ETV Bharat / bharat

ವೇತನ ನೀಡದ ಆರೋಪ.. ಪೆಟ್ರೋಲ್ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆ..! - ಮೀರತ್​ನ ಸಫ್ದರ್ ಗಂಜ್​ನಲ್ಲಿ ವ್ಯಕ್ತಿ ಸಾವು

ಮಾಲೀಕನ ಬಳಿ ಎಷ್ಟೇ ಕೇಳಿಕೊಂಡರೂ ವೇತನ ಪಾವತಿಸದಿದ್ದಕ್ಕಾಗಿ ನೊಂದ ಕಾರ್ಮಿಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೀರತ್​ನಲ್ಲಿ ನಡೆದಿದೆ.

dispute
ಮೃತ ವ್ಯಕ್ತಿ
author img

By

Published : Nov 10, 2020, 5:12 PM IST

ಮೀರತ್: ವೇತನ ನೀಡದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೀರತ್​ನ ಸಫ್ದರ್​ಗಂಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೋಲ್ಡ್ ಸ್ಟೋರೇಜ್ ನಲ್ಲಿ ಕಳೆದ ಆರು ತಿಂಗಳಿಂದ ವೇತನ ನೀಡದ ಕಾರಣಕ್ಕಾಗಿ ನವೆಂಬರ್ 2 ರಂದು ಕಾರ್ಮಿಕನೋರ್ವ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಾಯಾಳುವನ್ನು ಸಫ್ದರ್​ಗಂಜ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಕೋಲ್ಡ್ ಸ್ಟೋರೇಜ್ ಮಾಲೀಕ ಸತ್ಯವೀರ್ ಸಿಂಗ್​​​​​​, ಕಾರ್ಮಿಕ ಸೋನು ಎಂಬುವರಿಗೆ ಸಂಬಳ ನೀಡದ ಕಾರಣ ಅವರು ನೊಂದಿದ್ದರು. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಅಜಯ್ ಸಾಹ್ನಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸೋನು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸತ್ಯವೀರ್ ಸಿಂಗ್ ವಿರುದ್ಧ ಅವರ ಚಿಕ್ಕಪ್ಪ ರಮೇಶ್ ಚಂದ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.