ETV Bharat / bharat

ಕೇರಳದಲ್ಲಿ ಶಿಗೆಲ್ಲಾ ಸೋಂಕು ಮತ್ತೆ ಪತ್ತೆ.. ಏನಿದು ಶಿಗೆಲ್ಲಾ? - ಶಿಗೆಲ್ಲಾ ಸೋಂಕಿನ ಲಕ್ಷಣಗಳು

ಮತ್ತೆ ಕೇರಳದಲ್ಲಿ ಶಿಗೆಲ್ಲಾ ಸೋಂಕು ಕಾಣಿಸಿಕೊಂಡಿದೆ. ಏಳು ವರ್ಷದ ಬಾಲಕಿಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದು, ಏಪ್ರಿಲ್ 21 ಮತ್ತು 22ರಂದು ಆಕೆಯಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ.

Kerala's Kozhikode reports shigella infection again
ಕೇರಳದಲ್ಲಿ ಶಿಗೆಲ್ಲಾ ಸೋಂಕು ಮತ್ತೆ ಪತ್ತೆ
author img

By

Published : Apr 28, 2022, 7:39 AM IST

ಕೋಝಿಕ್ಕೋಡ್​, ಕೇರಳ: ಶಿಗೆಲ್ಲಾ ಸೋಂಕು ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ಕೋಝಿಕ್ಕೋಡ್​ನ ಪುಥಿಯಪ್ಪ ಎಂಬಲ್ಲಿ ಶಿಗೆಲ್ಲಾ ಸೋಂಕು ಬುಧವಾರ ಕಾಣಿಸಿಕೊಂಡಿದೆ. ಏಳು ವರ್ಷದ ಬಾಲಕಿಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದ್ದು, ಏಪ್ರಿಲ್ 21 ಮತ್ತು 22ರಂದು ಬಾಲಕಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಆರೋಗ್ಯ ತಜ್ಞರು ಹೇಳುವಂತೆ ಸೋಂಕು ಆಕೆಯಿಂದ ಬೇರೆಯವರಿಗೆ ಹರಡಿಲ್ಲ.

ನೆರೆಮನೆಯ ಮತ್ತೊಬ್ಬ ಮಗುವಿಗೂ ಕೂಡಾ ಶಿಗೆಲ್ಲಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಬಾಲಕಿ ತಲಕ್ಕುಳತ್ತೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಇಬ್ಬರಿಗೂ ಮಕ್ಕಳಿಗೂ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಗೆಲ್ಲಾ ಹೇಗೆ ಬರುತ್ತದೆ? ಲಕ್ಷಣಗಳೇನು?: ಶಿಗೆಲ್ಲಾ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾದಿಂದ ಶಿಗೆಲ್ಲಾ ಉಂಟಾಗುತ್ತದೆ. ಕಲುಷಿತ ನೀರು ಮತ್ತು ಅಶುಚಿಯಾದ ಆಹಾರದಿಂದ ಈ ಸೋಂಕು ಹರಡುತ್ತದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಅತಿಸಾರ, ಜ್ವರ, ಕಿಬ್ಬೊಟ್ಟೆಯ ನೋವು, ವಾಂತಿ, ಆಯಾಸ. ಶಿಗೆಲ್ಲಾ ಬ್ಯಾಕ್ಟೀರಿಯಾವು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅತಿಸಾರದ ಜೊತೆಗೆ ರಕ್ತಸ್ರಾವ ಕೂಡಾ ಉಂಟಾಗುತ್ತದೆ.

ಜ್ವರ, ಅತಿಸಾರ, ನಿರ್ಜಲೀಕರಣ ಮತ್ತು ಆಯಾಸ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಐದು ವರ್ಷದೊಳಗಿನ ಮಕ್ಕಳು ರೋಗಲಕ್ಷಣಗಳು ಉಲ್ಬಣಗೊಂಡರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾಳಜಿ ವಹಿಸದಿದ್ದರೆ, ರೋಗವು ಬಹಳ ಬೇಗನೆ ಹರಡುತ್ತದೆ. ನಿರಂತರ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವು ಸಾವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಪುಲ್ವಾಮಾ ಎನ್​ಕೌಂಟರ್​: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.