ETV Bharat / bharat

ದೆಹಲಿಯಲ್ಲಿ ಮೇ 31 ರವರೆಗೆ ಲಾಕ್‌ಡೌನ್​ ವಿಸ್ತರಣೆ - ದೆಹಲಿ ಲಾಕ್​ ಡೌನ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್​ ವಿಸ್ತರಣೆ ಮಾಡಲಾಗಿದೆ.

Lockdown has been extended till 31st May in Delhi
ದೆಹಲಿಯಲ್ಲಿ ಮೇ 31 ರವರೆಗೆ ಲಾಕ್​ ಡೌನ್​ ವಿಸ್ತರಣೆ
author img

By

Published : May 23, 2021, 2:27 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರಗಳ ಕಾಲ ಲಾಕ್​ಡೌನ್ ವಿಸ್ತರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಪಾಸಿಟಿವಿಟಿ ಪ್ರಮಾಣ ಇನ್ನೂ ಶೇ. 5 ಕ್ಕಿಂತ ಕೆಳಗೆ ಬಂದಿಲ್ಲ. ಆದ್ದರಿಂದ ಮೆಟ್ರೋ ಸೇವೆ ಸ್ಥಗಿತ ಸೇರಿದಂತೆ ಎಲ್ಲಾ ನಿರ್ಬಂಧಗಳು ಮುಂದುವರೆಯಲಿದೆ ಎಂದರು.

ಲಾಕ್‌ಡೌನ್​ ಬಳಿಕ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಿದೆ. ಹಾಗಾಗಿ, ಇದುವರೆಗೆ ಕಾಪಾಡಿಕೊಂಡು ಬಂದ ಪರಿಸ್ಥಿತಿಯನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಆದ್ದರಿಂದ ಮುಂದಿನ ಸೋಮವಾರದ ಬೆಳಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್​ ವಿಸ್ತರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಏಪ್ರಿಲ್ ಮಧ್ಯದಲ್ಲಿ ಶೇ.35 ಇದ್ದ ಪಾಸಿಟಿವಿಟಿ ಪ್ರಮಾಣ ಶೇ. 10 ಕ್ಕೆ ಇಳಿದಿದೆ. ಇದು ಶೇ. 5 ಕ್ಕೆ ಇಳಿಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ದೆಹಲಿ ಸಿಎಂ ತಿಳಿಸಿದರು.

ದೆಹಲಿಯಲ್ಲಿ ಶನಿವಾರ 6,430 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.