ETV Bharat / bharat

ಚಿರತೆ ದಾಳಿಗೆ ವ್ಯಕ್ತಿ ಬಲಿ - Gir forest

ಗುಜರಾತ್‌ನ ಅಮ್ರೆಲಿ ಜಿಲ್ಲೆಯ ಗಿರ್ ಅರಣ್ಯದಲ್ಲಿನ ಅಮೃತ್‌ಪುರದ 75 ವರ್ಷದ ವ್ಯಕ್ತಿಯನ್ನು ಚಿರತೆ ದಾಳಿ ಮಾಡಿ ಕೊಂದಿದೆ.

ವ್ಯಕ್ತಿಯನ್ನೇ ಕೊಂದು ತಿಂದಿತು ಈ ನರಭಕ್ಷಕ ಚಿರತೆ!

author img

By

Published : Jan 27, 2021, 11:28 PM IST

ಅಮ್ರೆಲಿ ​: ಗುಜರಾತ್‌ನ ಅಮ್ರೆಲಿ ಜಿಲ್ಲೆಯ ಗಿರ್ ಅರಣ್ಯದಲ್ಲಿನ ಹಳ್ಳಿಯೊಂದರ 75 ವರ್ಷದ ವ್ಯಕ್ತಿಯನ್ನು ಚಿರತೆ ದಾಳಿ ಮಾಡಿ ಕೊಂದಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಅಮ್ರೆಲಿ ಜಿಲ್ಲೆಯ ದಲ್ಖಾನಿಯಾ ಶ್ರೇಣಿಯ ಅಮೃತ್‌ಪುರ ಗ್ರಾಮದ ಜಮೀನೊಂದರಲ್ಲಿ ಮನುಭಾಯ್ ಸವಲಿಯಾ ಶವ ಪತ್ತೆಯಾಗಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿರತೆಯು ಭಾಗಶಃ ತಿಂದಿದೆ. ಮೃತದೇಹವು ಜಮೀನಿನಲ್ಲಿ ಪತ್ತೆಯಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮವು ಅರಣ್ಯ ಪ್ರದೇಶದಲ್ಲಿದ್ದು, ಸಾಕಷ್ಟು ಚಿರತೆಗಳಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅನ್‌ಶುಮನ್ ಶರ್ಮಾ ತಿಳಿಸಿದ್ದಾರೆ.

ವ್ಯಕ್ತಿಯನ್ನೇ ಕೊಂದು ತಿಂದಿತು ಈ ನರಭಕ್ಷಕ ಚಿರತೆ!
ಅರಣ್ಯ ಅಧಿಕಾರಿಗಳು

ಸಾವನ್ನಪ್ಪಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನ ಜಮೀನಿನಲ್ಲೇ ಸರಪಳಿಯಿಂದ ಕಟ್ಟಿಹಾಕಲಾಗಿತ್ತು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.