ETV Bharat / bharat

ಭಾರತೀಯರ ಆಶಯವನ್ನು ಚಂದ್ರನತ್ತ ಹೊತ್ತು ಸಾಗಿದ ಉಪಗ್ರಹ​.. ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಕೇಂದ್ರ ಸಚಿವ

ನೂರಾರು ಕೋಟಿ ಭಾರತೀಯರ ಕನಸು, ಭರವಸೆ, ಆಶಯ ಹೊತ್ತು ಸಾಗಿದ ಬಾಹುಬಲಿ ರಾಕೆಟ್ ಚಂದ್ರನತ್ತ ಪ್ರಯಾಣ ಬೆಳಸಿದೆ. ರಾಕೆಟ್​ ಯಶಸ್ವಿಯಾಗಿ ಕಕ್ಷೆಗೆ ಸೇರಿದ ಬಳಿಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಅಭಿನಂದನೆ ಸಲ್ಲಿಸಿದ್ದಾರೆ.

successfully launched Chandrayaan 3  successfully launched Chandrayaan 3 into orbit  Prime Minister Narendra Modi tweet  ಭಾರತೀಯರ ಆಶಯವನ್ನು ಚಂದ್ರನತ್ತ ಹೊತ್ತು ಸಾಗಿದ ಉಪಗ್ರಹ  ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ  ನೂರಾರು ಕೋಟಿ ಭಾರತೀಯರ ಕನಸು  ಬಾಹುಬಲಿ ರಾಕೆಟ್ ಚಂದ್ರನತ್ತ ಪ್ರಯಾಣ  ಮೋದಿ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಅಭಿನಂದನೆ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ  ಚಂದ್ರಯಾನ 3 ಯಶಸ್ವಿ  ಇಸ್ರೋ ವಿಜ್ಞಾನಿಗಳು ಸಂಭ್ರಮ
ಭಾರತೀಯರ ಆಶಯವನ್ನು ಚಂದ್ರನತ್ತ ಹೊತ್ತು ಸಾಗಿದ ಉಪಗ್ರಹ
author img

By

Published : Jul 14, 2023, 4:08 PM IST

Updated : Jul 14, 2023, 4:54 PM IST

ಶ್ರೀಹರಿಕೋಟಾ, ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್‌ವಿಎಂ-3 ಎಂ4 ರಾಕೆಟ್ ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದ ಶಾರ್‌ನ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ಮೂರು ಹಂತಗಳನ್ನು ಪೂರ್ಣಗೊಳಿಸಿದ ನಂತರ, ಚಂದ್ರಯಾನ-3 ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.

  • #WATCH | Sriharikota: "It is indeed a moment of glory for India and destiny for all of us here at Sriharikota who were part of a history in the making. Thank you team ISRO for making India proud & thank you PM Modi for making this possible by unlocking the gates of Sriharikota… pic.twitter.com/uMjvvb1yTw

    — ANI (@ANI) July 14, 2023 " class="align-text-top noRightClick twitterSection" data=" ">

ಈ ಅತ್ಯಂತ ಶಕ್ತಿಶಾಲಿ ರಾಕೆಟ್ ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊತ್ತುಕೊಂಡು ಆಗಸಕ್ಕೆ ಹಾರಿತು. ಸಮಯಕ್ಕೆ ಸರಿಯಾಗಿ ಪೇಲೋಡ್ ಅನ್ನು ಹೊತ್ತಿಸುವ ಮೂಲಕ ಮೊದಲ ಎರಡು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಮೂರನೇ ಹಂತವು ಚಂದ್ರನ ಕಡೆಗೆ ಹೋಗಲು 02.42PM ಕ್ಕೆ ಪೇಲೋಡ್ ಅನ್ನು ಹೊತ್ತಿಸಿತು. ನಿಗದಿತ ಯೋಜನೆಯ ಪ್ರಕಾರ ಈ ಮೂರು ಹಂತಗಳನ್ನು ಸುಗಮವಾಗಿ ನಡೆಸಲಾಗಿದೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

  • Chandrayaan-3 scripts a new chapter in India's space odyssey. It soars high, elevating the dreams and ambitions of every Indian. This momentous achievement is a testament to our scientists' relentless dedication. I salute their spirit and ingenuity! https://t.co/gko6fnOUaK

