ETV Bharat / bharat

ವಿದ್ಯಾರ್ಥಿನಿ ಮತ್ತು ಸ್ಟಾರ್ಲಿಂಗ್ ಪಕ್ಷಿಯ 'ಪ್ರೇಮಕಥೆ' ಕೇಳಿದ್ರೆ ಶಾಕ್​ ಆಗೋದು ಪಕ್ಕಾ! - ಸ್ಟಾರ್ಲಿಂಗ್ ಪಕ್ಷಿಯ ಪ್ರೇಮ ಪ್ರಕರಣ

ಪಶ್ಚಿಮ ಬಂಗಾಳದ ಶಿವಪುರ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುಟ್ಟ ಬಾಲಕಿಯೊಬ್ಬಳ ವಿಭಿನ್ನ ಪ್ರೇಮಕಥೆಯೊಂದು ಎಲ್ಲರ ಗಮನ ಸೆಳೆದಿದೆ.

girl and bird friendship
ಸ್ಟಾರ್ಲಿಂಗ್ ಪಕ್ಷಿಯ ಜೊತೆ ವಿದ್ಯಾರ್ಥಿನಿ ಅಂಕಿತಾ
author img

By

Published : Mar 15, 2023, 1:32 PM IST

Updated : Mar 16, 2023, 1:05 PM IST

ವಿದ್ಯಾರ್ಥಿನಿ ಮತ್ತು ಸ್ಟಾರ್ಲಿಂಗ್ ಪಕ್ಷಿಯ ಪ್ರೇಮಕಥೆ

ಪಶ್ಚಿಮ ಬಂಗಾಳ: ಪರಿಶುದ್ದ ಸ್ನೇಹಕ್ಕೆ ಆಡಂಬರದ ಅಗತ್ಯವಿಲ್ಲ. ಅದಕ್ಕೆ ನಂಬಿಕೆ ಮತ್ತು ಸತ್ಯವೇ ಜೀವಾಳ. ಇದಕ್ಕೊಂದು ವಿಶೇಷ ನಿದರ್ಶನ ಸಿಕ್ಕಿದೆ. ಪಶ್ಚಿಮ ಬಂಗಾಳದ ಕಾಂಕ್ಸಾದ ಪಶ್ಚಿಮ ಬುರ್ದ್ವಾನ್‌ನಲ್ಲಿರುವ ಶಿವಪುರ ಪ್ರಾಥಮಿಕ ಶಾಲೆಯು ಕಳೆದ ಕೆಲವು ವರ್ಷಗಳಿಂದ ವಿಚಿತ್ರವಾದ ಪ್ರೇಮಕಥೆಯೊಂದಕ್ಕೆ ಸಾಕ್ಷಿಯಾಗಿದೆ. ಆದರೆ, ಇದು ಹುಡುಗ ಮತ್ತು ಹುಡುಗಿಯ ಪ್ರೇಮಕಥೆಯಲ್ಲ, ಬದಲಾಗಿ ವಿದ್ಯಾರ್ಥಿನಿ ಮತ್ತು ಸ್ಟಾರ್ಲಿಂಗ್ ಪಕ್ಷಿಯ ನಡುವಿನ ಅಪರೂಪದ ಪ್ರೇಮ.

ಹೌದು, ಶಿವಪುರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಅಂಕಿತಾ ಬಗ್ದಿಯನ್ನು ಪ್ರತಿದಿನ ಭೇಟಿ ಮಾಡಲು ಸ್ಟಾರ್ಲಿಂಗ್ ಪಕ್ಷಿ ಮಿಥು ಆಕೆಯ ಸ್ಕೂಲ್​ಗೆ ಆಗಮಿಸುತ್ತದೆ. ಅಂಕಿತಾಳನ್ನು ಮಿಥು ಪ್ರತಿ ದಿನ ಬೆಳಗ್ಗೆ ಬಂದು ಭೇಟಿ ಮಾಡುತ್ತಾಳೆ. ಗೆಳತಿಯ ಪ್ರಾರ್ಥನೆ ವೇಳೆ, ಕ್ಲಾಸ್ ರೂಂನಲ್ಲಿ, ಟಿಫಿನ್ ಟೈಮ್ ವೇಳೆ ಆಕೆಯೊಂದಿಗೆ ಶಾಲೆಯಲ್ಲಿದ್ದು ಸಮಯ ಕಳೆಯುತ್ತಾಳೆ. ಅಂಕಿತಾ ಕೂಡ ತನ್ನ ಸ್ನೇಹಿತೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಟಿಫಿನ್ ಸಮಯದಲ್ಲಿ ಮಿಥುಗೆ ಬಿಸ್ಕೆಟ್, ಹಣ್ಣು ಸೇರಿದಂತೆ​ ತಾನು ತರುವ ಆಹಾರ ಪದಾರ್ಥಗಳನ್ನು ನೀಡುತ್ತಾಳೆ.

