ಗೊಂಡಾ(ಉತ್ತರಪ್ರದೇಶ): ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರಿಗೆ ಬೆಂಬಲಿಸಿ ಮತ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತದಾರರಲ್ಲಿ ಮನವಿ ಮಾಡಿದರು.
ಕೇಂದ್ರ ಸಚಿವರು ಕರ್ನೈಲ್ ಗಂಜ್ ವಿಧಾನಸಭೆಯ ಅಭ್ಯರ್ಥಿ ಅಜಯ್ ಕುಮಾರ್ ಸಿಂಗ್ ಪರ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ ಸಾಧನೆಯನ್ನು ಜನರಿಗೆ ತಿಳಿಸುತ್ತಾ, ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಯಾದರೆ ಉಚಿತ ಎಲ್‌ಪಿಜಿ ಸಿಲಿಂಡರ್ ಕೊಡುವುದಾಗಿ ಆಶ್ವಾಸನೆ ನೀಡಿದರು.
ಈ ಹಿಂದೆ 100 ಪೈಸೆ ಕಳುಹಿಸಿದರೆ 10 ಪೈಸೆ ಸಿಗುತ್ತದೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆದರೆ, ಪ್ರಧಾನಿ ಮೋದಿ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದಾರೆ. ಈಗ ದೇಶದಲ್ಲಿ 100 ಪೈಸೆ ಕೊಟ್ಟರೆ ನೂರು ಪೈಸೆ ಲಭ್ಯವಿದೆ. ಯುಪಿಯಲ್ಲಿ ಶೆಲ್‌ಗಳನ್ನು ತಯಾರಿಸಿ ಬ್ರಹ್ಮೋಸ್ ಘಟಕವನ್ನು ನಿರ್ಮಿಸುವ ಯೋಜನೆ ಇದೆ ಎಂದರು.
ಭಾರತವು ಈಗ ದುರ್ಬಲವಾಗಿಲ್ಲ. ಆದರೆ, ಬಲವಾದ ಕೈಯಲ್ಲಿದೆ. ಮೊದಲು ಯಾರೂ ಭಾರತದ ಮಾತನ್ನು ಕೇಳುತ್ತಿರಲಿಲ್ಲ. ಆದರೆ, ಈಗ ಜಗತ್ತು ಕೆಲಸ ಬಿಟ್ಟು ಭಾರತದ ಮಾತನ್ನು ಕೇಳುತ್ತದೆ. ನಾವು ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆವು. ಈಮೂಲಕ ಭಾರತೀಯ ಸೇನೆ ಗಾಲ್ವಾನ್ ಕಣಿವೆಯಲ್ಲಿ ಹೆಮ್ಮೆ ಮತ್ತು ಧೈರ್ಯವನ್ನು ತೋರಿಸಿದೆ ಎಂದರು.
ರಾಹುಲ್ ಗಾಂಧಿಯವರಿಗೆ ಪ್ರಾಚೀನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಕನಿಷ್ಠ ಇತಿಹಾಸವನ್ನೂ ತಿಳಿದಿಲ್ಲ. ಯುಪಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಇದರಿಂದ ಪ್ರತಿಪಕ್ಷಗಳು ವಿಚಲಿತವಾಗಿವೆ ಎಂದರು.
ಕೊರೊನಾ ಅವಧಿಯಲ್ಲಿ ಯೋಗಿ ಸರ್ಕಾರ ಐತಿಹಾಸಿಕ ಕೆಲಸ ಮಾಡಿದೆ. ಅಗತ್ಯವಿರುವ ಎಲ್ಲರಿಗೂ ಉಚಿತ ಪಡಿತರ ನೀಡಲಾಗಿದೆ. ಪ್ರಧಾನಿ ಮೋದಿ ನಿಜವಾದ ಸಮಾಜವಾದಿ. ದೇಶ ಮತ್ತು ಸಮಾಜಕ್ಕೆ ನಿಜವಾದ ಸೇವೆ ಮಾಡುತ್ತಿದ್ದಾರೆ ಎನ್ನುವ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪ.. ಪಂಜಾಬ್ ಸಿಎಂ ಚನ್ನಿ, ಕೈ ಅಭ್ಯರ್ಥಿ ವಿರುದ್ಧ ಆಪ್ ದೂರು