    — Narendra Modi (@narendramodi) July 14, 2023 " class="align-text-top noRightClick twitterSection" data=" ">

ಬಾಹ್ಯಾಕಾಶ ನೌಕೆಯನ್ನು ಅಗತ್ಯವಿರುವ ಎತ್ತರಕ್ಕೆ ತರಲು ಈ ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತವು 02.54 ಕ್ಕೆ ಕೊನೆಗೊಂಡಿತು ಮತ್ತು ಚಂದ್ರನ ಕಡೆಗೆ ಪ್ರಯಾಣ ಪ್ರಾರಂಭವಾಯಿತು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಘೋಷಿಸಿದರು. ಅದರ ಪ್ರಗತಿ ಸುಗಮವಾಗಿ ಸಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗಿ ಕಕ್ಷೆ ಸೇರುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸಂಭ್ರಮಿಸಿದರು.

  • India today embarked on its historic space journey with the successful launch of Chandrayaan-3.

    My heartfelt congratulations to the @ISRO scientists whose tireless pursuit has today propelled India on the path of scripting a remarkable space odyssey for generations to cherish. pic.twitter.com/YPZCHPbZoq

    — Amit Shah (@AmitShah) July 14, 2023 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, "ಚಂದ್ರಯಾನ-3 ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತದೆ. ಇದು ಪ್ರತಿ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಸಾಕ್ಷಿಯಾಗಿದೆ. ನಾನು ಅವರ ಚೈತನ್ಯ ಮತ್ತು ಜಾಣ್ಮೆಗೆ ವಂದಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.

  • #WATCH | After #Chandrayaan3's successful launch into orbit, Union Minister Jitendra Singh says, "...This is also a vindication of the dream seen by the founding fathers of ISRO, Vikram Sarabhai and others who were constrained of resources but they had confidence in… pic.twitter.com/Oq31i7jZfe

ಇನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು, "ಇದು ನಿಜಕ್ಕೂ ಭಾರತಕ್ಕೆ ವೈಭವದ ಕ್ಷಣವಾಗಿದೆ ಮತ್ತು ಇತಿಹಾಸದ ಭಾಗವಾಗಿರುವ ಶ್ರೀಹರಿಕೋಟಾದಲ್ಲಿ ನಮಗೆಲ್ಲರಿಗೂ ಹಣೆಬರಹವಾಗಿದೆ. ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಇಸ್ರೋ ತಂಡಕ್ಕೆ ಧನ್ಯವಾದಗಳು ಮತ್ತು ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಸಕ್ರಿಯಗೊಳಿಸುವ ಮೂಲಕ ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು" ಎಂದು ಹೇಳಿದರು.

ಇದಕ್ಕೂ ಮೊದಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಚಂದ್ರಯಾನ 3 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಇದೇ ವೇಳೆ ಅನೇಕ ವಿಜ್ಞಾನಿಗಳು ಉಪಸ್ಥಿತರಿದ್ದರು.

  • #WATCH | After #Chandrayaan3's successful launch into orbit, Union Minister Jitendra Singh says, "...This is a moment of glory for us, moment of glory for India and moment of destiny for all of us...I must thank team ISRO for making India proud. I also thank PM Modi for making… pic.twitter.com/v9bVN5PKXa

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, “ಭಾರತವು ಇಂದು ಚಂದ್ರಯಾನ-3 ರ ಯಶಸ್ವಿ ಉಡಾವಣೆಯೊಂದಿಗೆ ತನ್ನ ಐತಿಹಾಸಿಕ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿದೆ. ಇಸ್ರೋ ವಿಜ್ಞಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.

ಓದಿ: "ಚಂದ್ರಯಾನ 3 ರಾಷ್ಟ್ರದ ಭರವಸೆ, ಕನಸುಗಳನ್ನು ಹೊತ್ತೊಯ್ಯಲಿದೆ": ಉಡಾವಣೆಗೂ ಮುನ್ನ ವಿಜ್ಞಾನಿಗಳಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

Last Updated : Jul 14, 2023, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.