ಲಖನೌ (ಉತ್ತರಪ್ರದೇಶ): ಪತ್ನಿ-ಪತಿ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆಯುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದಲ್ಲಿ ಕೌಟುಂಬಿಕ ನ್ಯಾಯಾಲಯದ ಮುಂದೆ ವಿಚಿತ್ರವಾದ ಪ್ರಕರಣವೊಂದು ಬಂದಿದೆ. ಗೆಳೆಯರಿಬ್ಬರು ತಮ್ಮ ಪತ್ನಿಯರನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಈಗ ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ ಅವರಲ್ಲಿ ಒಬ್ಬ ನ್ಯಾಯಾಲಯದ ಮೊರೆ ಇಟ್ಟಿದ್ದಾನೆ.
ಹೌದು, ಲಖನೌ ಕೌಟುಂಬಿಕ ನ್ಯಾಯಾಲಯದ ಮುಂದೆ ಇಂತಹ ಅರ್ಜಿಯನ್ನು ವ್ಯಕ್ತಿಯೊಬ್ಬ ಕಳೆದ ಬುಧವಾರ ಹಾಕಿದ್ದಾನೆ. ರಾಜೇಶ್ ಮತ್ತು ದಿನೇಶ್ (ಹೆಸರು ಬದಲಾಯಿಸಲಾಗಿದೆ) ಇಬ್ಬರೂ ಕಾಲೇಜು ದಿನಗಳಿಂದಲೂ ಆಪ್ತ ಗೆಳೆಯರು. ಇಬ್ಬರೂ ಬೇರೆ-ಬೇರೆ ಯುವತಿಯರನ್ನು ಮದುವೆಯಾಗಿದ್ದರು. ಆದರೆ, ನಂತರದ ಪರಿಸ್ಥಿತಿಯೇ ಬದಲಾಗಿ ಬಿಟ್ಟಿದೆ.
ಪತ್ನಿಯರ ಪರಸ್ಪರ ವಿನಿಮಯ!: ಮದುವೆ ಬಳಿಕ ರಾಜೇಶ್ ಮತ್ತು ದಿನೇಶ್ ತಮ್ಮ ಪತ್ನಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಹಲವು ದಿನಗಳ ವರೆಗೆ ಈ ಬಾಂಧವ್ಯ ಮುಂದುವರಿದಿದೆ. ಕೆಲ ದಿನಗಳ ನಂತರ ರಾಜೇಶ್ನ ಪತ್ನಿ ಮನಸು ದಿನೇಶ್ನತ್ತ ಹೆಚ್ಚು ಆಕರ್ಷಿತವಾಗಲು ಆರಂಭಿಸಿದೆ. ಇದು ರಾಜೇಶ್ ಗಮನಕ್ಕೂ ಬಂದಿದೆ. ಇದನ್ನು ರಾಜೇಶ್ನಿಗೆ ಸಹಿಸಲು ಸಾಧ್ಯವಾಗಿಲ್ಲ.
ವಿಚ್ಛೇದನವೇ ದಾರಿ: ಗೆಳೆಯ ದಿನೇಶ್ ಮೇಲೆ ತನ್ನ ಪತ್ನಿ ಆಕರ್ಷಿತಳಾದ ನಂತರ ರಾಜೇಶ್ಗೆ ವಿಚ್ಛೇದನ ಬಿಟ್ಟು ಬೇರೆ ದಾರಿಯೇ ಕಾಣಿಸಿಲ್ಲ. ಹೀಗಾಗಿ ಆತ ಪತ್ನಿಯಿಂದ ವಿಚ್ಛೇದನಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಪತ್ನಿ ತನ್ನ ಮೇಲಿನ ಮೃಗೀಯ ವರ್ತನೆ ತೋರುತ್ತಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟು ರಾಜೇಶ್, ತನಗೆ ಡಿವೋರ್ಸ್ ಕೊಡಬೇಕೆಂದು ಕೋರ್ಟ್ಗೆ ಕೇಳಿಕೊಂಡಿದ್ದಾನೆ.
ಇಕ್ಕಟ್ಟಿನ ಪ್ರಕರಣವಿದು: ಪತಿಯರು ಮತ್ತು ಪತ್ನಿಯರು ಸೇರಿ ನಾಲ್ವರು ಪರಸ್ಪರ ಒಪ್ಪಿ ವಿನಿಮಯ ಮಾಡಿಕೊಂಡಿದ್ದಾರೆ. ಆದ್ದರಿಂದ ಇದೊಂದು ಇಕ್ಕಟ್ಟಿನ ಪ್ರಕರಣವೇ ಸರಿ ಎಂದು ಹೇಳಲಾಗುತ್ತಿದೆ. ಯಾವುದೇ ವಿಚ್ಛೇದನ ಪ್ರಕರಣವಾದರೂ, ಅದಕ್ಕೆ ನಿಜವಾದ ಕಾರಣ ಆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅನೇಕ ಬಾರಿ ವಾದ - ಪ್ರತಿವಾದದ ನಂತರ ಗಂಡ - ಹೆಂಡತಿಯ ಇತರ ಸಂಬಂಧಗಳು ಬಯಲಿಗೆ ಬರುತ್ತವೆ. ಆದರೆ, ಇಲ್ಲಿ ಮಾತ್ರ ಸ್ವಲ್ಪ ವಿಭಿನ್ನವಾಗಿದೆ. ನಾಲ್ವರು ಸೇರಿ ವಿನಿಮಯ ಮಾಡಿಕೊಂಡಿರುವ ಪ್ರಕರಣ ಎನ್ನುತ್ತಾರೆ ವಕೀಲ ಸಿದ್ಧಾಂತ್ ಕುಮಾರ್.
ಇದನ್ನೂ ಓದಿ: ಭಾರತ ಪ್ರವೇಶಿಸಲು ಮಾನವಶಾಸ್ತ್ರಜ್ಞ ಒಸೆಲ್ಲಾಗೆ ನಿರಾಕರಣೆ: ಕೇರಳದಿಂದ ಬ್ರಿಟನ್ಗೆ ವಾಪಸ್