ETV Bharat / bharat

Lok Sabha Election: ಶುಕ್ರವಾರ ವಿರೋಧ ಪಕ್ಷಗಳ ಸಭೆ.. ಪಾಟ್ನಾದಲ್ಲಿ ಬೀಡುಬಿಟ್ಟ ಮಹಾ ನಾಯಕರು! - ಕೇಂದ್ರ ಸುಗ್ರೀವಾಜ್ಞೆ ವಿರುದ್ಧ ಚರ್ಚೆಗೆ ಆಗ್ರಹ

Lok Sabha Election: ಲೋಕಸಭೆ ಚುನಾವಣೆ ಕಾವು ಶುರುವಾಗಿದ್ದು, ಜೂನ್ 23 ರಂದು ನಡೆಯಲಿರುವ ವಿರೋಧ ಪಕ್ಷಗಳ ಸಭೆಯ ಕುರಿತು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಹೈಡ್ರಾಮಾ ಶುರುವಾಗಿದೆ. ವಿರೋಧ ಪಕ್ಷಗಳ ಹಲವು ಹಿರಿಯ ನಾಯಕರು ಪಾಟ್ನಾ ತಲುಪಲಿದ್ದು, ಸುದೀರ್ಘ ಚರ್ಚೆ ನಡೆಯಲಿದೆ.

Opposition Meeting  Opposition parties meeting  meeting of opposition parties in Patna on June 23  Arvind Kejriwal will come to Patna  Mamata Banerjee will come to Patna  Bhagwant Mann will come to Patna  CM Nitish Kumar  Deputy CM Tejashwi Yadav  Lok Sabha Election 2024  ಪಾಟ್ನಾದಲ್ಲಿ ಬೀಡುಬಿಟ್ಟ ಮಹಾ ನಾಯಕರು  ಶುಕ್ರವಾರ ವಿರೋಧ ಪಕ್ಷಗಳ ಸಭೆ  ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಹೈಡ್ರಾಮ ಶುರು  ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ  Lok Sabha Election  ಸಿಎಂ ನಿವಾಸದಲ್ಲಿ ವಿರೋಧ ಪಕ್ಷಗಳ ಸಭೆ  ನಾಳೆ ಪಾಟ್ನಾ ತಲುಪಲಿರುವ ಉಳಿದ ನಾಯಕರು  ಕೇಂದ್ರ ಸುಗ್ರೀವಾಜ್ಞೆ ವಿರುದ್ಧ ಚರ್ಚೆಗೆ ಆಗ್ರಹ  ಕಟೌಟ್​ಗಳಿಂದ ಕಂಗೊಳಿಸುತ್ತಿರುವ ಪಾಟ್ನಾ
ಶುಕ್ರವಾರ ವಿರೋಧ ಪಕ್ಷಗಳ ಸಭೆ
author img

By

Published : Jun 22, 2023, 2:22 PM IST

Updated : Jun 22, 2023, 2:36 PM IST

ಪಾಟ್ನಾ, ಬಿಹಾರ: ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಆದರೆ, ಅದಕ್ಕೂ ಒಂದು ದಿನ ಮುಂಚಿತವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನಗರದಲ್ಲಿ ಬೀಡುಬಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಾಟ್ನಾ ತಲುಪಿದ ನಂತರ ಲಾಲು ಯಾದವ್ ಅವರನ್ನು ಭೇಟಿ ಮಾಡಲು ರಾಬ್ರಿ ನಿವಾಸಕ್ಕೆ ತೆರಳಲಿದ್ದಾರೆ. ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಲಾಲು ಪ್ರಸಾದ್​ ಯಾದವ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರು ಇಂದು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ. ಇವರಲ್ಲದೆ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಪಾಟ್ನಾ ತಲುಪುತ್ತಿದ್ದಾರೆ.

