ETV Bharat / bharat

ಕೃಷ್ಣನೂರು ಮಥುರಾದಲ್ಲಿ 'ಲಾತ್​ಮಾರ್​ ಹೋಳಿ': 25 ದಿನ ಬಣ್ಣದೋಕುಳಿ - ಬರ್ಸಾನಾ ದೇವಸ್ಥಾನ

ಮಥುರಾದಲ್ಲಿ ನಡೆಯುವ ಲಾತ್​ಮಾರ್​ ಹೋಳಿ ಹಬ್ಬ ವಿಶ್ವಪ್ರಸಿದ್ಧ.

lathmar holi celebration in Barsana of Mathura
ಕೃಷ್ಣನೂರಲ್ಲಿ ಸಂಭ್ರಮದ 'ಲಾತ್​ಮಾರ್​ ಹೋಳಿ' ಆಚರಣೆ
author img

By

Published : Feb 28, 2023, 7:15 PM IST

ಮಥುರಾ: ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿದೆ. ಹೋಳಿ ಬರುತ್ತಿದ್ದಂತೆಯೇ ದೇಶಾದ್ಯಂತ ಸಿದ್ಧತೆ ಭರದಿಂದ ಸಾಗಿದೆ. ಅದರಲ್ಲೂ ಮಥುರಾದ ಬ್ರಜ್‌, ಬರ್ಸಾನಾದಲ್ಲಿ ಹೋಳಿ ಹಲವು ದಿನಗಳ ಮೊದಲೇ ಪ್ರಾರಂಭವಾಗುತ್ತದೆ. ಎಲ್ಲೆಡೆ ಸಡಗರ ಮುಗಿದರೂ ಇಲ್ಲಿ ಮಾತ್ರ ಬಣ್ಣದೋಕುಳಿ ನಡೆಯುತ್ತಲೇ ಇರುತ್ತದೆ.

ಸುಮಾರು 25 ದಿನಗಳವರೆಗೆ ವಿವಿಧ ಹೆಸರುಗಳಲ್ಲಿ ಹೋಳಿ ಹಬ್ಬವನ್ನು ಇಲ್ಲಿ ಆಚರಿಸುತ್ತಾರೆ. ಇಂದು ಸಂಜೆ ಶ್ರೀ ಲಾಲ್‌ಜಿ ಮಹಾರಾಜ ದೇಗುಲದಲ್ಲಿ ವಿಶ್ವವಿಖ್ಯಾತ ಬರ್ಸಾನಾದ ಲಾತ್​ಮಾರ್ ಹೋಳಿ ಆಚರಣೆಯನ್ನು ಸಮುದಾಯ ಗೀತೆ ಹಾಡಿ ಸಂಭ್ರಮದಿಂದ ಪ್ರಾರಂಭಿಸಲಾಯಿತು.

ಸಂಜೆ ನಂದ ಗ್ರಾಮದ ಹುರಿಯಾರೆಗಳು ಪ್ರಾಚೀನ ವೇಷಭೂಷಣ ಧರಿಸಿ ದೇವಾಲಯದ ಆವರಣವನ್ನು ತಲುಪಿದ್ದು, ಬರ್ಸಾನಾ ದೇವಸ್ಥಾನದಲ್ಲಿ ಸಾಮಾಜಿಕ ಗಾಯನದ ನಂತರ, ರಾಧಾ ರಾಣಿಯನ್ನು ಭೇಟಿ ಮಾಡಿ, ಬಳಿಕ ಹುರಿಯಾರೆಗಳು ಬರ್ಸಾನಾದ ವರ್ಣರಂಜಿತ ಬೀದಿಗಳಲ್ಲಿ ಸಾಗಿದರು. ಗೋಪಿಕೆಯರೆಲ್ಲ ಅಲಂಕಾರ ಮಾಡಿಕೊಂಡು, ಕೈಯಲ್ಲಿ ಕೋಲು ಹಿಡಿದು ಹೊರಬಂದರೆ, ಅವರ ಮೇಲೆ ಹುರಿಯಾರೆಗಳು ಬಣ್ಣ ಎರಚಿ ಹೋಳಿ ಆಡಿದರು. ಸಂಭ್ರಮಾಚರಣೆಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿಟ್ಟಿನಲ್ಲಿ ಹಬ್ಬ ಮುಗಿಯುವವರೆಗೂ ಜಿಲ್ಲಾಡಳಿತದಿಂದ ಬಿಗಿ ಭದ್ರತಾ​ ವ್ಯವಸ್ಥೆ ಮಾಡಲಾಗಿದೆ.

