ETV Bharat / bharat

ಕೊಹ್ಲಿ ನಾಯಕತ್ವ ಹೊಗಳಿ,ಇಲ್ಲಿನ ಪಿಚ್​ಗಳಲ್ಲಿ ಬೌಲಿಂಗ್​ ಮಾಡುವುದು ವಿಭಿನ್ನ ಅನುಭವ ಎಂದ ಜೆಮೀಸನ್​! - ವಿರಾಟ್​ ಕೊಹ್ಲಿ ನಾಯಕತ್ವ

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುವ ಅವಕಾಶ ಪಡೆದುಕೊಂಡಿರುವ ಜೆಮೀಸನ್​ ವಿರಾಟ್​ ಕೊಹ್ಲಿ ನಾಯಕತ್ವ ಹಾಡಿ ಹೊಗಳಿದ್ದಾರೆ.

Jamieson
Jamieson
author img

By

Published : Apr 17, 2021, 7:00 PM IST

ಚೆನ್ನೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಆರ್​​ಸಿಬಿ ಪರ ಕಣಕ್ಕಿಳಿಯುತ್ತಿರುವ ನ್ಯೂಜಿಲ್ಯಾಂಡ್ ಆಲ್​ರೌಂಡರ್​ ಕೈಲ್​ ಜೆಮೀಸನ್​​ ವಿರಾಟ್​ ಕೊಹ್ಲಿ ನಾಯಕತ್ವ ಹಾಡಿ ಹೊಗಳಿದ್ದಾರೆ.

6 ಅಡಿ 8 ಇಂಚು ಎತ್ತರದ ಬೌಲರ್ ಜೆಮೀಸನ್​​ ಆಡಿರುವ ಎರಡು ಐಪಿಎಲ್​​ ಪಂದ್ಯಗಳಿಂದ 2ವಿಕೆಟ್ ಪಡೆದುಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಅವರ ನಾಯಕತ್ವದ ಶೈಲಿ ನಮ್ಮ ಆಲೋಚನೆ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸುತ್ತದೆ ಎಂದಿರುವ ಅವರು, ಭಾರತೀಯ ಟ್ರ್ಯಾಕ್​ಗಳಲ್ಲಿ ಬೌಲಿಂಗ್​ ಮಾಡುವುದು ವಿಭಿನ್ನ ಅನುಭವ ಎಂದಿದ್ದಾರೆ.

ಭಾರತೀಯ ಮೈದಾನ ನಿಧಾನಗತಿಯ ಟ್ರ್ಯಾಕ್​ ಹೊಂದಿದ್ದು, ಇಲ್ಲಿ ಬೌಲಿಂಗ್​ ಮಾಡಲು ವಿಭಿನ್ನ ಕೌಶಲ್ಯ ಅವಶ್ಯಕತೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಕೊಹ್ಲಿ ಓರ್ವ ಅನುಭವಿ ನಾಯಕ. ಓರ್ವ ಕೌಶಲ್ಯಪೂರ್ಣ ನಾಯಕನಾಗಿದ್ದು, ಅವರ ಆಟ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುಂಚಿತವಾಗಿ ಜೆಮೀಸನ್ ಮಾತನಾಡಿದ್ದಾರೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ಈ ಟಾಸ್ಕ್​ ಪೂರೈಸಿ: ಪಡಿಕ್ಕಲ್​​ಗೆ ಈ ಚಾಲೆಂಜ್​ ನೀಡಿದ ಲಾರಾ!

ನ್ಯೂಜಿಲ್ಯಾಂಡ್ ತಂಡದ ಪರ 8 ಟಿ-20, 5 ಏಕದಿನ ಹಾಗೂ 6 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಇದೀಗ ಐಪಿಎಲ್​ನಲ್ಲಿ ಭಾಗಿಯಾಗಿದ್ದು, ಆರ್​ಸಿಬಿ ಫ್ರಾಂಚೈಸಿ ಅವರಿಗೆ ಬರೋಬ್ಬರಿ 15 ಕೋಟಿ ರೂ ನೀಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.