ETV Bharat / bharat

ಘಟಾನುಘಟಿಗಳಿಗೆ ಮುಖಭಂಗ!: ಮತಪ್ರಭುವಿನ ನಿರ್ಣಯಕ್ಕೆ ಮಂಡಿಯೂರಿದ ನಾಯಕರಿವರು.. - ಯಾವೆಲ್ಲಾ ನಾಯಕರಿಗೆ ಸೋಲು

ಉತ್ತರಪ್ರದೇಶ, ಪಂಜಾಬ್​, ಉತ್ತರಾಖಂಡ, ಮಣಿಪುರ, ಗೋವಾ ವಿಧಾನಸಭೆ ಚುನಾವಣೆಯ ಮತಎಣಿಕೆ ಅಂತಿಮ ಹಂತ ತಲುಪಿದೆ. ದೇಶವೇ ಕುತೂಹಲದ ಕಣ್ಣುಗಳಿಂದ ನಿರೀಕ್ಷಿಸುತ್ತಿದ್ದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಗಟ್ಟಿ ನಾಯಕರಿಗೆ ಮತದಾರರು ನಡುಕ ಹುಟ್ಟಿಸಿದ್ದಾರೆ.

assembly elections
ಪಂಚರಾಜ್ಯ ಚುನಾವಣೆ
author img

By

Published : Mar 10, 2022, 4:50 PM IST

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಇನ್ನೇನು ಬಹುತೇಕ ಅಂಚಿಗೆ ಬಂದಿದೆ. ಪಕ್ಷಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣೀಭೂತರಾಗಬೇಕಾದ ಘಟಾನುಘಟಿಗಳು ತಾವೇ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಅಂಥವರ ಪಟ್ಟಿ ಇಲ್ಲಿದೆ.

ಕ್ಯಾ. ಅಮರೀಂದರ್​ ಸಿಂಗ್
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್​ ಸಿಂಗ್

ಕ್ಯಾ. ಅಮರೀಂದರ್​ ಸಿಂಗ್​: ಪಂಜಾಬ್​ ಮಾಜಿ ಮಖ್ಯಮಂತ್ರಿ, ಪ್ರಭಾವಿ ನಾಯಕ ಕ್ಯಾಪ್ಟನ್​ ಅಮರೀಂದರ್ ಸಿಂಗ್ ತಾವೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕಾಂಗ್ರೆಸ್​ನಿಂದ ಹೊರಬಂದ ಬಳಿಕ ಅವರು ಪಂಜಾಬ್​ ಲೋಕ ಕಾಂಗ್ರೆಸ್​ ಪಕ್ಷ ಸ್ಥಾಪನೆ ಮಾಡಿ ಕಣಕ್ಕಿಳಿದಿದ್ದರು. ಅಲ್ಲದೇ, ಬಿಜೆಪಿ ಜೊತೆಗೆ ಚುನಾವಣಾ ಪೂರ್ವದಲ್ಲಿಯೇ ಮೈತ್ರಿ ಮಾಡಿಕೊಂಡಿದ್ದರು. ಅಮರೀಂದರ್​ ಸಿಂಗ್​ ಅವರ ಲೆಕ್ಕಾಚಾರವನ್ನು ಮತದಾರರು ಬುಡಮೇಲು ಮಾಡಿದ್ದಾರೆ. 19,873 ಮತಗಳಿಂದ ಅವರು ಪರಾಭವ ಹೊಂದಿದ್ದಾರೆ.

ಪುಷ್ಕರ್​ ಸಿಂಗ್​ ಧಾಮ್ನಿ
ಉತ್ತರಾಖಂಡ ಹಾಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ

ಪುಷ್ಕರ್​ ಸಿಂಗ್​ ಧಾಮಿ: ಚುನಾವಣೆಯ ಅಚ್ಚರಿ ಅಂದರೆ, ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆದರೆ, ಹಾಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ನವಜೋತ್ ಸಿಂಗ್​ ಸಿಧು
ಪಂಬಾಜ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್​ ಸಿಧು

ನವಜೋತ್ ಸಿಂಗ್​ ಸಿಧು: ಚುನಾವಣೆಗೂ ಮುನ್ನ ಪಕ್ಷದ ಮೇಲೆ ಭಾರಿ ಪ್ರಭಾವ ಬೀರಿ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೇರಿದ್ದ ನವಜೋತ್​ ಸಿಂಗ್​ ಸಿಧು ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆಪ್​ ಅಭ್ಯರ್ಥಿ ವಿರುದ್ಧ ಸಿಧು 6,750 ಮತಗಳ ಅಂತರದಿಂದ ಸೋಲು ಕಂಡಿದ್ದು, ಕೈ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದೆ.

