ETV Bharat / bharat

ಚಹಾದಲ್ಲಿ ಸಕ್ಕರೆ ಕಡಿಮೆ ಇತ್ತೆಂದು ಹೋಟೆಲ್​​ ಮಾಲೀಕನಿಗೆ ಚಾಕುವಿನಿಂದ ಇರಿದ ಗ್ರಾಹಕ! - serving tea with less sugar

ಚಹಾದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇತ್ತು ಎಂದು ಗ್ರಾಹಕ ಮತ್ತು ಹೋಟೆಲ್​ ಮಾಲೀಕನ ಮಧ್ಯೆ ನಡೆದ ವಾಗ್ವಾದದಲ್ಲಿ ನೆತ್ತರು ಹರಿದಿದೆ. ಸಿಟ್ಟಿಗೆದ್ದ ಗ್ರಾಹಕ ಮಾಲೀಕನನ್ನು ಚಾಕುವಿನಿಂದ ಇರಿದಿದ್ದಾನೆ.

tea-with-less-sugar
ಹೋಟೆಲ್​​ ಮಾಲೀಕನಿಗೆ ಚಾಕುವಿನಿಂದ ಇರಿದ ಗ್ರಾಹಕ
author img

By

Published : Jan 4, 2023, 10:23 AM IST

ಮಲಪ್ಪುರಂ (ಕೇರಳ): ಖರೀದಿಸಿದ ಚಹಾದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇತ್ತು ಎಂಬ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಹೋಟೆಲ್​​ ಮಾಲೀಕನನ್ನು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಕೇರಳದಲ್ಲಿ ಮಂಗಳವಾರ ನಡೆದಿದೆ. ಮಾಲೀಕ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿರುವ ಟಿಎ ಹೋಟೆಲ್​​ನಲ್ಲಿ ಪ್ರಕರಣ ಜರುಗಿದೆ.

ಆರೋಪಿ ಸುಬೈರ್​ ಎಂಬಾತ ರೆಸ್ಟೋರೆಂಟ್​ನಲ್ಲಿ ಚಹಾ ಖರೀದಿಸಿದ್ದಾನೆ. ಕುಡಿದಾಗ ಸಕ್ಕರೆ ಪ್ರಮಾಣ ಕಡಿಮೆ ಇದೆ ಎಂದು ವಾದಿಸಿದ್ದಾನೆ. ಹೋಟೆಲ್​​ ಮಾಲೀಕ ಕೂಡ ಇದಕ್ಕೆ ಜವಾಬು ನೀಡಿದ್ದಾನೆ. ಇಬ್ಬರ ಸ್ವಲ್ಪ ಸಮಯ ಕಿತ್ತಾಟ ನಡೆದಿದೆ.

ಈ ವೇಳೆ ಹೋಟೆಲ್​​ನಿಂದ ಹೊರಹೋದ ಸುಬೈರ್​ ಮತ್ತೆ ವಾಪಸ್​ ಬಂದು ಏಕಾಏಕಿ ಮಾಲೀಕ ಮನಾಫ್​ ಮೇಲೆ ದಾಳಿ ಮಾಡಿ, ತನ್ನಲ್ಲಿದ್ದ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮನಾಫ್​ರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. 'ದೇಹದಲ್ಲಿ ಹಲವು ಬಾರಿ ಚಾಕು ಹೊಕ್ಕಿದ್ದು, ಒಂದೆಡೆ ತೀವ್ರ ಸ್ವರೂಪದ ಗಾಯವಾಗಿದೆ' ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಬಳಿಕ ಆರೋಪಿ ವಿರುದ್ಧ ಹೋಟೆಲ್​​​ ಸಿಬ್ಬಂದಿ ದೂರು ನೀಡಿದ್ದು, ಸುಬೈರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಖಂಡಿಸಿ ವರ್ತಕರು ಹರತಾಳ ನಡೆಸಿದರು.

ಇದನ್ನೂ ಓದಿ: ಹತ್ಯೆ ಪ್ರಕರಣ: ಅಮಾನತಾಗಿರುವ ಬಿಜೆಪಿ ಮುಖಂಡನ ಹೋಟೆಲ್ ನೆಲಸಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.