ಹೈದರಾಬಾದ್,ತೆಲಂಗಾಣ: ಸೆಪ್ಟೆಂಬರ್ 17ರಂದು ಹೈದರಾಬಾದ್ ವಿಮೋಚನಾ ದಿನವಾಗಿ ಆಚರಣೆ ಮಾಡುವಂತೆ ಕೇಂದ್ರ ಸರ್ಕಾರ ಘೋಷಿಸಿತ್ತು. ಅದರಂತೆ ಇಂದು ರಾಜ್ಯದೆಲ್ಲೆಡ ವಿಮೋಚನಾ ದಿನವನ್ನು ಆಚರಿಸಲಾಗಿದೆ.
ಇನ್ನು ವಿಮೋಚನ ದಿನ ಕುರಿತು ನಿನ್ನೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ ವಿಮೋಚನೆ ಎಂಬ ಪದವೇ ತಪ್ಪು, ಏಕೆಂದರೆ ಹೈದರಾಬಾದ್ ಭಾರತದ ಅವಿಭಾಜ್ಯ ಅಂಗವಾಗಿದ್ದು ಹೀಗಿರುವಾಗ ವಿಮೋಚನೆ ಎಂಬ ಪದ ಬಳಸುವುದು ಸೂಕ್ತವಲ್ಲ ಎಂದು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಿಮೋಚನೆ ಎಂಬ ಪದವೇ ತಪ್ಪು. ಏಕೆಂದರೆ ಹೈದರಾಬಾದ್ ಭಾರತದ ಅವಿಭಾಜ್ಯ ಅಂಗವಾಗಿದ್ದ ಅದು ಯಾವತ್ತಿಗೂ ಭಾರತದಿಂದ ಬೇರ್ಪಡುವುದಿಲ್ಲ ಹೀಗಾಗಿ ವಿಮೋಚನೆ ದಿನ ಎಂದು ಆಚರಿಸುವ ಬದಲಿಗೆ ಏಕೀಕರಣ ದಿನವೆಂದು ಆಚರಿಸಬೇಕು ಎಂದು ಹೇಳಿದರು.
ಇದೇ ವಿಚಾರವಾಗಿ ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರಿಗೆ ರಾಷ್ಟ್ರೀಯ ಏಕೀಕರಣ ದಿನ ಎಂಬ ಪದವು ವಿಮೋಚನೆ ಎಂಬ ಪದಕ್ಕಿಂತ ಹೆಚ್ಚು ಸೂಕ್ತವಾಗಿದೆ. ಆದ ಕಾರಣ ಸೆಪ್ಟೆಂಬರ್ 17ರಂದು ವಿಮೋಚನೆ ದಿನ ಎಂದು ಕರೆಯುವ ಬದಲು ಏಕೀಕರಣ ದಿನ ಎಂದು ಆಚರಿಸುವಂತೆ ಕೋರಿ ಪತ್ರ ಬರೆದಿರುವುದಾಗಿ ಒವೈಸಿ ಹೇಳಿದರು.
ಇದನ್ನೂ ಓದಿ: 1947ರಲ್ಲೇ ಭಾರತ ಸ್ವಾತಂತ್ರ್ಯ, ಹೈದರಾಬಾದ್ನಲ್ಲಿ ಈಗಲೂ ನಿಜಾಮ್ ಆಳ್ವಿಕೆ: ಅಮಿತ್ ಶಾ ಟೀಕೆ