ಹುರಿಯಾರೆಗಳು ಯಾರು?: ಹೋಳಿ ಆಡಲೆಂದೇ ಪುರುಷರು ಸಾಂಪ್ರದಾಯಿಕ ಧೋತಿ ಕುರ್ತಾ ಧರಿಸಿ, ತಲೆ ಮೇಲೆ ಟೋಪಿ, ಕೈಯಲ್ಲಿ ಗುರಾಣಿ ಮತ್ತು ನಂದ ಗ್ರಾಮದ ಧ್ವಜದಂತಹ ಸಾಂಪ್ರದಾಯಿಕ ಬಟ್ಟೆಗಳೊಂದಿಗೆ ರಾಧಾರಾಣಿ ದೇವಸ್ಥಾನಕ್ಕೆ ಬರುತ್ತಾರೆ. ಹೀಗೆ ತಯಾರಾಗುವ ಪುರುಷರನ್ನು ಹುರಿಯಾರೆಗಳು ಎನ್ನಲಾಗುತ್ತದೆ. ದೇವಸ್ಥಾನಕ್ಕೆ ಬಂದ ಹುರಿಯಾರೆಗಳು ಅಲ್ಲಿಂದ ನಂತರ ಗೋಪಿಕೆಯರ ವೇಷದಲ್ಲಿರುವ ಮಹಿಳೆಯರ ಮೇಲೆ ಬಣ್ಣಗಳನ್ನೆರಚಲು ಬೀದಿಯಲ್ಲಿ ಓಡಾಡುತ್ತಾರೆ.

lathmar holi celebration in Barsana of Mathura
ಕೃಷ್ಣನೂರಲ್ಲಿ ಸಂಭ್ರಮದ 'ಲಾತ್​ಮಾರ್​ ಹೋಳಿ' ಆಚರಣೆ

ಬಿಗಿ ಭದ್ರತೆ: ಬರ್ಸಾನಾದಲ್ಲಿ ಲಾತ್​ಮಾರ್ ಹೋಳಿ ಹಬ್ಬಕ್ಕೆ ಜಿಲ್ಲಾಡಳಿತದ ವತಿಯಿಂದ ವ್ಯಾಪಕ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಬರ್ಸಾನಾ ಪ್ರದೇಶವನ್ನು 12 ವಲಯಗಳಾಗಿ ವಿಂಗಡಿಸಲಾಗಿದೆ. ಕ್ಯಾಂಪಸ್‌ನಲ್ಲಿ 150 ಸಿಸಿಟಿವಿಗಳು, 10 ವಾಚ್ ಟವರ್‌ಗಳು, 4 ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ. 5 ಎಎಸ್‌ಪಿ, 12 ಸಿಒ, 12 ಠಾಣೆ ಪ್ರಭಾರಿ, 50 ಸಬ್‌ಇನ್‌ಸ್ಪೆಕ್ಟರ್‌ಗಳು, 7 ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗಳು, 650 ಕಾನ್‌ಸ್ಟೆಬಲ್‌ಗಳು, 50 ಮಹಿಳಾ ಕಾನ್‌ಸ್ಟೆಬಲ್‌ಗಳು, 4 ಪಿಎಸಿ ಕಂಪನಿಗಳು ಮತ್ತು 4 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ದೂರದೂರುಗಳಿಂದ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

