ETV Bharat / bharat

ಶೃಂಗಾರ ಗೌರಿ-ಜ್ಞಾನವಾಪಿ ಕೇಸ್​​​ಗೆ ಮಹತ್ವದ ತಿರುವು: ಪ್ರಕರಣ ಹಿಂಪಡೆದುಕೊಂಡ ಜಿತೇಂದ್ರ ಸಿಂಗ್ ವಿಶೆನ್ ಕುಟುಂಬ? - ಜಿತೇಂದ್ರ ಸಿಂಗ್ ವಿಶೆನ್

ವಾರಾಣಸಿಯ ಶೃಂಗಾರ ಗೌರಿ-ಜ್ಞಾನವಾಪಿ ಪ್ರಕರಣವನ್ನು ಧರ್ಮವಿರೋಧಿಗಳ ಕಿರುಕುಳದಿಂದಾಗಿ ಹಿಂಪಡೆಯುವುದಾಗಿ ಪ್ರಮುಖ ವಾದಿಯಾಗಿದ್ದ ಜಿತೇಂದ್ರ ಸಿಂಗ್ ವಿಶೆನ್ ಅಚ್ಚರಿ ಘೋಷಣೆ ಮಾಡಿದ್ದಾರೆ.

ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣ
ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣ
author img

By

Published : Jun 5, 2023, 9:37 AM IST

Updated : Jun 5, 2023, 9:49 AM IST

ವಾರಾಣಸಿ(ಉತ್ತರಪ್ರದೇಶ): ವಾರಾಣಸಿಯ ಶೃಂಗಾರ ಗೌರಿ-ಜ್ಞಾನವಾಪಿ ಪ್ರಕರಣವು ಅಚ್ಚರಿ ತಿರುವನ್ನು ಪಡೆದುಕೊಂಡಿದೆ. ಜ್ಞಾನವಾಪಿ ಮಸೀದಿ ಪ್ರಕರಣ ಹಲವು ವರ್ಷಗಳಿಂದ ವಿವಾದದಲ್ಲಿದೆ. ಈ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಭಾಗವಾಗಿತ್ತು ಎಂಬುದು ಹಿಂದೂ ಸಮುದಾಯದ ವಾದವಾಗಿದೆ. ಈ ಮಸೀದಿಯ ಹೊರ ಗೋಡೆಯಲ್ಲಿ ಶೃಂಗಾರ ಗೌರಿ ಸೇರಿದಂತೆ ಹಿಂದೂ ದೇವರ ವಿಗ್ರಹಗಳಿವೆ.

ಇವುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಮಹಿಳೆಯರ ಫಿರ್ಯಾದಿಗಳಲ್ಲಿ ಒಬ್ಬರಾದ ರಾಖಿ ಸಿಂಗ್ ಅವರ ಮಾವ ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಶೆನ್ ಈ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಪ್ರಕರಣವನ್ನು ಸ್ಪರ್ಧಿಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆ ಮತ್ತು "ಧರ್ಮವಿರೋಧಿಗಳ ಕಿರುಕುಳ"ದಿಂದಾಗಿ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ವಿಶೆನ್ ಹೇಳಿದ್ದಾರೆ.

ದೇಶ ಮತ್ತು ಧರ್ಮದ ಹಿತದೃಷ್ಟಿಯಿಂದ ನಾವು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ಎಲ್ಲಾ ಪ್ರಕರಣಗಳ ಮನವಿಯಿಂದ ನಾನು ಮತ್ತು ನನ್ನ ಕುಟುಂಬ ಸದಸ್ಯರು ಹಿಂದೆ ಸರಿಯಲು ನಿರ್ಧರಿಸಿದ್ದೇವೆ. ನಾಲ್ವರು ಮಹಿಳೆಯರೊಂದಿಗೆ ನನ್ನ ಸೊಸೆ ರಾಖಿ ಸಿಂಗ್ ಪ್ರಕರಣವನ್ನು ದಾಖಲಿಸಿದ್ದರು. ಶೃಂಗಾರ್ ಗೌರಿ ಸ್ಥಳದಲ್ಲಿ ದೈನಂದಿನ ಪೂಜೆಗೆ ಅನುಮತಿ ಕೋರಿ ರಾಖಿ ಸಿಂಗ್ ಮತ್ತು ಇತರ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇವರ ಪರವಾಗಿ ನಾನು ಮುಖ್ಯ ವಾದಿಯಾಗಿ ಸಂಬಂಧ ಹೊಂದಿದ್ದೇನೆ.

