ETV Bharat / bharat

ಜಾತಿ ನಿಂದನೆ: ಕಾಲಿವುಡ್​ ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲು - ಕಾಲಿವುಡ್​ ನಟಿ ಮೀರಾ ಮಿಥುನ್​

ಜಾತಿ ನಿಂದನೆ ಆರೋಪದ ಮೇಲೆ ಕಾಲಿವುಡ್ ನಟಿ ಮೀರಾ ಮಿಥುನ್​ ವಿರುದ್ಧ ಇದೀಗ ದೂರು ದಾಖಲಾಗಿದ್ದು, ಸಂಕಷ್ಟ ಎದುರಾಗಿದೆ.

Meera Mithun
Meera Mithun
author img

By

Published : Aug 9, 2021, 10:41 PM IST

ಚೆನ್ನೈ: ಖಾಸಗಿ ರಿಯಾಲಿಟಿ ಶೋ ಹಾಗೂ ಅನೇಕ ಕಾಲಿವುಡ್​ ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಸಿದ್ಧ ನಟಿ ಮೀರಾ ಮಿಥುನ್​ ವಿರುದ್ಧ ಇದೀಗ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಅವರ ಮೇಲೆ ಕೇಳಿ ಬಂದಿದೆ.

Kollywood actor Meera Mithun
ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲು

ಕೆಲವು ದಿನಗಳ ಹಿಂದೆ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೋ ರಿಲೀಸ್​ ಆಗಿತ್ತು. ಅದರಲ್ಲಿ ದಲಿತ ಸಮುದಾಯದ ಸದಸ್ಯರು ಚಲನಚಿತ್ರ ಉದ್ಯಮ ತೊರೆಯುವಂತೆ ಒತ್ತಾಯಿಸುವ ವಿಡಿಯೋ ಇದಾಗಿತ್ತು. ಇದರಲ್ಲಿ ನಟಿ ಮೀರಾ ಮಿಥುನ್​ ಮಾತನಾಡಿದ್ದರು. ಇದಾದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿರಿ: ಖ್ಯಾತ ಮಲಯಾಳಂ ನಟಿ ಶರಣ್ಯ ಶಶಿ ನಿಧನ

ಇದರ ವಿರುದ್ಧ ಪ್ರತಿಭಟನೆ ಸಹ ನಡೆದಿದ್ದವು. ಅನೇಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಮೀರಾ ವಿರುದ್ಧ ಸೆಕ್ಷನ್​ 7ರ ಅಡಿ ದೂರು ದಾಖಲು ಮಾಡಲಾಗಿದೆ. ವಿದುತಲೈ ಸಿರುತ್ತೈಕಲ್​​ ಕಚ್ಚಿ ಪರವಾಗಿ ವನ್ನಿಯರಸು ದೂರು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಈ ಪ್ರಕರಣ ದಾಖಲಾಗಿದೆ. ಮೀರಾ ಮಿಥುನ್​ ಠಾಣಾ ಸೇರ್ಣ ಕೂಟಂ ಮತ್ತು 8 ತೊಟ್ಟಕಲ್​ ಚಿತ್ರ ಸೇರಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.