ETV Bharat / bharat

ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಚೇತರಿಕೆ - ಮಿಸಾ ಭಾರತಿ

ದೆಹಲಿ ಏಮ್ಸ್ ನಲ್ಲಿ ದಾಖಲಾಗಿರುವ ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

lalu yadav
ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್
author img

By

Published : Jul 8, 2022, 6:56 PM IST

ಪಾಟ್ನಾ/ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಚೇತರಿಸಿಕೆ ಕಂಡು ಬರುತ್ತಿದೆ. ಈ ಬಗ್ಗೆ ಅವರ ಹಿರಿಯ ಪುತ್ರಿ ಮಿಸಾ ಭಾರತಿ ಮಾಹಿತಿ ನೀಡಿದ್ದಾರೆ.

ಮಿಸಾ ಭಾರತಿಯವರು ಆಸ್ಪತ್ರೆಯಲ್ಲಿ ಲಾಲು ಅವರು ಚೇತರಿಸಿಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ತನ್ನ ತಂದೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಈಗ ಯಾರೊಬ್ಬರ ಬೆಂಬಲದೊಂದಿಗೆ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಚಿಂತಿಸಬೇಡಿ, ಅವರು ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಿ ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ. ಇದೇ ವೇಳೆ, ತಂದೆಯ ಆರೋಗ್ಯದ ಬಗ್ಗೆ ವದಂತಿ ಹರಡದಂತೆ ಮನವಿ ಮಾಡಿಕೊಂಡಿದ್ದಾರೆ.

  • अपने मनोबल और आप सब की दुआओं की बदौलत लालू जी की स्थिति अब काफी बेहतर है। कृपया अफवाहों पर ध्यान ना दें। साथ बनाए रखें, दुआओं में @laluprasadrjd जी को याद रखें।
    धन्यवाद।

    तस्वीरें आज सुबह की: pic.twitter.com/RvcEbqcJRB

    — Dr. Misa Bharti (@MisaBharti) July 8, 2022 " class="align-text-top noRightClick twitterSection" data=" ">

ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ: ಏಮ್ಸ್‌ನಲ್ಲಿರುವ ಲಾಲು ಅವರನ್ನು ಸಂಬಂಧಿಕರನ್ನು ಹೊರತುಪಡಿಸಿ, ಅನೇಕ ರಾಜಕಾರಣಿಗಳು ಭೇಟಿ ಮಾಡಲು ಬಂದಿದ್ದರು. ಆದರೆ ವೈದ್ಯರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ವೈದ್ಯರ ಪ್ರಕಾರ, ಬುಧವಾರಕ್ಕೆ ಹೋಲಿಸಿದರೆ ಲಾಲು ಪ್ರಸಾದ್ ಹೆಚ್ಚು ನಿರಾಳರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಐಸಿಯುನಿಂದ ಜನರಲ್ ವಾರ್ಡ್​ಗೆ ಕರೆತರುವ ಸಾಧ್ಯತೆ ಇದೆ.

ಜು.7 ರಂದು ರಾತ್ರಿ ಪಾಟ್ನಾ ಆಸ್ಪತ್ರೆಯಿಂದ ಏರ್​ಲಿಫ್ಟ್​ ಮೂಲಕ ಲಾಲು ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ದಾಖಲಿಸಲಾಗಿತ್ತು. ಲಾಲು ಅವರು ನಿವಾಸದಲ್ಲಿ ಬಿದ್ದು ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಕಿಡ್ನಿ ಮತ್ತು ಶ್ವಾಸಕೋಶದ ಸೋಂಕು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಲಾಲು ಬಹಳ ದಿನಗಳಿಂದ ಬಳಲುತ್ತಿದ್ದಾರೆ.

lalu yadav health update
ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಚೇತರಿಕೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲಾಲು ಪ್ರಸಾದ್ ಅವರನ್ನು ಪಾಟ್ನಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಲಾಲು ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.

ಇದನ್ನೂ ಓದಿ: ಭುಜದ ಮೂಳೆ ಮುರಿತ: ಆರ್‌ಜೆಡಿ ಮುಖಂಡ ಲಾಲು ಯಾದವ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.