ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸುವ ಮೂಲಕ ಭಾರತೀಯ ಕ್ರಿಕೆಟ್ನನ್ನು ಶತಕೋಟಿ ಡಾಲರ್ ಉದ್ಯಮವನ್ನಾಗಿ ಮಾಡಿದ ಕೀರ್ತಿ ಲಲಿತ್ ಮೋದಿಗೆ ಸಲ್ಲುತ್ತದೆ. ಲಲಿತ್ ಮೋದಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುವುದಾಗಿ ಘೋಷಿಸಿದ ನಂತರ, ಮತ್ತೆ ಸುದ್ದಿಯಲ್ಲಿದ್ದಾರೆ. ಅಲ್ಲದೇ ಸುಶ್ಮಿತಾ ಸೇನ್ರನ್ನು ಶೀಘ್ರದಲ್ಲೇ ಮದುವೆಯಾಗುವುದಾಗಿ ಹೇಳಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸೇರಿದಂತೆ ಹಲವು ರಾಜಕಾರಣಿಗಳೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ಇದೀಗ ಹೊಸ ವಿಷಯವೊಂದು ಹೊರ ಬಿದ್ದಿದ್ದು, ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಮಗಳನ್ನು ತಮ್ಮ ವೈಯಕ್ತಿಕ ಸಹಾಯಕಿಯಾಗಿ ನೇಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಲಲಿತ್ ಮೋದಿ ಅವರ ಐಪಿಎಲ್ ಹಗರಣ ಬೆಳಕಿಗೆ ಬಂದಾಗ, ಕೊಚ್ಚಿ ಫ್ರಾಂಚೈಸಿಯ ಪ್ರತಿನಿಧಿಗಳು 2010 ರಲ್ಲಿ ಬಿಸಿಸಿಐಗೆ ದೂರು ನೀಡಿದ್ದರು. ಅವರು ಫ್ರಾಂಚೈಸಿ ತೊರೆಯುವಂತೆ ಬೆದರಿಕೆ ಹಾಕಿದ್ದರು. ಅದೇ ಸಮಯದಲ್ಲಿ ಲೈಲಾ ಮಹಮೂದ್ ಎಂಬ ಮಹಿಳೆಯೂ ಕಾಣಿಸಿಕೊಂಡರು. ಮಹಿಳೆ ಮಲ್ಯ ಅವರ ಸಾಕು ಮಗಳು ಮತ್ತು ಮೋದಿ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಮದುವೆ ಅಲ್ವಂತೆ... ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ನಡೆಸುತ್ತಿರುವೆ ಎಂದ ಲಲಿತ್ ಮೋದಿ
2013 ರಲ್ಲಿ ಬಿಸಿಸಿಐನಿಂದ ಅಮಾನತುಗೊಂಡ ನಂತರ, ಐಪಿಎಲ್ ಆಡಳಿತ ಮಂಡಳಿಯನ್ನು ಬೈಪಾಸ್ ಮಾಡುವುದು ಸೇರಿದಂತೆ ಲಲಿತ್ ಮೋದಿ ವಿರುದ್ಧ 22 ಆರೋಪಗಳನ್ನು ಮಾಡಲಾಯಿತು. ನಂತರ ಲಲಿತ್ ಮೋದಿ ಲಂಡನ್‌ಗೆ ತೆರಳಿದರು. ಖ್ಯಾತ ಬಾಲಿವುಡ್ ನಟಿ ಮತ್ತು 1994 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುವ ಸುದ್ದಿ ಇದೀಗ ಹೊರಬಿದ್ದಿದೆ.