ಅಹಮದಾಬಾದ್: ನಗರದ ಮಣಿನಗರ ಪ್ರದೇಶದ ಗುರುದ್ವಾರ ಬಳಿ ಸಾಗಿರಾ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳು ಕಾಣೆಯಾದ ಬಗ್ಗೆ ತಂದೆ ವಿಡಿಯೋ ಬಿಡುಗಡೆ ಮಾಡಿದ ಮೇಲೆ ವಾಸ್ತವತೆ ಬೆಳಕಿಗೆ ಬಂದಿದೆ.
ವಿಡಿಯೋ ಬಿಡುಗಡೆ ಮಾಡಿರುವ ಲುಧಿಯಾನ ನಿವಾಸಿ ಕುಪ್ದೀಪ್ ಸಿಂಗ್ ಸಾಗಿರಾಳ ನಕಲಿ ತಂದೆ ಎಂದು ತಿಳಿದು ಬಂದಿದೆ. ಅಲ್ಲದೇ 17 ವರ್ಷದ ಅಸ್ಸೋಂ ನಿವಾಸಿ ಸಾಗಿರಾಳನ್ನು ತನ್ನ ಸ್ವಂತ ಮಗಳೆಂದು ಹೇಳಿಕೊಂಡು ದೈಹಿಕವಾಗಿ ಹಿಂಸಿಸುತ್ತಿದ್ದರಿಂದ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾಗಿ ಮಾಹಿತಿ. ಮಣಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ.
ವಿಕಲಚೇತನನಾಗಿದ್ದ ಆರೋಪಿ ಸಾಗಿರಾಳನ್ನು ತನ್ನ ಸ್ವಂತ ಮಗಳೆಂದು ಹೇಳಿಕೊಂಡು ವಿವಿಧ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿದ್ದ. ಅಸ್ಸೋಂನ ಸಾಗಿರಾಗೆ ಪಂಜಾಬಿ ಹೆಸರನ್ನು ಇಟ್ಟಿದ್ದ. ಪೊಲೀಸರ ತನಿಖೆಯಲ್ಲಿ ಸಂತ್ರಸ್ತೆಯ ಪೋಷಕರು ಇರುವುದು ಪತ್ತೆಯಾಗಿದೆ. ಪೊಲೀಸ್ ತನಿಖೆಯ ವೇಳೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಅದರಲ್ಲಿ ಸಾಗಿರಾ ರಿಕ್ಷಾ ಮತ್ತು ಬೈಕ್ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ.