ನವದೆಹಲಿ: ಮದ್ಯವು ಟಾನಿಕ್ಗಿಂತ ಕಡಿಮೆಯೇನಿಲ್ಲ. ಕೊರೊನಾ ಅವಧಿಯಲ್ಲಿ ಜನರಿಗಿದು ಹೆಚ್ಚು ಮುಖ್ಯವೆಂದು ತೋರುತ್ತದೆ. ಬಹುಶಃ ಅಂಗಡಿ ತೆರೆದ ಕೂಡಲೇ ಇಲ್ಲಿ ಜನಸಂದಣಿ ಇರುವುದಕ್ಕೆ ಇದೇ ಕಾರಣವಿರಬಹುದು ಎಂದು ಕೇಂದ್ರ ಉಕ್ಕು ಖಾತೆ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಸ್ತೆ ಹೇಳಿದ್ದಾರೆ.
ಆಲ್ಕೋಹಾಲ್ ಜನರಿಗೆ ಟಾನಿಕ್‌ನಂತೆ ಕಾಣುತ್ತದೆ. ಜನರ ಅಗತ್ಯಕ್ಕೆ ತಕ್ಕಂತೆ ಮದ್ಯದಂಗಡಿ ತೆರೆಯಬೇಕೆಂದು ನಾವು ಹೆಚ್ಚು ಬೇಡಿಕೆಯಿಟ್ಟಿದ್ದೇವೆ. ಕೊರೊನಾ ಅವಧಿಯಲ್ಲಿ ಜನರು ಇದರ ಅಗತ್ಯವನ್ನು ಹೆಚ್ಚು ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಮದ್ಯವು ರಾಜ್ಯದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಆದ್ದರಿಂದ ಬಾರ್ ತೆರೆಯುವುದು ಸರ್ಕಾರ ಮತ್ತು ಜನರಿಗೆ ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಪಕ್ಷದ ಕೆಲವು ನಾಯಕರು ಸೇರಿದಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.