ETV Bharat / bharat

ದೆಹಲಿಯಲ್ಲಿ ದಟ್ಟ ಮಂಜಿನಿಂದ ವಿಮಾನ, ರೈಲು ಪ್ರಯಾಣದಲ್ಲಿ ವಿಳಂಬ

ದಟ್ಟ ಮಂಜಿನಿಂದ ತತ್ತರಿಸಿದ ರಾಷ್ಟ್ರರಾಜಧಾನಿ - ವಿಮಾನ, ರೈಲು ಪ್ರಯಾಣದಲ್ಲಿ ವಿಳಂಬ - ವಾಯು ಗುಣಮಟ್ಟದಲ್ಲಿ ತೀವ್ರ ಕುಸಿತ

ದಟ್ಟ ಮಂಜಿನಿಂದ ಗೋಚರತೆ ಪ್ರಮಾಣ ಕ್ಷೀಣ; ದೆಹಲಿಯಲ್ಲಿ ವಿಮಾನ, ರೈಲು ಪ್ರಯಾಣದಲ್ಲಿ ವಿಳಂಬ
low-visibility-due-to-dense-fog-delay-in-flight-train-travel-in-delhi
author img

By

Published : Jan 11, 2023, 10:58 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜಿನಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತೆ ಆಗಿದೆ. ಮಂಜಿನಿಂದಾಗಿ ಗೋಚರತೆ ಪ್ರಮಾಣ ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ವಿಮಾನಗಳ ಹಾರಾಟ ವಿಳಂಬವಾಗಿದೆ. ದೆಹಲಿ - ಶಿಮ್ಲಾ, ದೆಹಲಿ - ಕಠ್ಮಂಡು, ದೆಹಲಿ - ಚೆನ್ನಥ, ದೆಹಲಿ - ಜೈಸ್ಮಮೇರ್​, ದೆಹಲಿ - ಬರೇಲಿ, ದೆಹಲಿ - ಮುಂಬೈ, ದೆಹಲಿ - ವಾರಾಣಾಸಿ, ದೆಹಲಿ - ಜೈಪುರ್​​ ಮತ್ತು ದೆಹಲಿ - ಗುವಾಹಟಿ ಸೇರಿದಂತೆ ಅನೇಕ ಮಾರ್ಗಗಳ ವಿಮಾನ ಪ್ರಯಾಣದಲ್ಲಿ ಅಡಚಣೆಯಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಚಳಿಗೆ ತತ್ತರಿಸಿರುವ ಉತ್ತರ ಭಾರತ: ಹೊಸ ವರ್ಷದ ಆಗಮನವಾಗುತ್ತಿದ್ದಂತೆ ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ಶೀತಗಾಳಿ ಹೆಚ್ಚಿದ್ದು, ಮುಂಜಾನೆ ಸಮಯದಲ್ಲಿ ದಟ್ಟ ಮಂಜು ಆವರಿಸುತ್ತಿದೆ. ಇನ್ನು ಈ ನಡುವೆ ಕಡಿಮೆ ಉಷ್ಣಾಂಶದಿಂದ ಜನರು ತತ್ತರಿಸುತ್ತಿದ್ದಾರೆ. ಸಫ್ದರ್​ಜಂಗ್​ನಲ್ಲಿ ಬೆಳಗ್ಗೆ 6.10ರ ಸುಮಾರಿಗೆ ಕನಿಷ್ಟ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಪಂಜಾಬ್​, ವಾಯುವ್ಯ ರಾಜಸ್ಥಾನ, ಜಮ್ಮು ವಲಯ, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತ್ರಿಪುರದಲ್ಲಿ ಭಾರೀ ಚಳಿ ಮತ್ತು ಮಂಜು ಕವಿದ ವಾತಾವರಣ ಇದೆ. ಪಂಜಾಬ್​ನಿಂದ ಬಿಹಾರದವರೆಗೆ ದಟ್ಟ ಮಂಜು ಕವಿದ ವಾತಾವರಣ ಕಾಣಬಹುದಾಗಿದೆ ಎಂದು ಹವಾಮಾನ ಇಲಾಖೆ ಕೂಡ ಟ್ವೀಟ್​ ಮಾಡಿದೆ. ಏನತ್ಮಧ್ಯೆ , ರೈಲು ಪ್ರಯಾಣ ಕೂಡ ವಿಳಂಬಗೊಂಡಿದೆ. ದಟ್ಟ ಮಂಜಿನ ಕಾರಣ 26 ರೈಲುಗಳ ಸಂಚಾರ ವಿಳಂಬವಾಗಲಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.