ಲಾತ್​ಮಾರ್​​ ಹೋಳಿ ಎಂದರೇನು? ವಿಶೇಷತೆಯೇನು?: ಭಾರತದಲ್ಲಿ ಆಚರಿಸಲಾಗುವ ಹಿಂದೂ ಹಬ್ಬಗಳಲ್ಲಿ ಹೋಳಿಯೂ ಒಂದು. ಹೋಳಿ ಜನರ ಜೀವನದಲ್ಲಿ ಸಂತೋಷ, ಆನಂದ ತರುವ ಬಣ್ಣಗಳ ಹಬ್ಬ. ಉತ್ತರ ಭಾರತದಲ್ಲಿ ಹೋಳಿಯನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಕೆಲವು ರಾಜ್ಯಗಳು ಹೋಳಿಯನ್ನು ವೈಭವದಿಂದ ಆಚರಿಸುತ್ತವೆ. ಅವುಗಳಲ್ಲಿ ಮಥುರಾದ ಬರ್ಸಾನ 'ಲಾತ್​ಮಾರ್ ಹೋಳಿ' ಆಚರಣೆಗೆ ಪ್ರಸಿದ್ಧವಾಗಿದೆ. ಪ್ರತಿ ವರ್ಷ, ರಾಧಾ ಮತ್ತು ಕೃಷ್ಣ ಜೋಡಿಯನ್ನು ಗೌರವಿಸುವ ಹಬ್ಬ 'ಲಾತ್​ಮಾರ್ ಹೋಳಿ' ವೀಕ್ಷಿಸಲು ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಇಲ್ಲಿನ ಪಟ್ಟಣಕ್ಕೆ ಆಗಮಿಸುತ್ತಾರೆ. ಈ ವರ್ಷ ಬರ್ಸಾನಾ ಹೋಳಿಯನ್ನು ಫೆಬ್ರವರಿ 28 ಅಂದರೆ ಇಂದು ಆಚರಿಸಲಾಗುತ್ತಿದೆ.

ಐತಿಹಾಸಿಕ ಪಟ್ಟಣ ಬರ್ಸಾನಾ ರಾಧಾ ರಾಣಿಯ ನಾಡು. ಇಂದು ವಿಶೇಷ ಹೋಳಿ ಹಬ್ಬಕ್ಕೆ ಸಾಕ್ಷಿಯಾಗಲಿದ್ದು, ಪುರುಷರೆಲ್ಲ ಮಹಿಳೆಯರನ್ನು ಬಣ್ಣಗಳಿಂದ ಮುಳುಗಿಸುತ್ತಾರೆ. ಅದೇ ವೇಳೆ ಮಹಿಳೆಯರು ಲಾಠಿ ಬೀಸುತ್ತಾ ಪುರುಷರು ತಮ್ಮ ಮೇಲೆ ಬಣ್ಣ ಎರಚುವುದನ್ನು ತಡೆಯಲು ಪ್ರಯತ್ನಿಸುತ್ತಾರೆ. ಆ ಲಾಠಿಯ ಪೆಟ್ಟುಗಳಿಂದ ತಪ್ಪಿಸಿಕೊಳ್ಳುವ ಪುರುಷರು ಚರ್ಮದ ಗುರಾಣಿಗಳನ್ನು ಧರಿಸಿರುತ್ತಾರೆ. ಪೆಟ್ಟುಗಳಿಂದ ತಪ್ಪಿಸಿಕೊಂಡು ಮತ್ತೆ ಪುರುಷರು ಮಹಿಳೆಯರನ್ನು ಬಣ್ಣಗಳಲ್ಲಿ ಮುಳುಗಿಸುತ್ತಾರೆ. ಹೀಗೆ ದ್ವಾಪರಾಯುಗವನ್ನು ಪ್ರತಿನಿಧಿಸುವ ರೀತಿಯಲ್ಲಿ ಬರ್ಸಾನದಲ್ಲಿ ಹೋಳಿ ಆಡಲಾಗುತ್ತದೆ.

ಪುರಾಣಗಳ ಪ್ರಕಾರ, ಕೃಷ್ಣನು ತನ್ನ ಪ್ರಿಯತಮೆ ರಾಧೆಯ ಮೇಲೆ ಬಣ್ಣಗಳನ್ನು ಎರಚಲು ಬರ್ಸಾನಾಗೆ ಭೇಟಿ ನೀಡಿದಾಗ, ರಾಧಾ ಮತ್ತು ಅವಳ ಸ್ನೇಹಿತೆಯರು ತಮಾಷೆಯಾಗಿ ಅವನನ್ನು ಕೋಲುಗಳಿಂದ ಹೊಡೆದು ಪಟ್ಟಣದಿಂದ ಓಡಿಸಿದ್ದರಂತೆ. ಲಾತ್​ಮಾರ್ ಹೋಳಿ ಅದನ್ನು ಮರುಸೃಷ್ಟಿಸುವಂತೆ ಆಡಲಾಗುತ್ತದೆ.

