ಕೋಲ್ಕತ್ತಾ: ದುಬೈನಲ್ಲಿರುವ ಬುರ್ಜ್ ಖಲೀಫಾಗೆ ಸೆಡ್ಡು ಹೊಡೆದಿರುವ ಕೋಲ್ಕತ್ತಾದಲ್ಲಿ ಬುರ್ಜ್ ಖಲೀಫಾವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದು ಒರಿಜಿನಲ್ ಖಲೀಫಾ ಅಲ್ಲ. ಬದಲಾಗಿ 5 ದಿನಗಳ ದುರ್ಗಾ ಪೂಜೆಯ ನಿಮಿತ್ತ ಹಾಕಿರುವ ಸೆಟ್.
-
Now #Kolkata has its own #BurjKhalifa - at the Sreebhumi Sporting Club #DurgaPuja pandal !
— ইন্দ্রজিৎ | Indrajit (@iindrojit) October 6, 2021 " class="align-text-top noRightClick twitterSection" data="
Known as #Bengal minister @sujitboseaitc's puja, this pandal is already grabbing eye balls even before it's fully complete !
Video courtesy: Somjit Bhattacharyya / Youtube pic.twitter.com/8MdfGa0a8Q
">Now #Kolkata has its own #BurjKhalifa - at the Sreebhumi Sporting Club #DurgaPuja pandal !
— ইন্দ্রজিৎ | Indrajit (@iindrojit) October 6, 2021
Known as #Bengal minister @sujitboseaitc's puja, this pandal is already grabbing eye balls even before it's fully complete !
Video courtesy: Somjit Bhattacharyya / Youtube pic.twitter.com/8MdfGa0a8QNow #Kolkata has its own #BurjKhalifa - at the Sreebhumi Sporting Club #DurgaPuja pandal !
— ইন্দ্রজিৎ | Indrajit (@iindrojit) October 6, 2021
Known as #Bengal minister @sujitboseaitc's puja, this pandal is already grabbing eye balls even before it's fully complete !
Video courtesy: Somjit Bhattacharyya / Youtube pic.twitter.com/8MdfGa0a8Q
ಪ್ರತಿ ವರ್ಷ ಒಂದೊಂದು ರೀತಿಯ ಥೀಮ್‌ನಲ್ಲಿ ದೇವಿ ಪ್ರತಿಷ್ಠಾಪನೆಗೆ ಸೆಟ್‌ಗಳನ್ನು ಹಾಕಲಾಗುತ್ತದೆ. ಕೋಲ್ಕತ್ತಾದಲ್ಲಿ ಅದ್ದೂರಿಯಾಗಿ ದುರ್ಗಾ ಸಂಭ್ರಮಾಚರಣೆ ಮಾಡುವವರ ಪೈಕಿ ಒಂದಾಗಿರುವ ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ದುಬೈನ ಬುರ್ಜ್ ಖಲೀಫಾ ಮಾದರಿಯ ಸೆಟ್‌ಹಾಕಿ ಅದಕ್ಕೆ ಲೇಸರ್ ಬೆಳಕಿನ ಸ್ಪರ್ಶ ನೀಡಿದೆ. ನೋಡುಗರಿಗೆ ಇದು ಥೇಟ್ ದುಬೈನ ಬುರ್ಜ್ ಖಲೀಫಾ ರೀತಿಯಲ್ಲೇ ಕಾಣುತ್ತಿದೆ.
ಈ ಸೆಟ್ ಒಳಗೆ ದುರ್ಗಾ ದೇವಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಸದ್ಯ ಲೈಸರ್ ಬೆಳಕಿನ ಬುರ್ಜ್ ಖಲೀಫಾ ಸೆಟ್ ವಿಡಿಯೋ ಭಾರಿ ವೈರಲ್ ಆಗ್ತಿದೆ.
ನಗರದ ಎಲ್ಲೆಡೆ ದೇವಿ ದುರ್ಗಾ ದೇವಿ ಪ್ರತಿಷ್ಠಾಪಿಸಿ ವಿವಿಧ ಹೂ, ಬಣ್ಣಗಳಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ. ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹಾಗೂ ವಿಜಯ ದಶಮಿಯನ್ನು ಇಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.