ದೆಹಲಿಯಲ್ಲಿ ಹದಗೆಟ್ಟ ವಾಯುಗುಣ: ಚಳಿಯ ನಡುವೆಯೇ ದೆಹಲಿಯಲ್ಲಿ ವಾಯುಗುಣ ಮಟ್ಟ ಕುಸಿದಿದೆ. ಎಕ್ಯೂಐ 421ಕ್ಕೆ ಇಳಿದಿದ್ದು, ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ವರದಿಯಾಗಿದೆ. ವಾಯುಗುಣ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹಿನ್ನೆಲೆ ಆಮ್​ ಆದ್ಮಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್​ 3 ಪೆಟ್ರೋಲ್​ ಮತ್ತು ಬಿಎಸ್​ 4 ಡಿಸೇಲ್​ನ ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೆ ಜನವರಿ 12ರವರೆಗೆ ನಿಷೇಧ ಹೇರಿದೆ.

ಜನವರಿ 15ರವೆರೆಗೆ ಶಾಲೆಗೆ ರಜೆ: ಭಾನುವಾರ ರಾತ್ರಿ 8.30ರಿಂದ ಸೋಮವಾರ ಸಂಜೆ 4.30 ರವರೆಗೆ ಗೋಚರತೆ ಪ್ರಮಾಣ 1,000 ಮೀಟರ್‌ಗಿಂತ ಕಡಿಮೆ ಮಟ್ಟವನ್ನು ದಾಖಲಿಸಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಚಳಿ ಹಿನ್ನಲೆ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ 15 ರವರೆಗೆ ವಿಸ್ತರಿಸಲಾಗಿದೆ.

ಶೀಘ್ರದಲ್ಲೇ ವಾತಾವರಣದಲ್ಲಿ ಏರಿಕೆ: ದೆಹಲಿ ಸೇರಿದಂತೆ ಚಳಿಗೆ ತತ್ತರಿಸುತ್ತಿರುವ ಉತ್ತರ ಭಾರತದ ಅನೇಕ ಕಡೆ ಶೀಘ್ರದಲ್ಲೇ ವಾತಾವರಣದಲ್ಲಿ ಏರಿಕೆ ಕಾಣಲಿದೆ. ಪಾಶ್ಚಿಮಾತ್ಯದ ಅಡಚಣೆಯಿಂದ ಹವಾಮಾನ ವ್ಯವಸ್ಥೆಯಲ್ಲಿ ಬದಲಾವಣೆ ಆಗಲಿದೆ. ಮಧ್ಯಪ್ರಾಚ್ಯದಿಂದ ಬೆಚ್ಚಗಿನ ಆರ್ದ್ರ ಗಾಳಿ ಈ ಪ್ರದೇಶವನ್ನು ಸಮೀಪಿಸುತ್ತಿದ್ದು, ಗಾಳಿಯ ದಿಕ್ಕು ಬದಲಾಗಲಿದೆ. ವಾಯುವ್ಯದಿಂದ ಬೀಸುವ ಗಾಳಿಯನ್ನು ಪರ್ವತಗಳು ತಡೆಹಿಡಿಯಲಿದ್ದು, ತಾಪಮಾನದಲ್ಲಿ ಏರಿಕೆ ಕಾಣಲಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಘಟನೆ: ಗೋಫಸ್ಟ್‌ಗೆ ಡಿಜಿಸಿಎ ಶೋಕಾಸ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.