ನವದೆಹಲಿ: ದೇಶದಲ್ಲಿ 147 ದಿನಗಳ ಬಳಿಕ ಅತಿ ಕಡಿಮೆ ಕೋವಿಡ್ ಪ್ರಕರಣ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 28,204 ಹೊಸ ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,88,508 ಕ್ಕೆ ತಲುಪಿದೆ. ಗುಣಮುಖ ಪ್ರಮಾಣ ಶೇ.97.45 ರಷ್ಟಿದೆ.
ಕಳೆದ 24 ಗಂಟೆಯಲ್ಲಿ 373 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 4,88,682 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
52 ಕೋಟಿ ಡೋಸ್ ಲಸಿಕೆ ವಿತರಣೆ
ಇದುವರೆಗೆ ದೇಶದಾದ್ಯಂತ ಒಟ್ಟು 52.56 ಕೋಟಿ (52,56,35,710) ಡೋಸ್ ಕೋವಿಡ್ ಲಸಿಕೆ ಒದಗಿಸಲಾಗಿದೆ. ಈ ಪೈಕಿ ಇಂದು ಬೆಳಗ್ಗೆ 8 ಗಂಟೆವರೆಗೆ ವ್ಯರ್ಥವಾದ ಡೋಸ್ ಸೇರಿ 51,09,58,562 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
48 ಕೋಟಿ ಮಂದಿಗೆ ಪರೀಕ್ಷೆ
ಇದುವರೆಗೆ 48,32,78,545 ಜನರ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಸೋಮವಾರ 15,11,313 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.
ನಿನ್ನೆಗಿಂತಲೂ ಕಡಿಮೆಯಾದ ಸೋಂಕು
ನಿನ್ನೆ ದೇಶದಲ್ಲಿ 35,499 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 39,686 ಮಂದಿ ಗುಣಮುಖರಾಗಿದ್ದರು. 447 ಮಂದಿ ಸೋಂಕಿಗೆ ಬಲಿಯಾಗಿದ್ದರು.