ಚಂಬಾ: ಧಾರಾಕಾರ ಮಳೆ ಮತ್ತು ಹಿಮಪಾತ ಅದ ಪರಿಣಾಮ, ಭರ್ಮೂರ್ ಉಪ ವಿಭಾಗದ ಚಂಬಾ - ಹೋಳಿ ಮುಖ್ಯ ರಸ್ತೆ ಬಳಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು.
ಬೃಹತ್ ಕಲ್ಲುಗಳು ಮತ್ತು ಮಣ್ಣು ರಸ್ತೆ ಮೇಲೆ ಶೇಖರಣೆಗೊಂಡ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹಲವು ಪ್ರಯಾಣಿಕರು ಹದಗೆಟ್ಟ ರಸ್ತೆಯಲ್ಲೇ ಕೆಲ ಸಮಯ ಸಿಲುಕಿಕೊಂಡಿದ್ದರು.
ಇದನ್ನು ಓದಿ: ಸೈಕ್ಲೋನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಭತ್ತ, ತೊಗರಿ ಬೆಳೆಗಾರರು
ರಸ್ತೆ ಸಂಚಾರ ಸಿಲುಕಿಕೊಂಡವರಲ್ಲಿ, ವಿವಾಹಕ್ಕೆ ಹೊರಟ ಒಂದು ತಂಡ ಕೂಡ ಇತ್ತು. ಮೂರು ಗಂಟೆಗಳ ನಂತರ ರಸ್ತೆ ತೆರವುಗೊಂಡಿದ್ದು, ಸಿಲುಕಿಕೊಂಡಿದ್ದ ಪ್ರಯಾಣಿಕರು ತಮ್ಮ ಪ್ರಯಾಣ ಬೆಳೆಸಿದರು.
ಮಾಹಿತಿ ಪಡೆದ ಲೋಕೋಪಯೋಗಿ ಇಲಾಖೆ, ಜೆಸಿಬಿ ಮತ್ತು ಇತರ ಯಂತ್ರಗಳ ಸಹಾಯದಿಂದ ರಸ್ತೆಯಲ್ಲಿ ಶೇಖರಣೆಗೊಂಡಿದ್ದ ಕಲ್ಲು - ಮಣ್ಣು ಸೇರಿದಂತೆ ತ್ಯಾಜ್ಯ ಅವಶೇಷಗಳನ್ನು ತೆಗೆಯುವ ಕೆಲಸ ಮಾಡಿದೆ.