ETV Bharat / bharat

ಕೋವಿಡ್ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲ: ‘ದಿ ಲ್ಯಾನ್ಸೆಟ್’ ನಿಯತಕಾಲಿಕೆ

ಮೊದಲ ಕೋವಿಡ್ ಅಲೆಯನ್ನು ಹಿಮ್ಮೆಟ್ಟಿಸುವ ಮೊದಲೇ ಸರ್ಕಾರ ಸಂಭ್ರಮಿಸಿದ್ದು ಹಾಗೂ 2ನೇ ಅಲೆ ಭೀತಿ ಇದ್ದರೂ ಸರಿಯಾದ ವೈದ್ಯಕೀಯ ಸೌಲಭ್ಯ ಒದಗಿಸುವ ಕಡೆ ಗಮನಹರಿಸದಿರುವುದು ಭಾರತದ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ದಿ ಲ್ಯಾನ್ಸೆಟ್ ಟೀಕಿಸಿದೆ.

lancets-scathing-piece-criticizes-modi-govt-for-covid-mis-management
ಮೋದಿ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲ:
author img

By

Published : May 9, 2021, 4:09 PM IST

ಹೈದರಾಬಾದ್: ಪ್ರಖ್ಯಾತ ವೈದ್ಯಕೀಯ ನಿಯತಕಾಲಿಕೆಯಾದ ‘ದಿ ಲ್ಯಾನ್ಸೆಟ್’​​ ಮೋದಿ ಸರ್ಕಾರದ ಕೋವಿಡ್​ ನಿರ್ವಹಣೆಯನ್ನ ಟೀಕಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ಭಾರತವು ತನ್ನ ಆರಂಭಿಕ ಯಶಸ್ಸು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಭಾರತದಲ್ಲಿ ಈವರೆಗೆ 2 ಕೋಟಿಗೂ ಅಧಿಕ ಪ್ರಕರಣಗಳು ದೃಢವಾಗಿ ಸಾವಿನ ಸಂಖ್ಯೆ 2,22,000ಕ್ಕಿಂತ ಹೆಚ್ಚಾಗಿದೆ. 2ನೇ ಅಲೆಯ ಅಪಾಯಗಳು ಮತ್ತು ರೂಪಾಂತರಿ ಕೊರೊನಾ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಭಾರತವು ಕೋವಿಡ್​​ ನಿರ್ಮೂಲನೆಯ ಕೊನೆಯ ಹಂತ ತಲುಪಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸುವ ಮೂಲಕ ಸರ್ಕಾರ ಕೋವಿಡ್​​ನಿಂದ ಗೆಲುವು ಕಂಡಿದೆ ಎಂಬ ಅಭಿಪ್ರಾಯಪಟ್ಟಿತ್ತು ಎಂದು ಸಂಪಾದಕೀಯದಲ್ಲಿ ತಿಳಿಸಿದೆ.

ಆದರೆ ಆಸ್ಪತ್ರೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಾ ಹೋಗಿದ್ದಲ್ಲದೆ, ವೈರಸ್​ನಿಂದಾಗಿ ವೈದ್ಯಕೀಯ ಸಿಬ್ಬಂದಿಯೇ ಪ್ರಾಣಕಳೆದುಕೊಂಡರು. ಇಂತಹ ಸಮಯದಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಮತ್ತು ಅಗತ್ಯ ಸೌಲಭ್ಯಗಳಿಗಾಗಿ ಜನತೆ ಸಾಮಾಜಿಕ ಜಾಲತಾಣದ ಕಡೆ ಮುಖಮಾಡಿದರು. ಈ ವೇಳೆ ಸರ್ಕಾರದ ವಿರುದ್ಧ ಪ್ರಶ್ನೆ ಮಾಡಿದ್ದ ಟ್ವೀಟ್​ಗಳ ಹಾಗೂ ಟೀಕೆಗಳ ತೆಗೆದುಹಾಕುವತ್ತ ಪ್ರಧಾನಿ ಮೋದಿ ಅವರ ಸರ್ಕಾರ ಹೆಚ್ಚು ಆಸಕ್ತಿ ತೋರಿತು ಎಂದು ನಿಯತಕಾಲಿಕೆ ಆರೋಪಿಸಿದೆ.

ಮೊದಲ ಕೋವಿಡ್ ಅಲೆಯಿಂದ ಯಶಸ್ಸು ಕಾಣುವ ಮೊದಲೇ ಸರ್ಕಾರ ಸಂಭ್ರಮಿಸಿದ್ದು, ಹಾಗೂ 2ನೇ ಅಲೆ ಭೀತಿ ಇದ್ದರೂ ಸರಿಯಾದ ವೈದ್ಯಕೀಯ ಸೌಲಭ್ಯ ಒದಗಿಸುವ ಕಡೆ ಗಮನಹರಿಸದಿರುವುದು ಭಾರತದ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಟೀಕಿಸಿದೆ.

ಇದಕ್ಕೂ ಹಿಂದಿನ ವರದಿಯಲ್ಲಿ ‘ದಿ ಲ್ಯಾನ್ಸೆಟ್​​’ ದೇಶದಲ್ಲಿ ನಡೆಯುತ್ತಿದ್ದ ಚುನಾವಣಾ ಅಲೆ ಕುರಿತು ವರದಿ ಮಾಡಿತ್ತು. ಬೃಹತ್ ಸಾರ್ವಜನಿಕ ಸಭೆಗಳು, ಧಾರ್ಮಿಕ ಕುಂಭ ಮೇಳ ಮತ್ತು ಗಂಗಾ ನದಿಯ ಲಕ್ಷಾಂತರ ಜನರ ಸೇರುವಿಕೆಯು ಕೋವಿಡ್ ಪ್ರಕರಣ ಏರಿಕೆಗೆ ಕಾರಣವಾಗಬಹುದು ಎಂದು ವರದಿ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.