಿತರಿಂದಲೇ ಲೈಂಗಿಕ ಕಿರುಕುಳ ಪ್ರಕರಣ: ವಿಕೃತ ಪಾಪಿಗಳಿಗೆ ಫುಲ್ ಡ್ರಿಲ್
ಇದಾದ ಬಳಿಕ ಕೈಯಲ್ಲಿ ಚಪ್ಪಲಿ ಹಿಡಿದು ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾಳೆ. ಜತೆಗೆ ಅಸಹ್ಯವಾಗಿ ಬೈಯ್ದಿದ್ದಾಳೆ ಎಂದು ತಿಳಿದು ಬಂದಿದೆ. ಇದೇ ವಿಚಾರವಾಗಿ ಮಾತನಾಡಿರುವ ಮಹಿಳೆ ಕೂಡ ಹೋಂ ಗಾರ್ಡ್ ತಮ್ಮೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.