ETV Bharat / bharat

ಲ್ಯಾಂಡಿಂಗ್​ಗಾಗಿ ಕೆಳಗಡೆ ಹಾರುತ್ತಿದ್ದ ವಿಮಾನ: ಪೈಲಟ್​​ ಕಣ್ಣಿಗೆ ತಗುಲಿದ ಲೇಸರ್‌ ಬೆಳಕು, ತಪ್ಪಿದ ಅನಾಹುತ - pilot maneuvered the plane to land

ಗುರುವಾರ ಪೈಲಟ್​​ ಇಂಡಿಗೋ ಏರ್‌ಲೈನ್ಸ್ ವಿಮಾನವನ್ನು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಮಾಡಲು ಮುಂದಾದಗ, ಆತನ ಕಣ್ಣಿಗೆ ಬಲವಾದ ಲೇಸರ್​ ಲೈಟ್​ ಬಿದ್ದಿದೆ. ಆದ್ರೂ ಪೈಲಟ್​ ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ್ದಾರೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ವಿಮಾನ
ವಿಮಾನ
author img

By

Published : May 19, 2022, 9:04 PM IST

ಚೆನ್ನೈ: ಶ್ರೀಲಂಕಾದ ಕೊಲಂಬೊದಿಂದ 153 ಜನರನ್ನು ಹೊತ್ತ ಇಂಡಿಗೋ ಏರ್‌ಲೈನ್ಸ್ ವಿಮಾನ ಚೆನ್ನೈಗೆ ಆಗಮಿಸಿತ್ತು. ಈ ವಿಮಾನವನ್ನು ಗುರುವಾರ ಪೈಲಟ್​​ ಲ್ಯಾಂಡ್​ ಮಾಡಲು ಮುಂದಾದಾಗ, ಆತನ ಕಣ್ಣಿಗೆ ಬಲವಾದ ಲೇಸರ್​ ಲೈಟ್​​ ಬಿದ್ದಿದೆ. ಆದರೂ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಮಾನದಲ್ಲಿದ್ದ 146 ಪ್ರಯಾಣಿಕರು ಮತ್ತು 7 ಜನ ಸಿಬ್ಬಂದಿ ಸೇರಿದಂತೆ ಒಟ್ಟು 153 ಜನರು ಸುರಕ್ಷಿತವಾಗಿದ್ದಾರೆ. ನಂತರ ಪೈಲಟ್ ಚೆನ್ನೈ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಂ ಅಧಿಕಾರಿಗಳು ರಾಡಾರ್ ಉಪಕರಣಗಳ ಮೂಲಕ ಬೆಳಕು ಬಂದ ಪ್ರದೇಶವನ್ನು ಪರಿಶೀಲಿಸಿದಾಗ ಈ ಶಕ್ತಿಶಾಲಿ ಬೆಳಕು ಪಲವಂತಂಗಲ್ ಪ್ರದೇಶದಿಂದ ಬಂದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'

ವಿಮಾನ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿರುವ ಪಲವಂತಂಗಲ್ ಪ್ರದೇಶದ ಎತ್ತರದ ಕಟ್ಟಡದಿಂದ ಶಕ್ತಿಶಾಲಿ ಲೇಸರ್ ಬೆಳಕು ಬಂದಿದೆ ಎನ್ನಲಾಗ್ತಿದೆ. ಇಂಡಿಗೋ ಏರ್ ಲೈನ್ಸ್ ಮತ್ತು ಚೆನ್ನೈ ಏರ್ ಪೋರ್ಟ್ ಕಂಟ್ರೋಲ್ ರೂಂ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ರೀತಿಯ ಘಟನೆ 5 ವರ್ಷಗಳ ಹಿಂದೆ ನಡೆದಿತ್ತು. ಪರಂಗಿಮಲೈ ಪ್ರದೇಶದಿಂದ ಲೇಸರ್ ಬೆಳಕು ವಿಮಾನಕ್ಕೆ ತಗುಲಿದ ಎರಡು ಘಟನೆಗಳು ಈಗಾಗಲೇ ನಡೆದಿವೆ. ಈ ಸಂಬಂಧ 2 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ 5 ವರ್ಷಗಳ ಬಳಿಕ ಮತ್ತೆ ಅಂತಹದ್ದೇ ಘಟನೆ ನಡೆದಿದೆ. ಇದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.