ರಾಖಿ ಸಿಂಗ್ ಪರವಾಗಿ ನಾನು ಶೃಂಗಾರ್ ಗೌರಿ ಪ್ರಕರಣವನ್ನು ವಾದಿಸಲು ತೊಡಗಿದ್ದಾಗ, ನನ್ನ ಪತ್ನಿ ಕಿರಣ್ ಸಿಂಗ್ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಆದಿ ವಿಶ್ವೇಶ್ವರ ವಿರಾಜಮಾನನ ದೈನಂದಿನ ಪೂಜೆಗೆ ಅನುಮತಿ ಕೋರಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಗಳು ದಾಖಲಾದಾಗಿನಿಂದ, ನನಗೆ ಹಾಗೂ ನನ್ನ ಕುಟುಂಬಕ್ಕೆ ಹಿಂದೂ ಧರ್ಮದ ವಿರೋಧಿಗಳು ಕಿರುಕುಳ ನೀಡುತ್ತಿದ್ದಾರೆ. ಈ ಜನರು ನಮ್ಮನ್ನು ದ್ರೋಹಿ ಎಂದು ಘೋಷಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಪರವಾಗಿಯೇ ಸಮಾಜವು ನಿಂತಿದೆ ಎಂದಿದ್ದು ತಮಗಾಗುತ್ತಿರುವ ಅಸಹಾಯಕತೆಯಿಂದ ಈ ಪ್ರಕರಣವನ್ನು ಹಿಂದೆ ಪಡೆಯುತ್ತಿದ್ದೇವೆ ಎಂದು ವಿಶೆನ್ ತಿಳಿಸಿದ್ದಾರೆ.

ಅಲ್ಲದೆ, ‘‘ಕೆಲವು ತಿಂಗಳ ಹಿಂದೆ ಪ್ರಕರಣದ ವಿಚಾರಣೆಗೆ ಅಗತ್ಯವಾದ ಹಣ ಹೊಂದಿಸಲು ನನ್ನ ಕಾರನ್ನು ಮಾರಾಟ ಮಾಡಿದ್ದೆ. ಆದರೆ ಈಗ ನಾನು ಬಹಳ ಸೀಮಿತ ಸಂಪನ್ಮೂಲಗಳು ಮತ್ತು ಶಕ್ತಿಯಿಂದ ಉಳಿದಿದ್ದೇನೆ, ಇದರಿಂದಾಗಿ ನಾನು ಇನ್ನು ಮುಂದೆ ಪ್ರಕರಣಗಳ ಮನವಿ ಮಾಡಲು ಸಾಧ್ಯವಿಲ್ಲ. ನನ್ನ ಕುಟುಂಬ ಸದಸ್ಯರು ಮತ್ತು ನಾನು ಈ ಪ್ರಕರಣಗಳ ಮನವಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ವಿಶೆನ್ ಪರ ವಕೀಲ ಶಿವಂ ಗೌರ್ ಕೂಡ ಪ್ರಕರಣಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಹಿಂದೂ ವಾದಿಗಳ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ, "ಜಿತೇಂದ್ರ ಸಿಂಗ್ ವಿಶೆನ್ ಅವರು ಪ್ರಕರಣದ ಮನವಿಯಿಂದ ಹಿಂದೆ ಸರಿಯುವಂತೆ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ವಿಶೆನ್ ತಮ್ಮ ನಿರ್ಧಾರದ ಬಗ್ಗೆ ಇದುವರೆಗೆ ನ್ಯಾಯಾಲಯಕ್ಕೆ ಲಿಖಿತ ಅರ್ಜಿ ಸಲ್ಲಿಸಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ : ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ

Last Updated : Jun 5, 2023, 9:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.