ಇಂದೋರ್ (ಮಧ್ಯ ಪ್ರದೇಶ): ಪ್ರೇಮಿಗಳ ದಿನದಂದು ಇಂದೋರ್‌ನ ಪಲಾಶ್ ನಾಯಕ್ ಎಂಬಾತ ತನ್ನ ಪ್ರಿಯತಮೆಗೆ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಖರೀದಿಸಿ, ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ನಾನು ಈವೆರೆಗೆ ಪಡೆದ ಅತ್ಯುತ್ತಮ ಉಡುಗೊರೆ ಇದಾಗಿದೆ ಎಂದು ಪ್ರೇಯಸಿ ಅಶಾನಾ ಮಂಧನ್ ಸಂತಸ ಹಂಚಿಕೊಂಡಿದ್ದಾರೆ.
ಚಂದ್ರನ ಮೇಲೆ ಭೂಮಿಯನ್ನು ಹೇಗೆ ಖರೀದಿಸಬೇಕು ಎಂಬುದರ ಕುರಿತು ಸಮಗ್ರ ಸಂಶೋಧನೆ ನಡೆಸಿದಾಗ ಪಲಾಶ್ಗೆ ದಿ. ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಬಾಳಿವುಡ್ ಕಿಂಗ್ಖಾನ್ ಶಾರುಖ್ ಖಾನ್ ಚಂದ್ರನ ಮೇಲೆ ಭೂಮಿಯನ್ನು ಹೊಂದಿರುವ ಬಗ್ಗೆ ತಿಳಿದಿದೆ. ಅದೇ ಪ್ರಕ್ರಿಯೆಯನ್ನು ಅನುಸರಿಸಿದ ಆತ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಖರೀದಿಸಿ, ಅದರ ಪ್ರಮಾಣಪತ್ರವನ್ನು ಸಹ ಪಡೆದಿದ್ದಾನೆ.
ಪಲಾಶ್ ಪ್ರಸ್ತುತ ದುಬೈನಲ್ಲಿ ಫ್ರೀ ಲಾಂಚಿಂಗ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಪ್ರಿಯತಮೆ ಅಶಾನಾ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಭೂಮಿಯನ್ನು ಪಲಾಶ್ ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಮೂಲಕ ಖರೀದಿಸಿದ್ದಾರೆ. ಅವರು ಪಡೆದ ಪ್ರಮಾಣಪತ್ರದಲ್ಲಿ ಸಂಪೂರ್ಣ ಸ್ಥಳವನ್ನು ಉಲ್ಲೇಖಿಸಲಾಗಿದೆ.