ಮಥುರಾದಲ್ಲಿ ಹೋಳಿಯನ್ನು ಸುಮಾರು 25 ದಿನಗಳ ಕಾಲ ಆಚರಿಸಲಾಗುತ್ತದೆ. ಇದನ್ನು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಶುಕ್ರವಾರ ಗೋಕುಲದ ರಾಮನರೇಟಿಯಲ್ಲಿ 'ಫೂಲೋ ಕೀ ಹೋಳಿ' (ಹೂವಿನ ಹೋಳಿ) ಆಯೋಜಿಸಲಾಗಿತ್ತು. ಇಂದು ಬರ್ಸಾನಾದಲ್ಲಿ 'ಲಾತ್​ಮಾರ್ ಹೋಳಿ' ಆಚರಿಸಲಾಗುತ್ತದೆ. ಮರುದಿನ ಅಂದರೆ ನಾಳೆ ನಂದಗಾಂವ್‌ನಲ್ಲಿ ಲಾತ್​ಮಾರ್ ಹೋಳಿಯನ್ನು ಆಚರಿಸಲಾಗುತ್ತದೆ. ನಂತರ ವೃಂದಾವನದಲ್ಲಿ ರಂಗಭರ್ಣಿಯನ್ನು ಆಚರಿಸಲಾಗುತ್ತದೆ. ಹೀಗೆ ಜಿಲ್ಲೆಯ ವಿವಿಧೆಡೆ ಹೋಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಒಟ್ಟಾಗಿ ಇದನ್ನು ರಂಗೋತ್ಸವ ಎಂದು ಕರೆಯಲಾಗುತ್ತದೆ.

ಯಾವಾಗ, ಎಲ್ಲೆಲ್ಲಿ?: ಇಂದು ಸಂಜೆ ಬರ್ಸಾನದಲ್ಲಿ ಲಾತ್​ಮಾರ್ ಹೋಳಿ ಆರಂಭವಾಗಿದ್ದು, ಮಾರ್ಚ್ 1 ರಂದು ನಂದಗಾಂವ್‌ನಲ್ಲಿ ಲಾತ್​ಮಾರ್​ ಹೋಳಿ, ಮಾರ್ಚ್ 3 ರಂದು ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯದ ಆವರಣದಲ್ಲಿ ಮತ್ತು ದ್ವಾರಕಾಧೀಶ ದೇವಾಲಯ ಮತ್ತು ಬಂಕೆ ಬಿಹಾರಿ ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ಮಾರ್ಚ್ 4 ರಂದು ಗೋಕುಲದಲ್ಲಿ ಛಾಡಿಮಾರ್ ಹೋಳಿ, ಮಾರ್ಚ್ 7 ರಂದು ಫಲೇನ್ ಗ್ರಾಮದಲ್ಲಿ ಹೋಳಿಕಾ ದಹನ್, ಮಾರ್ಚ್ 7 ರಂದು ಚತುರ್ವೇದಿ ಸಮಾಜದ ಡೋಲಾ ಪ್ರಾಚೀನ ಸಂಪ್ರದಾಯ, ಮಾರ್ಚ್ 8 ರಂದು ದೇಶಾದ್ಯಂತ ಹೋಳಿ ಆಡಲಾಗುತ್ತದೆ. ಮಾರ್ಚ್ 9 ರಂದು ಬ್ರಜ್ ರಾಜ ದೌಜಿಯಲ್ಲಿ ಹುರಂಗಾ, ಶ್ರೀರಂಜಿ ದೇವಸ್ಥಾನದಲ್ಲಿ ಮಾರ್ಚ್ 15 ರಂದು ಹೋಳಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಹೋಳಿ ಆಡಿದ ನಂತರ ಬಣ್ಣ ತೊಳೆಯುವ ಚಿಂತೆಯೇ? ಇಲ್ಲಿದೆ ಟಿಪ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.