ETV Bharat / bharat

ಒಂದು ದೇಶ, ಒಂದು ಚುನಾವಣೆ ಬಗ್ಗೆ ಶಾಸಕಾಂಗ ನಿರ್ಧರಿಸುತ್ತೆ: ಮುಖ್ಯ ಚು. ಆಯುಕ್ತ

author img

By

Published : Nov 10, 2022, 1:15 PM IST

ಒಂದು ರಾಷ್ಟ್ರ, ಒಂದು ಚುನಾವಣೆ ಎನ್ನುವುದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಯನ್ನು ಸೂಚಿಸುತ್ತದೆ.

ಒಂದು ದೇಶ, ಒಂದು ಚುನಾವಣೆ ಬಗ್ಗೆ ಶಾಸಕಾಂಗ ನಿರ್ಧರಿಸುತ್ತೆ: ಆಯುಕ್ತ ರಾಜೀವ್ ಕುಮಾರ್
One Nation One Election is for legislature to decide says CEC Rajiv Kumar

ಪುಣೆ (ಮಹಾರಾಷ್ಟ್ರ): ಒಂದು ದೇಶ, ಒಂದು ಚುನಾವಣೆ ವಿಷಯವನ್ನು ನಿರ್ಧರಿಸುವುದು ಶಾಸಕಾಂಗದ ಕೆಲಸವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ. ಅಂಥ ನಿರ್ಧಾರವನ್ನು ಆಡಳಿತಾತ್ಮಕವಾಗಿ ಚುನಾವಣಾ ಆಯೋಗ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಈ ವಿಚಾರವು ಸಾಕಷ್ಟು ಸಾರಿಗೆ ಸಾಗಾಟಗಳನ್ನು ಒಳಗೊಂಡಿರುತ್ತದೆ ಮತ್ತು ಸಾಕಷ್ಟು ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಆದರೆ ಇದು ಶಾಸಕಾಂಗದ ವ್ಯಾಪ್ತಿಯ ವಿಷಯವಾಗಿದ್ದು, ಅವರೇ ಈ ಬಗ್ಗೆ ನಿರ್ಧರಿಸಬೇಕೆಂದು ಕುಮಾರ್ ಹೇಳಿದರು.

ಇದು ಆಯೋಗದ ವ್ಯಾಪ್ತಿ ಮತ್ತು ಕಾರ್ಯದಲ್ಲಿ ಇಲ್ಲ. ಆದರೆ ಖಂಡಿತವಾಗಿಯೂ ಅದು ಜಾರಿಯಾದರೆ ಅದನ್ನು ಆಡಳಿತಾತ್ಮಕವಾಗಿ ಆಯೋಗವು ನಿಭಾಯಿಸಬಹುದು ಎಂದು ನಾವು ನಮ್ಮ ನಿಲುವನ್ನು ತಿಳಿಸಿದ್ದೇವೆ. ಆದರೆ ಇದು ಶಾಸಕಾಂಗ ಆಡಳಿತದ ವ್ಯಾಪ್ತಿಯಲ್ಲಿದೆ ಎಂದು ಅವರು ಹೇಳಿದರು.

ಒಂದು ರಾಷ್ಟ್ರ, ಒಂದು ಚುನಾವಣೆ ಎನ್ನುವುದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಯನ್ನು ಸೂಚಿಸುತ್ತದೆ. ಪ್ರಧಾನಿ ಮೋದಿಯವರ ಎರಡನೇ ಅವಧಿಯ ಆರಂಭದ ನಂತರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಮ್ಮ ಸಾಂಪ್ರದಾಯಿಕ ಭಾಷಣದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಕಲ್ಪನೆಯನ್ನು ಅನುಮೋದಿಸಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯನ್ನು ಬಿಜೆಪಿಯ ಹಲವು ಪ್ರಮುಖ ನಾಯಕರು ಶ್ಲಾಘಿಸಿದ್ದಾರೆ. ದೇಶದ ಸಂಪನ್ಮೂಲ, ಸಮಯ ಮತ್ತು ವೆಚ್ಚವನ್ನು ಉಳಿಸುವುದು ಏಕಕಾಲಿಕ ಚುನಾವಣೆಯ ಹಿಂದಿನ ಕಲ್ಪನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ನಾನೇ ಸ್ಟಾರ್ ಕ್ಯಾಂಪೇನರ್: ಬಸನಗೌಡ ಪಾಟೀಲ್​ ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.