ಚರಣ್​ಜಿತ್​ ಸಿಂಗ್​ ಚನ್ನಿ
ಪಂಜಾಬ್‌ ಹಾಲಿ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ

ಚರಣ್​ಜಿತ್​ ಸಿಂಗ್​ ಚನ್ನಿ: ಮತದಾರನ ಮರ್ಮ ಏನೆಂದು ಅರಿಯಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಪಂಜಾಬ್​ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಅವರ ಸೋಲೇ ಸಾಕ್ಷಿ. ದಲಿತ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೊಂದಿಗೆ ಕಣಕ್ಕಿಳಿದಿದ್ದ ಚರಣ್‌ಜಿತ್​ 2 ಕ್ಷೇತ್ರದಲ್ಲಿ ಸ್ವತಃ ತಾವೇ ಸೋಲುವ ಮೂಲಕ ಮುಖಭಂಗಕ್ಕೀಡಾಗಿದ್ದಾರೆ.

ಉತ್ಪಲ್​ ಪರಿಕ್ಕರ್​
ಮಾಜಿ ಕೇಂದ್ರ ಸಚಿವ ದಿ. ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್​ ಪರಿಕ್ಕರ್​

ಉತ್ಪಲ್​ ಪರಿಕ್ಕರ್​: ಗೋವಾದ ಮಾಜಿ ಸಿಎಂ ಮನೋಹರ್​ ಪರಿಕ್ಕರ್​ ಅವರ ಪುತ್ರ ಉತ್ಪಲ್​ ಪರಿಕ್ಕರ್​ಗೆ ಜನರು ಮನೆಯ ಹಾದಿ ತೋರಿಸಿದ್ದಾರೆ. ತಮ್ಮ ತಂದೆಯ ಬಳಿಕ ತಾವೇ ಪಕ್ಷದ ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಉತ್ಪಲ್​ಗೆ ಪಕ್ಷ ಟಿಕೆಟ್​ ನೀಡಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಉತ್ಪಲ್​ ಸೋಲುಡಿದ್ದಾರೆ.

ಹರೀಶ್​ ರಾವತ್
ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಿಎಂ ಹರೀಶ್​ ರಾವತ್

ಹರೀಶ್​ ರಾವತ್​: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್​ನ ಹರೀಶ್​ ರಾವತ್​ ಸೋಲನುಭವಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮುಂದಿನ ಸಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹರೀಶ್​ ರಾವತ್​ 14,000 ಮತಗಳ ಅಂತರದಿಂದ ಸೋಲನುಭವಿಸಿದ್ದು ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸ್ವಾಮಿ ಪ್ರಸಾದ್​ ಮೌರ್ಯ
ಯುಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ

ಸ್ವಾಮಿ ಪ್ರಸಾದ್​ ಮೌರ್ಯ: ಉತ್ತರಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ ಅವರು ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಹಿಂದುಳಿದ ಸಮಾಜದ ನಾಯಕ ಎಂದೇ ಗುರುತಿಸಿಕೊಂಡಿದ್ದ ಮೌರ್ಯ ಅವರು ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಪೆಟ್ಟು ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಅವರೇ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದಾರೆ.

ಮಾಳ್ವಿಕಾ ಸೂದ್​
ಸೋನು ಸೂದ್ ಸಹೋದರಿ ಮಾಳ್ವಿಕಾ ಸೂದ್​

ಮಾಳ್ವಿಕಾ ಸೂದ್​: ನಟ ಸೋನು ಸೂದ್​ ಅವರ ಸಹೋದರಿ ಮಾಳ್ವಿಕಾ ಸೂದ್​ ಕಾಂಗ್ರೆಸ್​ಗೆ ಸೇರ್ಪಡೆಯಾಗಿ ಪಂಜಾಬ್​ನ ಮೊಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಮತದಾರ ಮಾತ್ರ ಅವರ ಕೈ ಹಿಡಿದಿಲ್ಲ. 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಸುಖಬೀರ್ ಸಿಂಗ್ ಬಾದಲ್​
ಸುಖಬೀರ್ ಸಿಂಗ್ ಬಾದಲ್​

ಸುಖಬೀರ್ ಸಿಂಗ್ ಬಾದಲ್​: ಪಂಜಾಬ್​ನ ಪ್ರಭಾವಿ ನಾಯಕ, ಶಿರೋಮಣಿ ಅಕಾಲಿಕ ದಳ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್​ ಅವರು ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಭಾರೀ ಮತಗಳ ಅಂತರದಿಂದ ಆಪ್​ ಅಭ್ಯರ್ಥಿ ವಿರುದ್ಧ ಮಂಡಿಯೂರಿದ್ದಾರೆ.

ಪ್ರಕಾಶ್​ ಸಿಂಗ್​ ಬಾದಲ್​: ಪಂಜಾಬ್​ನ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಪ್ರಕಾಶ್​ ಸಿಂಗ್​ ಬಾದಲ್​ ಅವರೂ ಕೂಡ ನಿರಾಸೆ ಅನುಭವಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.