ನಾಳೆ ಪಾಟ್ನಾ ತಲುಪಲಿರುವ ಉಳಿದ ನಾಯಕರು: ವಿರೋಧ ಪಕ್ಷದ ಹಿರಿಯ ನಾಯಕರು ಪಾಟ್ನಾಗೆ ಆಗಮಿಸುತ್ತಿರುವುದರಿಂದ ಮುಖ್ಯಮಂತ್ರಿ ನಿವಾಸ ಮಾತ್ರವಲ್ಲದೇ ಲಾಲು ಕುಟುಂಬದ ನಿವಾಸದಲ್ಲೂ ಇಂದಿನಿಂದ ರಾಜಕೀಯ ಚಟುವಟಿಕೆ ಹೆಚ್ಚಲಿದೆ. ಅಂದ ಹಾಗೆ, ಇವರೆಲ್ಲರಿಗೂ ರಾಜ್ಯ ಅತಿಥಿ ಗೃಹದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ನಾಳೆ ಪಾಟ್ನಾ ತಲುಪಲಿದ್ದಾರೆ.

ಸಿಎಂ ನಿವಾಸದಲ್ಲಿ ವಿರೋಧ ಪಕ್ಷಗಳ ಸಭೆ: ಮುಖ್ಯಮಂತ್ರಿ ನಿವಾಸದಲ್ಲಿ ಬೆಳಗ್ಗೆ 11ರಿಂದ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಭೆಗೆ ಮಾರ್ಗಸೂಚಿ ಸಿದ್ಧಪಡಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆ ವಿರೋಧ ಪಕ್ಷಗಳ ಪ್ರಬಲ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ಲೋಕಸಭೆಯ ಬಹುತೇಕ ಸ್ಥಾನಗಳಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಭೆಗೂ ಮುನ್ನ ಲಾಲು ಯಾದವ್ ಅವರು ಬುಧವಾರ ತಡರಾತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಆ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಕೇಂದ್ರ ಸುಗ್ರೀವಾಜ್ಞೆ ವಿರುದ್ಧ ಚರ್ಚೆಗೆ ಆಗ್ರಹ: ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆ ವಿರುದ್ಧ ಅರವಿಂದ್ ಕೇಜ್ರಿವಾಲ್ ದೇಶಾದ್ಯಂತ ಆಂದೋಲನ ನಡೆಸುತ್ತಿದ್ದಾರೆ. ಇದೇ ವೇಳೆ, ವಿರೋಧ ಪಕ್ಷಗಳ ಸಭೆಗೂ ಮುನ್ನವೇ ವಿರೋಧ ಪಕ್ಷದ ನಾಯಕರಿಂದ ನೆರವು ಕೋರಿ ಪತ್ರ ಬರೆದಿದ್ದಾರೆ. ಅಲ್ಲದೆ ದೆಹಲಿಯಲ್ಲಿ ತಂದಿರುವ ಸುಗ್ರೀವಾಜ್ಞೆ ಬಗ್ಗೆ ಈ ಸಭೆಯಲ್ಲಿ ಮೊದಲು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು. ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕೂಡ ಇಂದು ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಬಹುದು.

ಕಟೌಟ್​ಗಳಿಂದ ಕಂಗೊಳಿಸುತ್ತಿರುವ ಪಾಟ್ನಾ: ವಿರೋಧ ಪಕ್ಷಗಳ ಸಭೆಗೆ ಸಂಭ್ರಮ ಹೆಚ್ಚಿದೆ. ರಾಜಧಾನಿ ಪಾಟ್ನಾದ ಹಲವೆಡೆ ವಿರೋಧ ಪಕ್ಷಗಳ ನಾಯಕರ ಪೋಸ್ಟರ್​ಗಳು ರಾರಾಜಿಸುತ್ತಿವೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಆರ್‌ಜೆಡಿ ಮತ್ತು ಜೆಡಿಯು ನಾಯಕರ ಪರವಾಗಿ ಪಾಟ್ನಾದ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಮಹಾಮೈತ್ರಿಕೂಟದ ಮುಖಂಡರು ಮತ್ತು ಕಾರ್ಯಕರ್ತರು ಈ ಸಭೆಯ ಬಗ್ಗೆ ಉತ್ಸುಕರಾಗಿದ್ದಾರೆ.

ಓದಿ: 'RaGa ek mohra': ರಾಹುಲ್ ಗಾಂಧಿ ಕುರಿತ ಅನಿಮೇಟೆಡ್ ವಿಡಿಯೋ ಹರಿಬಿಟ್ಟ ಬಿಜೆಪಿ.. ಆದಿಪುರುಷ, ರಾವಣನ ಪಾತ್ರದೊಂದಿಗೆ ಹೋಲಿಕೆ

Last Updated : Jun 22, 2023, 2:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.