ETV Bharat / bharat

40 ಗಂಟೆಗಳಿಂದ 60 ಅಡಿ ಆಳದ ಬೋರ್​ವೆಲ್​ನಲ್ಲಿ​ ಸಿಲುಕಿರುವ ಕಾರ್ಮಿಕ.. ಭರದಿಂದ ಸಾಗಿರುವ ರಕ್ಷಣಾ ಕಾರ್ಯ - ಭರದಿಂದ ಸಾಗಿರುವ ರಕ್ಷಣಾ ಕಾರ್ಯ

ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.

laborer trapped inside 60 feet deep borewell
60 ಅಡಿ ಆಳದ ಬೋರ್​ವೆಲ್​ ಒಳಗೆ ಸಿಲುಕಿರುವ ಕಾರ್ಮಿಕ
author img

By

Published : Aug 14, 2023, 5:12 PM IST

ಜಲಂಧರ್​​: ಪಂಜಾಬ್​ನ ಜಲಂಧರ್​ ಜಿಲ್ಲೆಯಲ್ಲಿ ಕಳೆದ 40 ಗಂಟೆಗಳಿಗೂ ಹೆಚ್ಚು ಕಾಲ 60-70 ಅಡಿ ಆಳದ ಬೋರ್​ವೆಲ್​ ಒಳಗೆ ಸಿಲುಕಿಕೊಂಡಿರುವ 55 ವರ್ಷದ ಕಾರ್ಮಿಕನನ್ನು ರಕ್ಷಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ದೆಹಲಿ- ಕತ್ರಾ ಎಕ್ಸ್​ಪ್ರೆಸ್​ವೇ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಕರ್ತಾರ್​ಪು- ಕಪುರ್ತಲಾ ರಸ್ತೆಯ ಬಸ್ರಾಮ್​ಪುರ ಗ್ರಾಮ ಬಳಿ ಶನಿವಾರ ಸಂಜೆ ಕಾರ್ಮಿಕ ಸುರೇಶ್​ ಎಂಬಾತ ಬೋರ್​ವೆಲ್​ ಒಳಗೆ ಸಿಲುಕೊಂಡಿದ್ದಾನೆ.

ಸುರೇಶ್​ ಹಾಗೂ ಮತ್ತೊಬ್ಬ ಕಾರ್ಮಿಕ ಪವನ್​ ಎಂಬಾತ ಕೊರೆಯುವ ಯಂತ್ರದ ಕೆಲ ಭಾಗಗಳನ್ನು ಬಿಡಿಸಲು ಬೋರ್​ವೆಲ್​ ಒಳಗೆ ಇಳಿದಿದ್ದರು. ಆದರೆ ಕೆಲಸ ಮುಗಿಸಿ ಪವನ್​ ಮೇಲಕ್ಕೆ ಬಂದಿದ್ದು, ಸುರೇಶ್​ ಮೇಲೆ ಮಣ್ಣು ಕುಸಿದ ಕಾರಣ ಹೊರಗೆ ಬರಲಾಗದೆ ಬೋರ್​ವೆಲ್​ ಒಳಗೆ ಸಿಕ್ಕಿಬಿದ್ದಿದ್ದಾನೆ. ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಸುರೇಶ್​ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದೆಹಲಿ- ಕತ್ರಾ ಎಕ್ಸ್​ಪ್ರೆಸ್​ ವೇ ಯೋಜನೆಯ ಕಾಮಗಾರಿ ಭಾಗವಾಗಿ ಪಿಲ್ಲರ್​ ನಿರ್ಮಿಸಲು ಈ ಬೋರ್​ವೆಲ್​ ಅಗೆಯಲಾಗಿದೆ.

ಶನಿವಾರದಿಂದ ಬೋರ್​ವೆಲ್​ ಒಳಗೆ ಸಿಲುಕಿರುವ ಸುರೇಶ್​: ಪ್ರಸ್ತುತ ಬೋರ್​ವೆಲ್​ ಒಳಗೆ ಸಿಲುಕಿಕೊಂಡಿರುವ ವ್ಯಕ್ತಿ ಹರಿಯಾಣದ ಜಿಂದ್​ ನಿವಾಸಿ. ಶನಿವಾರ ಸಂಜೆ 7 ಗಂಟೆಯಿಂದ ಬೋರ್​ವೆಲ್​ ಒಳಗೆ ಸಿಲುಕಿಕೊಂಡಿರುವ ಸುರೇಶ್​ನನ್ನು ಹೊರತೆಗೆಯಲು ಎನ್​ಡಿಆರ್​ಎಫ್​ ತಂಡ ನಿರಂತರವಾಗಿ ಕೆಲಸ ಮಾಡುತ್ತಿದ್ದರೂ, ರಕ್ಷಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಬೋರ್​ವೆಲ್​ ಸಮೀಪದಲ್ಲೇ ನೀರು ತುಂಬಿದ ಕೊಳ ನಿರ್ಮಾಣವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಎನ್​ಡಿಆರ್​ಎಫ್​ ಜಂಟಿ ರಕ್ಷಣಾ ಕಾರ್ಯ: ಸುರೇಶ್​ ಬೋರ್​ವೆಲ್​ ಒಳಗೆ ಸಿಲುಕಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಲಂಧರ್ ಜಿಲ್ಲಾಡಳಿತ ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಮಣ್ಣು ಅಗೆಯುವ ಯಂತ್ರಗಳು, ಸ್ಥಳದಲ್ಲಿ ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್ಸ್​ ಅನ್ನು ಕೂಡ ನಿಯೋಜಿಸಲಾಗಿದೆ. ಜಲಂಧರ್​ ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತ (ನಗರಾಭಿವೃದ್ಧಿ) ಜಸ್ಬೀರ್​ ಸಿಂಗ್​ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್​ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳದಲ್ಲಿ ಜಮಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಅಡೆತಡೆಗಳು: ಮಣ್ಣು ಮೆತ್ತಗಾಗಿದ್ದು, ತೆಗೆದಂತೆ ಮತ್ತೆ ಮತ್ತೆ ಕೆಳಗೆ ಬೀಳುತ್ತಿದೆ. ಇದರಿಂದಾಗಿ ರಕ್ಷಣಾ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ. 4 ರಿಂದ 5 ಜೆಸಿಬಿ ಯಂತ್ರಗಳು ನಿರಂತರವಾಗಿ ಮಣ್ಣು ತೆಗೆಯುತ್ತಿವೆ. ಇಲ್ಲಿಯವರೆಗೆ ಸುಮಾರು 120ಕ್ಕೂ ಹೆಚ್ಚು ಟಿಪ್ಪರ್​ಗಳಲ್ಲಿ ಮಣ್ಣು ತೆಗೆಯಲಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿ ನೋಡಿದರೆ ಸುರೇಶ್​ನನ್ನು ರಕ್ಷಿಸಲು ಇನ್ನೂ ಹಲವಾರು ಗಂಟೆಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಾಗರದಲ್ಲಿ ತೆರೆದ ಬಾವಿಗೆ ಬಿದ್ದ ಕಾಡು‌ಕೋಣ ರಕ್ಷಣೆ : ಕ್ರೇನ್​ ಮೂಲಕ ಯಶಸ್ವಿ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.