ಹೈದರಾಬಾದ್: ತೆಲಂಗಾಣ ಹೈಕೋರ್ಟ್ ವಕೀಲ ದಂಪತಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಕುಂಟ ಶ್ರೀನಿವಾಸ್, ಆರೋಪಿ-2 ಚಿರಂಜೀವಿ, ಆರೋಪಿ-3 ಅಕ್ಕಪಾಕ ಕುಮಾರ್ ಮತ್ತು ಆರೋಪಿ ವಸಂತ ರಾವ್ನನ್ನು ಪೊಲೀಸರು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಬಂಧಿಸಲಾಗಿದೆ ಎಂದು ಐಜಿ ನಾಗಿರೆಡ್ಡಿ ಹೇಳಿದ್ದಾರೆ.
ದೇವಾಲಯ ಜಾಗ ವಿವಾದ
ವಾಮನರಾವ್ ದಂಪತಿ ಮತ್ತು ಕುಂಟ ಶ್ರೀನಿವಾಸ್ ಮಧ್ಯೆ ಎರಡು ದೇವಾಲಯ ಜಾಗಗಳ ವಿವಾದ ನಡೆದಿತ್ತು. ಈ ಹಿನ್ನೆಲೆ ಆರೋಪಿಗಳು ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಇಂದು ಕೋರ್ಟ್ಗೆ ಹಾಜರು!
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆಗಳ ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರಪಡಿಸಲಾಗುವುದು. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಐಜಿ ನಾಗಿರೆಡ್ಡಿ ತಿಳಿಸಿದ್ದಾರೆ.
ಜಿ.ಪಂ. ಅಧ್ಯಕ್ಷನ ಸೋದರಳಿಯ ಭಾಗಿ!
ಪ್ರಕರಣದ ಪ್ರಮುಖ ಆರೋಪಿ ಕುಂಟಾ ಶ್ರೀನಿವಾಸ್ ವಾಮನ್‌ರಾವ್ ದಂಪತಿ ಹತ್ಯೆಗೆ ಕಾರು ನೀಡಲಾಗಿದ್ದು, ಕೊಲೆಗೆ ಬಳಸಿದ ಎರಡು ಮಚ್ಚುಗಳನ್ನು ಬಿಟ್ಟು ಶ್ರೀನಿವಾಸ್ ಎಂಬ ವ್ಯಕ್ತಿ ನೀಡಿರುವುದು ತನಿಖೆ ಮೂಲಕ ತಿಳಿದು ಬಂದಿದೆ.
ಬಿಟ್ಟು ಶ್ರೀನಿವಾಸ್ ಪೆದ್ದಪಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪುಟ್ಟ ಮಧುಕರ್ನ ಸೋದರಳಿಯರಾಗಿದ್ದಾರೆ. ಪುಟ್ಟ ಮಧು ತನ್ನ ತಾಯಿಯ ಹೆಸರಿನ ನಡೆಸುತ್ತಿರುವ ಟ್ರಸ್ಟ್ ಜವಾಬ್ದಾರಿಯನ್ನು ಬಿಟ್ಟು ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದಾನೆ. ಮಂಥಾನಿಯ ಹಣ್ಣಿನ ಅಂಗಡಿಯಿಂದ ಮಚ್ಚುಗಳನ್ನು ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟ್ಟು ಶ್ರೀನಿವಾಸ್ ಬಂಧನವಾಗಿಲ್ಲ. ಪರಾರಿಯಾಗಿರುವ ಆರೋಪಿ ಬಿಟ್ಟು ಶ್ರೀನಿವಾಸ್ನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಟ್ಟು ಶ್ರೀನಿವಾಸ್ನನ್ನು ಬಂಧಿಸಿದ್ರೆ ಕೊಲೆಯ ಬಗ್ಗೆ ಅನೇಕ ವಿಷಯಗಳು ತಿಳಿದು ಬರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.
ಪುಟ್ಟ ಮಧುಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ವಕೀಲ ವಾಮನ್‌ರಾವ್ ಅವರು ದೂರುಗಳು ಮತ್ತು ಅರ್ಜಿಗಳನ್ನು ಸಲ್ಲಿಸಿದ ಹಿನ್ನೆಲೆ ಪೊಲೀಸರು ಬಿಟ್ಟು ಶ್ರೀನಿವಾಸ್ ಪಾತ್ರವನ್ನು ಉಲ್ಲೇಖಿಸಿದ್ದಾರೆ.