ಹೈದರಾಬಾದ್: ಪಂಜಾಬ್ನಲ್ಲಿರುವ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳು ದೇಶ ಮಾತ್ರವಲ್ಲ, ಪ್ರಪಂಚದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಇದೀಗ ಹೊಸದೊಂದು ಸುದ್ದಿ ಹೊರಬಿದ್ದಿದೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯೊಬ್ಬ ಬರೋಬ್ಬರಿ 3 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಪಡೆದುಕೊಂಡಿದ್ದಾನೆ. ಈ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾನೆ.
-
Meet Yasir M., LPU https://t.co/NSW7HXG2gL. CSE graduate who is making India proud with a record-breaking package of ₹ 3 Crore at a global MNC in #Germany, which has contributed significantly to the world during the pandemic!
— Lovely Professional University - LPU (@lpuuniversity) July 27, 2022 " class="align-text-top noRightClick twitterSection" data="
Congratulations!#LPU #ThinkBIG #WednesdayThought pic.twitter.com/7yKS7Cnl1Z
">Meet Yasir M., LPU https://t.co/NSW7HXG2gL. CSE graduate who is making India proud with a record-breaking package of ₹ 3 Crore at a global MNC in #Germany, which has contributed significantly to the world during the pandemic!
— Lovely Professional University - LPU (@lpuuniversity) July 27, 2022
Congratulations!#LPU #ThinkBIG #WednesdayThought pic.twitter.com/7yKS7Cnl1ZMeet Yasir M., LPU https://t.co/NSW7HXG2gL. CSE graduate who is making India proud with a record-breaking package of ₹ 3 Crore at a global MNC in #Germany, which has contributed significantly to the world during the pandemic!
— Lovely Professional University - LPU (@lpuuniversity) July 27, 2022
Congratulations!#LPU #ThinkBIG #WednesdayThought pic.twitter.com/7yKS7Cnl1Z
ಕೇರಳ ಮೂಲದ ಯಾಸಿರ್ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಪದವಿ ಪಡೆದುಕೊಂಡಿದ್ದು, ಈತನಿಗೆ ವಿಶ್ವ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ 3ಕೋಟಿ ರೂಪಾಯಿ ಪ್ಯಾಕೇಜ್ ನೀಡಿದೆ. ಎಲ್ಪಿಯುನಿಂದ 2018ರಲ್ಲಿ ಪಾಸ್ ಆಗಿರುವ ಯಾಸಿರ್ ಇಷ್ಟೊಂದು ಪ್ಲೇಸ್ಮೆಂಟ್ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇಷ್ಟೊಂದು ಹೆಚ್ಚಿನ ಪ್ಯಾಕೇಜ್ ಪಡೆದುಕೊಂಡಿರುವ ಸಾಲಿನಲ್ಲಿ ಯಾಸಿರ್ ಮೊದಲಿಗರಾಗಿದ್ದಾರೆ.
ಇದನ್ನೂ ಓದಿರಿ: ಐಐಟಿ-ಐಎಸ್ಎಂ ಧನಬಾದ್ ವಿದ್ಯಾರ್ಥಿಗೆ ಗೂಗಲ್ನಿಂದ ₹56 ಲಕ್ಷ ಪ್ಯಾಕೇಜ್‌ನ ಆಫರ್!
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡ್ತಿದ್ದ ವೇಳೆ ಯಾಸಿರ್ ಓರ್ವ ಬುದ್ಧಿವಂತ ವಿದ್ಯಾರ್ಥಿ ಎಂದು ಗುರುತಿಸಿಕೊಂಡಿದ್ದರು. ಬಿಟೆಕ್ ಸಿಎಸ್ಇ ಪದವೀಧರನಾಗಿರುವ ಇವರು 8.6 ಸಿಜೆಪಿಎಯೊಂದಿಗೆ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ್ದಾರೆ. ವಿದ್ಯಾಭ್ಯಾಸ ಮಾಡ್ತಿದ್ದ ಸಂದರ್ಭದಲ್ಲಿ ಅಲ್ಲಿ ಕಲಿತಿರುವ ಮೂಲ ಅಂಶಗಳು ನನ್ನ ಯಶಸ್ಸಿಗೆ ಕಾರಣವಾಗಿವೆ ಎಂದು ಯಾಸಿರ್ ಹೇಳಿಕೊಂಡಿದ್ದಾರೆ.
ಎಪಿಯುನ ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್, ಮರ್ಸಿಡಿಸ್ ಸೇರಿದಂತೆ ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದು, ಅವರ ವಾರ್ಷಿಕ ಪ್ಯಾಕೇಜ್ 1 ಕೋಟಿಗೂ ಅಧಿಕವಾಗಿದೆ. ಇತ್ತೀಚೆಗೆ ಎಲ್ಪಿಯು ಬಿ.ಟೆಕ್ ಪದವೀಧರ ಹರೇಕೃಷ್ಣ ಮಹತೋ ಸಹ ಬೆಂಗಳೂರಿನಲ್ಲಿರುವ ಗೂಗಲ್ ಆಫೀಸ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಅವರಿಗೆ ವಾರ್ಷಿಕವಾಗಿ 64 ಲಕ್ಷ ರೂ. ಸಿಕ್ಕಿದೆ. ವಿಶೇಷವೆಂದರೆ 2021-22ರ ಬ್ಯಾಚ್ನ ಬರೋಬ್ಬರಿ 431 ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ 10 ಲಕ್ಷ ರೂ,ಗೂ ಅಧಿಕ ಪ್ಯಾಕೇಜ್‌ನ ಕೆಲಸ ಗಿಟ್ಟಿಸಿಕೊಂಡಿದ್ದಾರೆ.