ಇದನ್ನೂ ಓದಿ: ಇಬ್ಬರು ಹುಡುಗಿಯರ ಪ್ರೇಮಕಥೆ : ಸಹಜೀವನ ನಡೆಸಲು ಪೊಲೀಸರಿಂದ ಒಪ್ಪಿಗೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೆಯ ಪ್ರಭಾರ ಶಿಕ್ಷಕ ರಾಮದಾಸ್ ಸೊರೇನ್,"ಇದು ಎಲ್ಲೂ ಕಾಣದ ವಿಶೇಷ ಸ್ನೇಹ. ಇಡೀ ಶಾಲೆಯು ಸ್ಟಾರ್ಲಿಂಗ್ ಹಕ್ಕಿಯ ಪ್ರೀತಿಗೆ ಮನಸೋತಿದೆ. ಟಿಫಿನ್ ಸಮಯದಲ್ಲಿ ಪ್ರತಿದಿನ ಮಿಥು ಪಕ್ಷಿಯು ಅಂಕಿತಾಳ ಕೈಯಿಂದ ಕೇಕ್ ಮತ್ತು ಬಿಸ್ಕತ್ತುಗಳನ್ನು ತಿನ್ನುತ್ತದೆ. ಶಾಲೆ ಮುಗಿದ ನಂತರ ಸರಿಯಾಗಿ ಮಿಥು ತನ್ನ ಮರದ ಮನೆಗೆ ಹಿಂತಿರುಗುತ್ತದೆ. ಜೊತೆಗೆ, ಇತರೆ ಮಕ್ಕಳೊಂದಿಗೂ ಆಟವಾಡುತ್ತಾಳೆ. ವಿಶೇಷ ಅಂದ್ರೆ, ಅಂಕಿತಾ ಶಾಲೆಗೆ ಬಾರದಿದ್ದಾಗ ಮಿಥೂ ಕೂಡ ಬಂಕ್ ಮಾಡುತ್ತಾಳೆ. ಅದೊಂದು ದಿನ ಅಂಕಿತಾ ಶಾಲೆಗೆ ಬಾರದ್ದನ್ನು ಕಂಡು ವಿದ್ಯಾರ್ಥಿನಿ ಮನೆಗೆ ಹಾರಿ ಹೋದವಳು ಅಂದು ಬಾರಲೇ ಇಲ್ಲ" ಎಂದರು.

Love story
ಸ್ಟಾರ್ಲಿಂಗ್ ಪಕ್ಷಿಯ ಜೊತೆ ವಿದ್ಯಾರ್ಥಿನಿ ಅಂಕಿತಾ

ಇದನ್ನೂ ಓದಿ: ಬಾಲಕಿಗೆ ವಿಷ ಕುಡಿಸಿ ತಾಳಿ ಕಟ್ಟಿ, ತಾನೂ ವಿಷ ಕುಡಿದ: ಮುಂದೇನಾಯ್ತು..!

'ಈಟಿವಿ ಭಾರತ'ದೊಂದಿಗೆ ತಮ್ಮ ಸ್ನೇಹದ ಕುರಿತು ಅಭಿಪ್ರಾಯ ಹಂಚಿಕೊಂಡ ಅಂಕಿತಾ, "ಮಿಥು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸುತ್ತಾಳೆ. ಆಕೆ ತಡವಾಗಿ ಬಂದಾಗ ನನಗೆ ಬೇಸರವಾಗುತ್ತದೆ, ನಾನು ಅಸಮಾಧಾನಗೊಳ್ಳುತ್ತೇನೆ" ಎಂದು ಹೇಳಿದಳು.

ಇದನ್ನೂ ಓದಿ: ಫಲಿಸದ ಪ್ರೀತಿ: ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ; ಬಾಗಲಕೋಟೆಯಲ್ಲಿ ದುರಂತ ಪ್ರೇಮಕಥೆ!

ಇಂತಹ ವಿಚಿತ್ರ ಸ್ನೇಹವನ್ನು ಕಂಡು ಅಂಕಿತಾ ಪೋಷಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಮಗಳ ಸ್ನೇಹಕ್ಕೆ ಸಾಥ್​ ನೀಡಿದ್ದಾರೆ. "ನಾವು ಮಿಥುವನ್ನು ಪ್ರತಿ ದಿನ ನೋಡುತ್ತೇವೆ. ಪಕ್ಷಿಯು ಶಿಕ್ಷಕರು, ಸಿಬ್ಬಂದಿ ನಮ್ಮ ಕೈಯಿಂದ ಆಹಾರವನ್ನು ತೆಗೆದುಕೊಂಡರೂ ಕೂಡ ಎಂದಿಗೂ ಯಾರ ಬಳಿ ಹೋಗಿಲ್ಲ. ಮಿಥು ನಿಜವಾಗಿಯೂ ಮಕ್ಕಳೊಂದಿಗೆ ಇರಲು ಇಷ್ಟಪಡುತ್ತಾಳೆ" ಎಂದು ಅಂಕಿತಾ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: ಪತಿ ಸಮಾಧಿ ಬಳಿಯೇ ಅಮರಳಾಗಲು 38 ವರ್ಷ ಕಾಯ್ದ ಪತ್ನಿ!

Last Updated : Mar 16, 2023, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.