ಅಮ್ರೋಹಾ (ಉತ್ತರ ಪ್ರದೇಶ): ಫೇಸ್ಬುಕ್ನಲ್ಲಿ ಪರಿಚಯವಾದ ಗೆಳೆಯನನ್ನು ಭೇಟಿ ಮಾಡಲು ಬಂದ ಯುವತಿಯೊಬ್ಬಳು ಆತನ ಕೈಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ತೆಲಂಗಾಣದ ನಿಜಾಮಾಬಾದ್ ನಿವಾಸಿ ಉಜ್ಮಾ ಅಬ್ದುಲ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಶಹಜಾದ್ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ?: ಅಮ್ರೋಹಾದಲ್ಲಿರುವ ಚೆಕ್‌ಮೇಟ್ ಸೆಕ್ಯುರಿಟಿ ಕಂಪನಿಯ ಕಚೇರಿಯಲ್ಲಿ ಕೆಲ ದಿನಗಳ ಹಿಂದೆ ಉಜ್ಮಾ ಅಬ್ದುಲ್ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಇದರ ತನಿಖೆ ಆರಂಭಿಸಿದಾಗ ಆಕೆ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಅಲ್ಲದೇ, ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಹಜಾದ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತನೇ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಮದುವೆಗೆ ಒತ್ತಾಯಿಸಿದ್ದ ಯುವತಿ: ತೆಲಂಗಾಣದ ಉಜ್ಮಾ ಅಬ್ದುಲ್ ಮತ್ತು ಉತ್ತರ ಪ್ರದೇಶದ ಅಮ್ರೋಹಾದ ಶಹಜಾದ್ ನಡುವೆ ಫೇಸ್ ಬುಕ್ ಮೂಲಕ ಸ್ನೇಹ ಬೆಳೆದಿತ್ತು. ಇಬ್ಬರೂ ಆನ್‌ಲೈನ್ ಚಾಟಿಂಗ್ ಮಾಡುತ್ತಾ, ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದ್ದರು. ಈ ನಡುವೆ ಎಂದರೆ ನ.6ರಂದು ಶಹಜಾದ್ ಗೆಳೆತಿ ನಜ್ಮಾ ಅಬ್ದುಲ್ಳನ್ನು ಭೇಟಿಯಾಗಲು ಅಮ್ರೋಹಾಕ್ಕೆ ಕರೆಸಿಕೊಂಡಿದ್ದ ಎಂದು ಅಮ್ರೋಹಾ ಎಸ್‌ಪಿ ಆದಿತ್ಯ ಲಾಂಘೆ ತಿಳಿಸಿದ್ದಾರೆ. ತಿಳಿಸಿದ್ದಾರೆ.
ಕತ್ತಿಗೆಗೆ ದುಪಟ್ಟಾದಿಂದ ಬಿಗಿದು ಕೊಲೆ: ಚೆಕ್‌ಮೇಟ್ ಸೆಕ್ಯುರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಹಜಾದ್ ನಜ್ಮಾ ಅಬ್ದುಲ್ಳನ್ನು ಅದೇ ಕಚೇರಿಗೆ ಕರೆಸಿಕೊಂಡಿದ್ದ. ಆಗ ಮದುವೆಯಾಗುವಂತೆ ಶಹಜಾದ್ಗೆ ನಜ್ಮಾ ಒತ್ತಾಯಿಸಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ಶಹಜಾದ್ ಆಕೆಯ ಕತ್ತಿಗೆಗೆ ದುಪಟ್ಟಾದಿಂದ ಬಿಗಿದು, ಬಳಿಕ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ಶಹಜಾದ್ನನ್ನು ಕೊಲೆ ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ತೆಲಂಗಾಣ ಪೊಲೀಸರು ಮತ್ತು ಕೊಲೆಯಾದ ಕುಟುಂಬಕ್ಕೂ ಮಾಹಿತಿ ನೀಡಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಯನ್ನೂ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಆದಿತ್ಯ ಲಾಂಘೆ ಹೇಳಿದ್ದಾರೆ.
ಇದನ್ನೂ ಓದಿ: WhatsApp ಮೂಲಕ ಬಂದ ಯಮ.. ಫ್ಲೇಮ್ ಲಿಲ್ಲಿ ಗಡ್ಡೆ ತಿಂದು ಕಾನ್ಸ್ಟೇಬಲ್ ಅಭ್ಯರ್ಥಿ ಸಾವು