ETV Bharat / bharat

21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ: ಅಭಿನಂದನೆ ಸಲ್ಲಿಸಿದ ಮಾಜಿ ವಿಶ್ವಸುಂದರಿಯರು

ಮಿಸ್ ಯೂನಿವರ್ಸ್ 2021 ರ ಕಿರೀಟ ಮುಡಿಗೇರಿಸಿಕೊಂಡ ಹರ್ನಾಜ್ ಸಂಧುಗೆ ದೇಶದ ತುಂಬೆಲ್ಲ ಅಭಿನಂದನೆಗಳ ಮಹಾ ಪೂರವೇ ಹರಿದುಬರುತ್ತಿದೆ. ಇನ್ನು ಈ ಮೊದಲು ನಟಿ ಲಾರಾ ದತ್ತಾ 13 ಮೇ 2000 ರಂದು ಭುವನ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು.

21 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಪಟ್ಟ

author img

By

Published : Dec 13, 2021, 3:39 PM IST

Updated : Dec 13, 2021, 3:49 PM IST

ಹೈದರಾಬಾದ್: 21 ವರ್ಷದ ಮಾಡೆಲ್ ಹರ್ನಾಜ್ ಸಂಧು ಅವರು ಭಾರತಕ್ಕೆ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

21 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಪಟ್ಟ
21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ

ದೇಶದ ಮಗಳು ಹರ್ನಾಜ್ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದ್ದು, ಈ ಐತಿಹಾಸಿಕ ಗೆಲುವಿಗಾಗಿ ಹರ್ನಾಜ್​​​ಗೆ ದೇಶದ ಮೂಲೆ ಮೂಲೆಯಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಬಾಲಿವುಡ್ ನಿಂದಲೂ ಹರ್ನಾಜ್ ಗೆ ಅಭಿನಂದನೆಗಳು ಹರಿದು ಬರುತ್ತಿವೆ. ಹಾಗೆಯೇ ದೇಶದ ಎರಡನೇ ಭುವನ ಸುಂದರಿ (2000) ಮತ್ತು ನಟಿ ಲಾರಾ ದತ್ತಾ ಕೂಡ ಅವರನ್ನು ಅಭಿನಂದಿಸಿದ್ದಾರೆ.

'ಅಭಿನಂದನೆಗಳು ಹರ್ನಾಜ್ ಸಂಧು, ಕ್ಲಬ್‌ಗೆ ಸ್ವಾಗತ, ನಾವು ಕಳೆದ 21 ವರ್ಷಗಳಿಂದ ಕಾಯುತ್ತಿದ್ದೆವು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಲಕ್ಷಾಂತರ ಕನಸುಗಳು ನನಸಾಗಿವೆ. ಎಂದು ಹರ್ನಾಜ್ ಸಂಧು ಸಾಧನೆ ಬಗ್ಗೆ ಬಾಲಿವುಡ್ ನಟಿ ಲಾರಾ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ನಟಿ ಲಾರಾ ದತ್ತಾ ಅವರು 13 ಮೇ 2000 ರಂದು ಭುವನ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶದ ಹೆಸರನ್ನು ಬೆಳಗಿಸಿದ್ದರು. ಹಾಗೆ ಮತ್ತೊಬ್ಬ ದೇಶದ ಮಗಳು ಮತ್ತು ನಟಿ ಸುಶ್ಮಿತಾ ಸೇನ್ ಅವರು ಸಹ ದೇಶಕ್ಕೆ ಭುವನ ಸುಂದರಿ (1994) ಪಟ್ಟವನ್ನು ತಂದ ಮೊದಲಿಗರು.

ಇದನ್ನೂ ಓದಿ: ಹರ್ನಾಝ್​ ಸಂಧುಗೆ ಭುವನ ಸುಂದರಿ ಕಿರೀಟ​.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ

ಹಾಗೆಯೇ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ ಸಹ ಇದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಭಿನಂದನೆಗಳು ಹರ್ನಾಜ್ ಸಂಧು... 21 ವರ್ಷಗಳ ನಂತರ ಈ ಪ್ರಶಸ್ತಿಯನ್ನು ಮನೆಗೆ ತಂದಿದ್ದಕ್ಕಾಗಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಐತಿಹಾಸಿಕ ವಿಜಯದ ನಂತರ ಹರ್ನಾಜ್ ಸಂಧು ತಮ್ಮ ಸಂತಸ ವ್ಯಕ್ತಪಡಿಸಿದ್ದು, ಈ ಸಂಪೂರ್ಣ ಪ್ರಯಾಣದಲ್ಲಿ ನನಗೆ ಮಾರ್ಗದರ್ಶನ ಮತ್ತು ಸಹಾಯ ಮಾಡಿದ ದೇವರು, ಪೋಷಕರು ಮತ್ತು ಮಿಸ್ ಇಂಡಿಯಾ ಸಂಸ್ಥೆಗೆ ನಾನು ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದಿದ್ದಾರೆ.

ನನ್ನ ಗೆಲುವಿಗೆ ಶುಭ ಹಾರೈಸಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞೆ. 21 ವರ್ಷಗಳ ನಂತರ ಭಾರತಕ್ಕೆ ಈ ವೈಭವದ ಕಿರೀಟ ತರುತ್ತಿರುವುದು ಹೆಮ್ಮೆಯ ಕ್ಷಣ ಎಂದು ಸಂಧು ಹೇಳಿದ್ದಾರೆ.

Last Updated : Dec 13, 2021, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.