ನವದೆಹಲಿ: ನವೆಂಬರ್ 12 ರಂದು ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲ್ಲಿದ್ದು, ಆ ಸಂದರ್ಭದಲ್ಲಿ ಎಲ್ಲ ಹಿರಿಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿಯ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
ಖರ್ಗೆ ಅವರು ಉದ್ಯಮ, ಸಾಮಾಜಿಕ ಕ್ಷೇತ್ರ ಮತ್ತು ವಿವಿಧ ಸಮುದಾಯಗಳಿಗೆ ಸಂಬಧಿಸಿದಂತೆ ಪಕ್ಷದ ಕಲ್ಯಾಣ ಕಾರ್ಯಸೂಚಿಯಲ್ಲಿ ವಿವರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಬುಧವಾರ ತಿಳಿಸಿವೆ.
ಉದ್ಯೋಗ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ಸಾಧ್ಯತೆ: ಈ ಬಾರಿಯ ಪ್ರಣಾಳಿಕೆಯು ಉದ್ಯೋಗಗಳಿಗೆ ,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಒತ್ತು ನೀಡಬಹುದು ಮತ್ತು 5 ಲಕ್ಷ ಸರ್ಕಾರಿ ಉದ್ಯೋಗಗಳನ್ನು ದೊರಕಿಸಬಹುದು ಮತ್ತು ಒಂದು ವರ್ಷದೊಳಗೆ ಗುತ್ತಿಗೆ ವ್ಯವಸ್ಥೆ ಕೊನೆಗೊಳಿಸಬಹುದು ಹಾಗೆ ಎರಡು ವರ್ಷಗಳಲ್ಲಿ ಹೆಚ್ಚುವರಿ 5 ಲಕ್ಷ ಉದ್ಯೋಗಗಳನ್ನು ಮತ್ತು 2024 ರ ವೇಳೆಗೆ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವತ್ತ ಗಮನಹರಿಸಲಿದೆ. ಇವುಗಳಲ್ಲಿ ಸುಮಾರು 5 ಲಕ್ಷ ಉದ್ಯೋಗಗಳು ಮಹಿಳೆಯರಿಗೆ ಮೀಸಲಾಗಿರಬಹುದು.
ಯುವಕರಿಗೆ 2 ಸಾವಿರ ನಿರುದ್ಯೋಗ ಭತ್ಯೆ ಘೋಷಣೆ ಸಾಧ್ಯತೆ: ಯುವಕರಿಗೆ ತಲಾ 2,000 ರೂಪಾಯಿ ನಿರುದ್ಯೋಗ ಭತ್ಯೆ, ರೈತರನ್ನು ಗುರಿಯಾಗಿಸಿಕೊಂಡು ಪಣಾಳಿಕೆ ಭರವಸೆಯನ್ನು ನೀಡುವ ಸಾಧ್ಯತೆಗಳಿವೆ. ಪ್ರಣಾಳಿಕೆ ಸುಮಾರು 40 ವಿಧಾನಸಭಾ ಸ್ಥಾನಗಳ ಮೇಲೆ ಪ್ರಭಾವ ಬೀರುವ ಬುಡಕಟ್ಟು ಜನಾಂಗದವರ ಜೀವನ ಪರಿಸ್ಥಿತಿ ಸುಧಾರಿಸಲು ಹಲವಾರು ಯೋಜನೆಗಳ ಜೊತೆಗೆ 3 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ಹಾಲು - ಸಹಕಾರಿ ಸಂಘಗಳಿಗೆ ಲೀಟರ್‌ಗೆ ರೂ. 5 ಸಬ್ಸಿಡಿಯ ಭರವಸೆ ನೀಡಬಹುದು ಎನ್ನಲಾಗಿದೆ.
ಹಾಗೆಯೇ ಆರೋಗ್ಯ ರಕ್ಷಣೆಯಲ್ಲಿ, ಪ್ರಣಾಳಿಕೆಯು ಕೋವಿಡ್ ಸಂತ್ರಸ್ತರ 3 ಲಕ್ಷ ಕುಟುಂಬಗಳಿಗೆ ರೂ 10 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು ರೂ 4 ಲಕ್ಷದ ಸಹಾಯದ ಭರವಸೆ ನೀಡಬಹುದು ಎಂದು ಪಕ್ಷ ಮೂಲಗಳು ತಿಳಿಸಿವೆ.
ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಅಸಮಾಧಾನ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ "ಅಸಂವಿಧಾನಿಕ" ಬಿಡುಗಡೆ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. 2002 ರ ಗಲಭೆಯಲ್ಲಿ ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆ ಮತ್ತು ಇತ್ತೀಚಿನ ಮೋರ್ಬಿ ಸೇತುವೆಯ ಕುಸಿತದ ಬಗ್ಗೆ ಕಾಂಗ್ರೆಸ್ ಉನ್ನತ ನಾಯಕತ್ವವು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಸೇತುವೆ ದುರಸ್ತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ಮೊರ್ಬಿ ದುರ್ಘಟನೆ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಾಸ್ತವವಾಗಿ, ರಾಜ್ಯವು ಹಲವಾರು ಸಾಮಾಜಿಕ ಕಲ್ಯಾಣ ಸೂಚಕಗಳಲ್ಲಿ ಹಿಂದುಳಿದಿದೆ ಎಂದು ಗುಜರಾತ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅಮಿತ್ ಚಾವ್ಡಾ ಗಂಭೀರ ಆರೋಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 15 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್